* ಮೃತರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮುಗಳಖೋಡ್ ಗ್ರಾಮದವರು
* ಆಂಧ್ರ ಪ್ರದೇಶದ ನೆಲ್ಲೂರು ಬಳಿ ನಡೆದ ಘಟನೆ
* ನಾಲ್ವರ ಸ್ಥಿತಿ ಚಿಂತಾಜನಕ
ಬಾಗಲಕೋಟೆ(ಆ.08): ಲಾರಿ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮದುವೆಯಾದ 23ನೇ ದಿನಕ್ಕೆ ನವ ದಂಪತಿ ದುರಂತ ಸಾವು ಕಂಡ ಘಟನೆ ದ ನೆಲ್ಲೂರು ಬಳಿ ಇಂದು(ಭಾನುವಾರ) ನಡೆದಿದೆ. ಈ ಅಪಘಾತದಲ್ಲಿ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ದಾಂ ಜಾತಗಾರ್(27),ಪತ್ನಿ ಸಲೀಮಾ(25),ಅತ್ತಿಗೆ ರೇಷ್ಮಾ(26) ಮೃತ ದುರ್ದೈವಿಗಳಾಗಿದ್ದಾರೆ.ಮೃತರು ಬಾಗಲಕೋಟೆ ಮುಧೋಳ ತಾಲೂಕಿನ ಮುಗಳಖೋಡ್ ಗ್ರಾಮದವರು ಎಂದು ತಿಳಿದು ಬಂದಿದೆ. ಮದುವೆಯಾದ ಹೊಸದರಲ್ಲಿ ಸಂಬಂಧಿಕರ ಊರಿಗೆ ಹೋದ ನವ ದಂಪತಿ ಸೇರಿ ಮಸಣ ಸೇರಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಅಪಘಾತ: ಮೂವರ ದುರ್ಮರಣ
ಕಡಪಗೆ ಸಂಬಂಧಿಕರ ಊರಿನಿಂದ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಕಾರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.