ಸ್ವಂತ ಹಣದಿಂದ ರಸ್ತೆಗೆ ಕಾಂಕ್ರಿಟ್‌ ಹಾಕಿಸಿದ ಎಎಸ್‌ಐ

Kannadaprabha News   | Asianet News
Published : Jul 09, 2021, 11:57 AM IST
ಸ್ವಂತ ಹಣದಿಂದ ರಸ್ತೆಗೆ ಕಾಂಕ್ರಿಟ್‌ ಹಾಕಿಸಿದ ಎಎಸ್‌ಐ

ಸಾರಾಂಶ

ಗುಂಡಿ ಬಿದ್ದಿದ್ದ ಮೈಸೂರಿನ ಮಾದಾಪುರದ ರಸ್ತೆ ಎಚ್‌.ಡಿ. ಕೋಟೆ ಎಎಸ್‌ಐ ದೊರೆಸ್ವಾಮಿ ಮತ್ತು ರಕ್ಷಣಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕೆ ಸ್ವಂತ ಹಣದಿಂದ  ರಸ್ತೆ ರಿಪೇರಿ ಸ್ವಂತ ಹಣದಿಂದ ಸಿಮೆಂಟ್‌ ಕಾಂಕ್ರಿಟ್‌ ಹಾಕಿಸಿ ಸರಿಪಡಿಸಿದ ಎಎಸ್‌ಐ

ಮೈಸೂರು (ಜು.09):  ರಸ್ತೆ ಗುಂಡಿಬಿದ್ದಿದ್ದ ಮಾದಾಪುರ- ಕೆ. ಬೆಳತ್ತೂರು ಮುಖ್ಯರಸ್ತೆಯನ್ನು ಎಚ್‌.ಡಿ. ಕೋಟೆ ಎಎಸ್‌ಐ ದೊರೆಸ್ವಾಮಿ ಮತ್ತು ರಕ್ಷಣಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕೆ ಸ್ವಂತ ಹಣದಿಂದ ಸಿಮೆಂಟ್‌ ಕಾಂಕ್ರಿಟ್‌ ಹಾಕಿಸಿ ಸರಿಪಡಿಸಿದ್ದಾರೆ.

ಎಎಸ್‌ಐ ದೊರೆಸ್ವಾಮಿ ಮಾತನಾಡಿ, ಪೊಲೀಸ್‌ ಇಲಾಖೆ ಕಾರ್ಯಕ್ರಮವಾದ ನಮ್ಮ ಗ್ರಾಮ- ನಮ್ಮ ಹೊಣೆ, ಮತ್ತು ಜನಸ್ನೇಹಿ ಪೊಲೀಸ್‌ ಅಡಿಯಲ್ಲಿ ಈ ರಸ್ತೆಯು ತಾಲೂಕಿನ ಪ್ರಸಿದ್ಧ ದೇವತೆ ಚಿಕ್ಕದೇವಮ್ಮನವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು ಪ್ರತಿದಿನ ಸಾವಿರಾರು ಜನರು ಸಂಚರಿಸುತ್ತಿರುವುದರಿಂದ ಎಲ್ಲರಿಗೂ ಅನುಕೂಲವಾಗಲೆಂದು ಈ ಕೆಲಸ ಮಾಡಿದ್ದೇವೆ ಎಂದರು.

ರಾತ್ರೋ ರಾತ್ರಿ 1 ಕಿ.ಮೀಟರ್ ರಸ್ತೆ ಕಳ್ಳತನ: ದೂರು ಕೊಟ್ಟ ಗ್ರಾಮಸ್ಥರು ...

ಇವರು ಕಳೆದ ವರ್ಷ ಕೊರೋನ ಸಂದಿಗ್ಧ ಕಾಲದಲ್ಲೂ ಸಹ ಅರ್ಹರಿಗೆ ಆಹಾರ ಕಿಟ್‌ ಹಾಗೂ ಮತ್ತಿತರ ಜನೋಪಯೋಗಿ ಕೆಲಸ ಮಾಡಿದ್ದರು. ಈಗ ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು