ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ವ್‌ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿದರು.
ಮದ್ದೂರು (ಡಿ.06): ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ವ್‌ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿದರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇಗುಲದಲ್ಲಿ (Anjaneya Temple) ನಡೆದ ಹನುಮ ಜಯಂತಿಯಲ್ಲಿ (Hanuma Jayanthi) ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಮುನ್ನ ನಿಧಿ ಸಂಗ್ರಹಣದ ಅವಶ್ಯಕತೆ ಇದೆ. ಹೀಗಾಗಿ ನಿಧಿ ಸಂಗ್ರಹಣಕ್ಕಾಗಿ ದೇಶಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
undefined
ರಥಯಾತ್ರೆ ವೇಳೆ ಭಗವತ್ ಭಕ್ತರನ್ನು ಪ್ರತಿಷ್ಟಾಪನ ಮಹೋತ್ಸವಕ್ಕೆ ಆಹ್ವಾನಿಸಲಾಗುವುದು. ಎಲ್ಲ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವ ಉದ್ದೇಶದಿಂದ ಒಂದು ತಿಂಗಳ ಕಾಲ ಕಾರ್ಯಕ್ರಮ ನಡೆಸುವ ಆಲೋಚನೆ ಇದೆ ಎಂದರು.
ಶೀಘ್ರ ಗರ್ಭಗುಡಿ ಪೂರ್ಣ
ಲಖನೌ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿ ಭರದಿಂದ ಸಾಗಿರುವ ನಡುವೆಯೇ ದೇಗುಲದ (Temple) ಅತಿಮುಖ್ಯ ಭಾಗವಾದ ಗರ್ಭಗುಡಿಯ (Sanctum Sanctorum) ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ರಾಮನವಮಿ (Ram Navami) ದಿನ ಸೂರ್ಯ ಕಿರಣಗಳು ರಾಮಲಲ್ಲಾ (ಬಾಲರಾಮ) ಮೂರ್ತಿಯ (Ram Lalla Idol) ಮೇಲೆ ಬೀಳುವಂತೆ ಗರ್ಭಗುಡಿಯನ್ನು ವಿನ್ಯಾಸಗೊಳಿಸಲು (Design) ತಜ್ಞರ ತಂಡ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಹಿಂದೆ ದೇಗುಲದ ಗರ್ಭಗುಡಿಯನ್ನು ಒಡಿಶಾದ (Odisha) ಜಗತ್ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾಲಯದ (Konark Sun Temple) ಶೈಲಿಯಲ್ಲಿ ವಿನ್ಯಾಸಗೊಳಿಸಬೇಕು ಎಂದು ಸಲಹೆ ನೀಡಿದ್ದರು. ಕೊನಾರ್ಕ್ ಸೂರ್ಯ ದೇವಾಲಯದ ಗರ್ಭಗುಡಿಯನ್ನು ಸೂರ್ಯರಶ್ಮಿಯು ಸೂರ್ಯದೇವನ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಮಾದರಿಯನ್ನು ರಾಮಮಂದಿರ ಗರ್ಭಗುಡಿಗೂ ಅಳವಡಿಸಬಹುದು ಎಂಬುದು ಮೋದಿ ಸಲಹೆ ಆಗಿತ್ತು.
‘ಈಗ ವಾಸ್ತುಶಿಲ್ಪಿಗಳನ್ನು ಒಳಗೊಂಡ ತಜ್ಞರ ಸಮಿತಿ ಗರ್ಭಗುಡಿ ವಿನ್ಯಾಸ ಅಂತಿಮಗೊಳಿಸಿದೆ. ಪ್ರತಿವರ್ಷ ರಾಮನವಮಿ ದಿನ ಸೂರ್ಯರಶ್ಮಿಯು ರಾಮನ ವಿಗ್ರಹದ ಮೇಲೆ ಬೀಳುವಂತೆ ಗರ್ಭಗುಡಿ ವಿನ್ಯಾಸಗೊಳಿಸಲಾಗುತ್ತದೆ’ ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. 2023ರ ಡಿಸೆಂಬರ್ಗೆ ಗರ್ಭಗುಡಿ ನಿರ್ಮಾಣ ಮುಗಿಸಿ, 2024ರ ಸಂಕ್ರಾತಿಗೆ ಭಕ್ತರಿಗೆ ದೇಗುಲ ತೆರೆಯುವ ಉದ್ದೇಶವಿದೆ.
