ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

Suvarna News   | Asianet News
Published : Feb 18, 2020, 05:01 PM IST
ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

ಸಾರಾಂಶ

ಕಲಬರಗಿಯಲ್ಲಿ ಮೂವರು ಗರ್ಭಿಣಿಯರಿದ್ದ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ.   

ಕಲಬುರಗಿ(ಫೆ.18): ಕಲಬರಗಿಯಲ್ಲಿ ಮೂವರು ಗರ್ಭಿಣಿಯರಿದ್ದ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ. 

ಗರ್ಭಿಣಿ ಮಹಿಳೆಯರಿದ್ದ ರಿಕ್ಷಾ ಪಲ್ಟಿಯಾಗಿದ್ದು ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಕಲಬುರಗಿ ತಾಲೂಕಿನ ಭೂಸಣಗಿ ಗ್ರಾಮದ ನಿವಾಸಿ ಪ್ರಿಯಾಂಕಾ (25) ಮೃತ ಗರ್ಭಿಣಿ. ಕಲಬುರಗಿ ತಾಲೂಕಿನ ಔರಾದ್ ಗ್ರಾಮದ ಬಳಿ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ.  

ಆಟೋ ಪಲ್ಟಿ: ಇಬ್ಬರು ಮಹಿಳೆಯರ ಸಾವು

ಮೂವರು ಗಾಯಾಳು ಗರ್ಭಿಣಿಯರನ್ನು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ತಮ್ಮ ಕಾರ್ ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಗಾಯಾಳು ಗರ್ಭಿಣಿಯರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ಗೋಲಿಬಾರ್‌: ವಿಡಿಯೋ ಸಾಕ್ಷ್ಯ ಸಲ್ಲಿಸಲು ಮತ್ತೊಂದು ಅವಕಾಶ

ಆದರೆ ಓರ್ವ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗರ್ಭಿಣಿ ಮಹಿಳೆಯರು ಭೂಸಣಗಿ ಗ್ರಾಮದಿಂದ ಮಾಸಿಕ ಚಿಕಿತ್ಸೆಗಾಗಿ ಔರಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ತಪಾಸಣೆ ಮಾಡಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ರಿಕ್ಷಾ ಪಲ್ಟಿಯಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!