ನರ್ಸ್, ಆಶಾ ಕಾರ್ಯಕರ್ತೆಯರ‌ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು

By Suvarna NewsFirst Published Jul 7, 2020, 1:29 PM IST
Highlights

ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸುತ್ತಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು(ಜು.07): ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸುತ್ತಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.

ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಘಟನೆ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಸಚಿವ ಶ್ರೀರಾಮುಲು ಆಶಾ ಕಾರ್ಯಕರ್ತೆಯರು ಮತ್ತು ನರ್ಸ್ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುರುಕಲು ಸೇತುವೇಲಿ ಉಕ್ಕಿ ಹರಿಯೋ ನದಿ ದಾಟಿದ ಆಶಾ ಕಾರ್ಯಕರ್ತೆ, ವಿಡಿಯೋ ನೋಡಿ

ಟ್ವಿಟರ್ ನಲ್ಲಿ ಸೇವೆ ಶ್ಲಾಘಿಸಿ ಶ್ರೀರಾಮುಲು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸಿದ್ದಾರೆ. ದುರ್ಗಮ ಹಾದಿಯಲ್ಲಿ ಸೇತುವೆ ದಾಟಿ ಆರೋಗ್ಯ ಸೇವೆ ನೀಡಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುರಿಯುತ್ತಿರೋ ಮಳೆ ಮಧ್ಯೆ ಸೇವೆ ಮಾಡುತ್ತಿದ್ದಾರೆ. ರಭಸವಾಗಿ ಹರಿಯೋ ನದಿ ದಾಟಿ ಜೀವ ಕೈಯ್ಯಲ್ಲಿ ಹಿಡಿದು ಸೇವೆ ಸಲ್ಲಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಟ್ವೀಟ್ ಮಾಡಿದ್ದಾರೆ.

"

click me!