ಕೊಳ್ಳೇಗಾಲ: ಯುವಕನಿಗೆ ಬೂಟು ಕಾಲಿಂದ ಒದ್ದಿದ್ದ ಎಎಸ್‌ಸೈ ಅಮಾನತು

Kannadaprabha News   | Asianet News
Published : Jun 04, 2021, 07:51 AM ISTUpdated : Jun 04, 2021, 08:14 AM IST
ಕೊಳ್ಳೇಗಾಲ: ಯುವಕನಿಗೆ ಬೂಟು ಕಾಲಿಂದ ಒದ್ದಿದ್ದ ಎಎಸ್‌ಸೈ ಅಮಾನತು

ಸಾರಾಂಶ

* ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದ ಘಟನೆ * ಯುವಕನನ್ನು ಅಡ್ಡಗಟ್ಟಿ ಬೂಟು ಕಾಲಿನಲ್ಲಿ ಒದ್ದು, ಅವಾಚ್ಯ ಶಬ್ಧದಿಂದ ನಿಂದಿಸಿದ್ದ ಎಎಸ್‌ಐ  * ಬೂಟು ಕಾಲಿನಲ್ಲಿ ಒದ್ದು ವಿವಾದಕ್ಕೀಡಾಗಿದ್ದ ಪೊಲೀಸಪ್ಪ

ಕೊಳ್ಳೇಗಾಲ(ಜೂ.04): ಔಷಧ ತರಲು ಮೆಡಿಕಲ್‌ ಶಾಪ್‌ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಬೂಟು ಕಾಲಿನಲ್ಲಿ ಒದ್ದು, ಅವಾಚ್ಯ ಶಬ್ಧದಿಂದ ನಿಂದಿಸಿ ಅಶಿಸ್ತು ಪ್ರದರ್ಶಿಸಿದ್ದ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸೈ ರಾಮಸ್ವಾಮಿ ಅವರನ್ನು ಎಸ್ಪಿ ದಿವ್ಯ ಸಾರಾ ಥಾಮಸ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ. 

ಮೇ 23ರಂದು ಬೆಳಗ್ಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೋರ್ವನನ್ನು ತಡೆದ ರಾಮಸ್ವಾಮಿ, ಹೆಲ್ಮೆಟ್‌ ಹಾಕಿಲ್ಲ ಎಂದು ಪ್ರಶ್ನಿಸಿ ಆತನನ್ನು ನಿಂದಿಸಿ ಬೂಟು ಕಾಲಿನಲ್ಲಿ ಒದ್ದು ವಿವಾದಕ್ಕೀಡಾಗಿದ್ದರು.ಈ ಘಟನೆಯ ವಿಡಿಯೋ ವೈರಲ್‌ ಆಗಿತ್ತು.

ಚಾಮರಾಜನಗರ : ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ

ಈ ಕುರಿತು ಮೇ 24ರಂದು ಕನ್ನಡಪ್ರಭ ಯುವಕನ ಮೇಲೆ ಪೊಲೀಸ್‌ ಸಿಬ್ಬಂದಿ ದರ್ಪ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