ಅವಧೂತ ವಿನಯ್ ಗುರೂಜಿ ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದ ಮುಖ್ಯ ರಸ್ತೆಗಳು, ಮಸೀದಿ, ದೇವಸ್ಥಾನ ಹಾಗೂ ತುಂಗಾ ನದಿ ತೀರವನ್ನ ಸ್ವಚ್ಛಗೊಳಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.21): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದ ಮುಖ್ಯ ರಸ್ತೆಗಳು, ಮಸೀದಿ, ದೇವಸ್ಥಾನ ಹಾಗೂ ತುಂಗಾ ನದಿ ತೀರವನ್ನ ಸ್ವಚ್ಛಗೊಳಿಸಿದ್ದಾರೆ.
ನಿನ್ನೆ(ಶುಕ್ರವಾರ) ಗಾಂಧಿ ಟ್ರಸ್ಟ್ ಹಾಗೂ ವಿನಯ್ ಗುರೂಜಿ ಭಕ್ತ ವೃಂದ ಸ್ವಚ್ಛತಾ ಅಭಿಯಾನವನ್ನ ಕೈಗೊಂಡಿತ್ತು. ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ಗೂರೂಜಿ ಭಕ್ತರು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೊಪ್ಪ ತಾಲೂಕಿನ ಹರಿಹರಪುರದ ಮುಖ್ಯರಸ್ತೆ, ಮಸೀದಿಗಳು-ದೇವಸ್ಥಾನದ ಆವರಣವನ್ನ ಶುಚಿ ಮಾಡಿದ್ದಾರೆ. ಜೊತೆಗೆ, ಹರಿಹರಪುರದಲ್ಲಿ ಹರಿದು ಹೋಗುವ ತುಂಗಾ ನದಿ ತೀರವನ್ನೂ ಕ್ಲೀನ್ ಮಾಡಿದ್ದಾರೆ.
ವಿಮಾನದ ಡೋರ್ ತೆರೆದಿದೆ ಎಂದಿದ್ದೇ ತಪ್ಪಾಯ್ತಾ?: ತೇಜಸ್ವಿ ಸೂರ್ಯರನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ
ವಿನಯ್ ಗುರೂಜಿ ಈ ಹಿಂದೆ ಕೂಡ ಕೊಪ್ಪ ಪಟ್ಟಣದ ಮುಖ್ಯ ರಸ್ತೆಯನ್ನ ಕ್ಲೀನ್ ಮಾಡಿದ್ದರು. ಶೌಚಾಲಯಗಳನ್ನೂ ಕ್ಲೀನ್ ಮಾಡಿ ಸಮಾನತೆಯ ಸಂದೇಶ ಸಾರಿದ್ದರು. ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಆವರಣವನ್ನೂ ಕ್ಲೀನ್ ಮಾಡಿ, ಅಲ್ಲಿನ ಶೌಚಾಲಯಗಳನ್ನ ಶುಚಿ ಮಾಡಿದ್ದಾರೆ. ದಲಿತರು ಹಾಗೂ ಪೌರಕಾರ್ಮಿಕರ ಪಾದಪೂಜೆ ಮಾಡಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದರು. ವಿನಯ್ ಗುರೂಜಿಯವರು ತಮ್ಮ ಸರಳ ನಡವಳಿಕೆಯಿಂದ ಅಸಂಖ್ಯಾತ ಭಕ್ತವೃಂದವನ್ನ ಸಂಪಾದಿಸಿದ್ದಾರೆ. ಆಗಿಂದಾಗ್ಗೆ ಈ ರೀತಿಯ ವಿಭಿನ್ನ ಸಾಮಾಜಿಕ ಕಾರ್ಯಗಳನ್ನ ಮಾಡುವ ಮೂಲಕ ಜನಮನ್ನಣೆಗೂ ಪಾತ್ರರಾಗಿದ್ದಾರೆ.