ಚಾಮರಾಜನಗರ: ಅಪ್ರಾಪ್ತ ಭಿಕ್ಷುಕಿಯ ಅಪಹರಣ ಶಂಕೆ, ಜನರಿಂದ ನಾಲ್ವರು ಪ್ರವಾಸಿಗರಿಗೆ ಗೂಸಾ

By Kannadaprabha News  |  First Published Jan 3, 2024, 10:45 PM IST

ಕೇರಳದ ಮಲ್ಲಪ್ಪುರಂ ಮೂಲದ ಆಯುಬ್, ಇಸ್ಮಾಯಿಲ್, ಆಲಿ ಹಾಗೂ ಸಾಧಿಕ್ ಪೊಲೀಸರ ವಶದಲ್ಲಿರುವ ವ್ಯಕ್ತಿಗಳು. ಕೊಳ್ಳೇಗಾಲ ಬಸ್ ನಿಲ್ದಾಣ ಮುಂಭಾಗ ಅಂದಾಜು 16 ವರ್ಷದ ಭಿಕ್ಷುಕಿಯನ್ನು ಅಪಹರಣ ಮಾಡಿರುವ ಶಂಕೆ. 


ಚಾಮರಾಜನಗರ(ಜ.03):  ಕೇರಳ ಮೂಲದ ನಾಲ್ವರು ಯುವಕರು ಪ್ರವಾಸಕ್ಕೆಂದು ಬಂದು ಭಿಕ್ಷುಕಿಯನ್ನು ಅಪಹರಣ ಮಾಡಲು ಮುಂದಾದ ಘಟನೆ ಮಂಗಳವಾರ ಕೊಳ್ಳೇಗಾಲದಲ್ಲಿ ನಡೆದಿದೆ. 

ಕೇರಳದ ಮಲ್ಲಪ್ಪುರಂ ಮೂಲದ ಆಯುಬ್, ಇಸ್ಮಾಯಿಲ್, ಆಲಿ ಹಾಗೂ ಸಾಧಿಕ್ ಪೊಲೀಸರ ವಶದಲ್ಲಿರುವ ವ್ಯಕ್ತಿಗಳು. ಕೊಳ್ಳೇಗಾಲ ಬಸ್ ನಿಲ್ದಾಣ ಮುಂಭಾಗ ಅಂದಾಜು 16 ವರ್ಷದ ಭಿಕ್ಷುಕಿಯನ್ನು ಅಪಹರಣ ಮಾಡಿರುವ ಶಂಕೆ ಮೂಡಿದೆ.

Tap to resize

Latest Videos

undefined

ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಶೀಘ್ರ ಮುಗಿಸಿ, ಸಚಿವ ವೆಂಕಟೇಶ್‌

ಸಾರ್ವಜನಿಕರಿಂದ ಗೂಸಾ 

ಬಾಲಕಿಯ ಬಾಯಿಯನ್ನು ಮುಚ್ಚಿ ಕರೆದೊಯ್ಯುವಾಗ ಮಧುವನಹಳ್ಳಿ ಸಮೀಪ ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗುವಾಗ ಜನರು ಕಾರನ್ನು ತಡೆದಿದ್ದಾರೆ.ಈ ವೇಳೆ, ಕಾರಿನಲ್ಲಿ ಭಿಕ್ಷುಕಿ ಇರುವುದು ತಿಳಿದು ಜನರು ಥಳಿಸಿ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಾಲಕಿಯನ್ನು ಸೇರಿದಂತೆ ನಾಲ್ವರು ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

click me!