Bagalakote: ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್; ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು, ಆಗಿದ್ದೇನು?

Published : Aug 24, 2026, 11:18 AM IST
BGK Power Bank

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಯುವಕನೊಬ್ಬನ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಗಾಯಗಳಾಗಿವೆ. ಘಟನೆಯಲ್ಲಿ ಕಾಲು, ಹೊಟ್ಟೆ ಬಳಿ ಸುಟ್ಟ ಗಾಯಗಳಾಗಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಾಗಲಕೋಟೆ: ಜೇಬಲ್ಲಿ ಇಟ್ಟುಕೊಂಡಿದ್ದ ಪವರ್ ಬ್ಯಾಂಕ್‌ ಬ್ಲಾಸ್ಟ್ ಆಗಿ ಯುವ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಸಿದ್ದು ಎಂಬ ಯುವಕ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಮಖಂಡಿ ಬಸ್ ನಿಲ್ದಾಣದ ಬಳಿಯ ಎಟಿಎಮ್ ಹತ್ತಿರ ಘಟನೆ ನಡೆದಿದ್ದು, ಏಕಾಏಕಿ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್ ಆದ ಕಾರಣ ಯುವಕ ಕಾಲು, ಹೊಟ್ಟೆ, ಸೊಂಟದ ಬಳಿ ಗಾಯಗಳಾಗಿದೆ.

ಜೇಬಲ್ಲೇ ಸ್ಫೋಟಗೊಂಡ ಪವರ್ ಬ್ಯಾಂಕ್! ಯುವಕನ ಸ್ಥಿತಿ ಏನು?

ಘಟನೆಯಲ್ಲಿ ಪವರ್ ಬ್ಯಾಂಕ್ ಸುಟ್ಟು ಕರಕಲಾಗಿದ್ದು, ಗಾಯಾಳು ಯುವಕ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅದೃಷ್ಟವಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆತ ಚೇತರಿಕೆ ಕಾಣುತ್ತಿದ್ದು, ಯುವಕನ ಶರ್ಟ್ ಹಾಗೂ ಪ್ಯಾಂಟ್ ಬೆಂಕಿಯಿಂದ ಸುಟ್ಟು ಹೋಗಿದೆ.

ಘಟನೆ ಬಗ್ಗೆ ಮಾತನಾಡಿರುವ ಯುವಕನ ತಂದೆ, ನಮ್ಮ ಮಗ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ. ಹಣ ತೆಗೆದುಕೊಂಡು ಬರಲು ಮನೆಯಿಂದ ಎಟಿಎಂ ಬಳಿ ಸಂದರ್ಭದಲ್ಲಿ ಏಕಾಏಕಿ ಪ್ಯಾಂಡ್ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಸುಟ್ಟ ಗಾಯಗಳಾಗಿರುವ ಕಾರಣ ಆತನಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಆತ ಯಾವ ಕಂಪನಿಯ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಗಮನ ಸೆಳೆದ ಹಗ್ಗ ಜಗ್ಗಾಟ ಸ್ಪರ್ಧೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಭರ್ಜರಿ ಹಗ್ಗ ಜಗ್ಗಾಟ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ಲಕ್ಷ್ಮಿ ದೇವಿ ಜಾತ್ರೆ ನಿಮಿತ್ಯ ಹಗ್ಗ ಜಗ್ಗಾಟ ಸ್ಪರ್ಧೆ ಹಮ್ಮಿಕೊಂಡಿತ್ತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತಂಡ ತಂಡಗಳಾಗಿ ಭಾಗವಹಿಸಿದ ಜನ, ಇಕ್ಕೆಲಗಳಲ್ಲಿ ನಿಂತು ಸ್ಪರ್ಧೆಯನ್ನು ನೋಡಿ ಖುಷಿಪಟ್ಟು ಸ್ಥಳೀಯರು ಕೇಕೆ ಹಾಕಿದರು.

ಹಗ್ಗ ಜಗ್ಗಾಟ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನದ ಗೌರವ ನೀಡಲಾಯಿತು. ಮೊದಲ ಬಹುಮಾನ 15,001 ರೂ., ದ್ವಿತೀಯ ಬಹುಮಾನ 10,001 ರೂ., ತೃತೀಯ ಬಹುಮಾನ 7,501 ರೂ. ಸೇರಿದಂತೆ ಮೊದಲ 6 ವಿಜೇತ ತಂಡಗಳಿಗೆ ಬಹುಮಾನ ನೀಡಿ ಜಾತ್ರಾ ಕಮಿಟಿ ಗೌರವಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ 2 ರೈಲು ನಿಲ್ದಾಣಗಳಲ್ಲಿ 6 ಹೊಸ ಪ್ಲಾಟ್‌ಫಾರ್ಮ್, ₹560 ಕೋಟಿ ವೆಚ್ಚದ ಯೋಜನೆಗೆ ಗ್ರೀನ್ ಸಿಗ್ನಲ್!
ಫ್ರೀಡಂ ಪಾರ್ಕ್‌ನ ನೂತನ ಕಟ್ಟಡದಲ್ಲಿ ಪ್ರತಿಭಟನೆ ಮಾಡಲು 1 ಲಕ್ಷ ರೂಪಾಯಿ ಬಾಡಿಗೆ!