ಇದನ್ನು ಓದಿ: 21 ಅಡಿ ಎತ್ತರಕ್ಕೆ ಎದ್ದುನಿಂತ ರಾಮಮಂದಿರ: 2024ರ ಸಂಕ್ರಾಂತಿಗೆ ಭಕ್ತರಿಗೆ ದರ್ಶನ ಭಾಗ್ಯ
‘ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ’ ಎಂದು ರಾಯ್ ಹೇಳಿದ್ದಾರೆ.
ಮಂದಿರಕ್ಕೆ ಆಶಿಷ್ ಸೋಂಪುರ ಅವರು ವಾಸ್ತುಶಿಲ್ಪಿಯಾಗಿದ್ದಾರೆ. ನಿರ್ಮಾಣ ಸಮಿತಿಗೆ ಮಾಜಿ ಅಧಿಕಾರಿ ನೃಪೇಂದ್ರ ಮಿಶ್ರಾ ಅಧ್ಯಕ್ಷರಾಗಿದ್ದು, ವಾಸ್ತುಶಿಲ್ಪ ತಜ್ಞರಾದ ಪ್ರದೀಪ್ ಕುಮಾರ್ ಹಾಗೂ ಪ್ರೊ. ಗೋಪಾಲ ಕೃಷ್ಣನ್ ಹಾಗೂ ಇತರರು ಸಮಿತಿ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ
ರಾಜಸ್ಥಾನದ ಬನ್ಸಿ ಪಹಾಡ್‌ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಬೊಕ್ಕಸದಿಂದ ಮಂದಿರ ನಿರ್ಮಾಣವಾಗಬಾರದು. ಭಕ್ತರ ದೇಣಿಗೆಯಿಂದ ನಿರ್ಮಾಣವಾಗಬೇಕು ಎಂದು 3 ಸಾವಿರ ಕೋಟಿ ನಿಧಿ ಸಂಗ್ರಹಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತರ ಮನೆಯಿಂದ ಕನಿಷ್ಠ 100 ರು. ದೇಣಿಗೆ ಸಂಗ್ರಹಿಸುವುದು ನಮ್ಮ ಆಶಯವಾಗಿದೆ ಎಂದರು.
ರಾಮ ಮಂದಿರ ನಿರ್ಮಾಣ ಕೇವಲ ನಮ್ಮ ಕನಸಲ್ಲ ಇಡೀ ದೇಶದ ರಾಮ ಭಕ್ತರ ಕನಸಾಗ ಬೇಕು. ಗೋ ಸಾಗಾಣಿಕೆ ಸಹಿತ ವಿವಿಧ ಸಾಮಾಜಿಕ ಕಾರ್ಯಗಳನ್ನು ರಾಮ ಮಂದಿರ ನಿರ್ಮಾಣದ ಬಳಿಕ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ ಮಾಡುವುದನ್ನು ನಿಷೇಧ ಮಾಡಲಾಗಿದೆ. ಇದೇ ರೀತಿ ಉಡುಪಿಯಲ್ಲೂ ಇಂತಹ ವ್ಯವಸ್ಥೆ ಜಾರಿಗೊಳಿಸುತ್ತಿರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವ ಪ್ರಸನ್ನ ತೀರ್ಥರು ಈ ವಿಚಾರ ಪ್ರಸ್ತಾಪವಾದಾಗ ಕಾನೂನು ಪರಿಣಿತರಿಂದ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್ಯ, ಸಹಾಯಕ ಸುರೇಶ್ ಆಚಾರ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮನ್ಮುಲ… ನಿರ್ದೇಶಕಿ ರೂಪಾ ಇದ್ದರು.
5ಕೆಎಂಎನ್ ಡಿ29
ಮದ್ದೂರು ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ದೇಗುಲದಲ್ಲಿ ನಡೆದ ಹನುಮ ಜಯಂತಿಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು.