* ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಎಸಿಬಿ ಅಧಿಕಾರಿಗಳು
* ಜಮೀನಿಗೆ ಖಾತೆ ಬದಲಾವಣೆ ಮಾಡಲು 50 ಸಾವಿರ ರು. ಲಂಚ ಕೇಳಿದ್ದ ಸಿದ್ದೇಶ್
* ಈ ಸಂಬಂಧ ಎಸಿಬಿಗೆ ದೂರು ನೀಡಿದ್ದ ವೈದ್ಯರು
ದಾವಣಗೆರೆ(ಆ.08): ಖಾಸಗಿ ವೈದ್ಯರೊಬ್ಬರು ಖರೀದಿಸಿದ ಜಮೀನಿನ ಖಾತೆ ಬದಲಾವಣೆಗೆ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕನೊಬ್ಬ ಸಿಕ್ಕಿ ಬೀಳುವ ಭಯದಲ್ಲಿ ಎಸಿಬಿ ಅಧಿಕಾರಿ, ಸಿಬ್ಬಂದಿ ಮೇಲೆ ಕಾರು ಹತ್ತಿಸಲು ಯತ್ನಿಸಿ ಬಳಿಕ ಪರಾರಿಯಾದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ದಾವಣಗೆರೆ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಿದ್ದೇಶ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿ ಮೇಲೆ ಕಾರು ಹತ್ತಿಸಲು ಯತ್ನಿಸಿದ ಆರೋಪಿ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ನಗರದ ಖಾಸಗಿ ವೈದ್ಯರೊಬ್ಬರು ಖರೀದಿಸಿದ್ದ ಜಮೀನಿಗೆ ಖಾತೆ ಬದಲಾವಣೆ ಮಾಡಲು 50 ಸಾವಿರ ರು. ಕೇಳಿದ್ದ ಸಿದ್ದೇಶ್ ಮುಂಗಡವಾಗಿ 35 ಸಾವಿರ ರು. ಪಡೆದಿದ್ದ.
ಯಾದಗಿರಿ: ಸರ್ವೆಗೆ 2.5 ಲಕ್ಷ ರು.ಗಳ ಲಂಚ, ಎಸಿಬಿ ದಾಳಿ, ಇಬ್ಬರು ವಶಕ್ಕೆ
ಈ ಸಂಬಂಧ ವೈದ್ಯರು ದೂರು ನೀಡಿದ್ದರು. ಅಂತೆಯೇ ವೈದ್ಯರಿಂದ ಬಾಕಿ 15 ಸಾವಿರ ರು. ಪಡೆಯುತ್ತಿದ್ದ ವೇಳೆ ಎಸಿಬಿ ಖೆಡ್ಡಾಗೆ ಬೀಳುತ್ತೇನೆಂಬ ಆತಂಕದಲ್ಲಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾನೆ. ಬಳಿಕ ಪರಾರಿಯಾಗಿದ್ದಾನೆ.