ಪರಿಹಾರ ತರದ ಯಡಿಯೂರಪ್ಪರನ್ನು ಬಲಿಷ್ಠ ಸಿಎಂ ಅನ್ನಬೇಕಾ?: ಸಿದ್ದರಾಮಯ್ಯ

By Web Desk  |  First Published Oct 2, 2019, 2:33 PM IST

ಕೇಂದ್ರ ಸರ್ಕಾರದಿಂದ ಪ್ರವಾಹದ ಪರಿಹಾರ ತರಲು ಸಾಧ್ಯವಾಗದ ಬಿಎಸ್ ವಿ ಅವರನ್ನು ಸ್ಟ್ರಾಂಗ್‌ ಸಿಎಂ ಎನ್ನಬೇಕಾ ಎಂದ ಸಿದ್ದರಾಮಯ್ಯ| ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹಕ್ಕೆ ಪರಿಹಾರ ತರುವಲ್ಲಿ ವಿಫಲವಾಗಿರುವುದರಿಂದಲೇ ಹಾಗೆ ಮಾತನಾಡಿದ್ದೇನೆ| ಬಿಎಸ್‌ವೈ ತಂತಿ ಮೇಲೆ ನಡೆಯುತ್ತಿದ್ದಾರೆ| ಬಿದ್ದು ಹೋದರೆ ಹೇಗೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಡಲಿ ಎಂದು ಹೇಳಿದ್ದೇನೆ ಎಂದರು. ನೆರೆ ಪರಿಹಾರ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ| 


ರಾಯಚೂರು(ಅ.2): ಕೇಂದ್ರ ಸರ್ಕಾರದಿಂದ ಪ್ರವಾಹದ ಪರಿಹಾರ ತರಲು ಸಾಧ್ಯವಾಗದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸ್ಟ್ರಾಂಗ್‌ ಮುಖ್ಯಮಂತ್ರಿ ಎನ್ನಬೇಕಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಿಎಸ್‌ವೈ ಅವರನ್ನು ದುರ್ಬಲ ಸಿಎಂ ಎಂದು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹಕ್ಕೆ ಪರಿಹಾರ ತರುವಲ್ಲಿ ವಿಫಲವಾಗಿರುವುದರಿಂದಲೇ ಹಾಗೆ ಮಾತನಾಡಿದ್ದೇನೆ. ಬಿಎಸ್‌ವೈ ತಂತಿ ಮೇಲೆ ನಡೆಯುತ್ತಿದ್ದಾರೆ, ಬಿದ್ದು ಹೋದರೆ ಹೇಗೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಡಲಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನೆರೆ ಪರಿಹಾರ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ನೆರೆಗೆ ಸ್ಪಂದಿಸದ ಪ್ರಧಾನಿ ಮೋದಿಯವರು ಬಿಹಾರ ರಾಜ್ಯದ ನೆರೆಗೆ ಸ್ಪಂದಿಸಿದ್ದಾರೆ. ನೆರೆ ಪರಿಹಾರ ಕೇಳುವ ಧೈರ್ಯವನ್ನು ಸಿಎಂ ಯಡಿಯೂರಪ್ಪ ಮಾಡುತ್ತಿಲ್ಲ. ಅವರಿಗೆ ಧೈರ್ಯ ಇಲ್ಲದಿದ್ದರೇ ನಮ್ಮನ್ನು ಕರೆಯಲಿ ನಾವು ಹೋಗುತ್ತೇವೆ ಎಂದು ಹೇಳಿದ್ದಾರೆ. 

ಬಿಜೆಪಿಗೆ ಸೇರ್ಪಡೆ ಉದ್ದೇಶಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಅನರ್ಹ ಅಸ್ತ್ರ ಬಳಕೆ ಮಾಡಲಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಹೊರಡಿಸಿರುವ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

ಅವೈಜ್ಞಾನಿಕವಾದ ನೋಟು ಅಮಾನ್ಯ, ಜಿಎಸ್‌ಟಿಯಂತಹ ಯೋಜನೆಗಳನ್ನು ಜಾರಿಗೊಳಿಸಿದರ ಪರಿಣಾಮವಾಗಿಯೇ ಇಂದು ದೇಶದ ಆರ್ಥಿಕ ಮಟ್ಟ ಕುಸಿಯಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. 
 

click me!