ಉತ್ತರ ಕನ್ನಡ: ಜೋಯಿಡಾದಲ್ಲಿ ದೇಶದ ಅತಿದೊಡ್ಡ ರೋಪ್‌ ವೇ..!

By Kannadaprabha News  |  First Published Jul 9, 2021, 11:54 AM IST

* ಉದ್ಯಮಿಯೊಬ್ಬರಿಂದ 480 ಮೀಟರ್‌ ಉದ್ದದ ರೋಪ್‌ ವೇ ನಿರ್ಮಾಣ
* ಶೀಘ್ರದಲ್ಲಿಯೇ ಪ್ರವಾಸಿಗರಿಗೆ ಮುಕ್ತ
* ಪ್ರವಾಸಿಗರಿಗೆ ನಿಜವಾದ ಸ್ವರ್ಗದ ಅನುಭವ
 


ಜೋಯಿಡಾ(ಜು.09): ಕೇನೋಪಿ ವಾಕ್‌ನಿಂದ ರಾಷ್ಟ್ರದ ಗಮನ ಸೆಳೆದ ಜೋಯಿಡಾ ತಾಲೂಕು ಈಗ ಮತ್ತೊಮ್ಮೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೌದು. ಸುಪ್ರಸಿದ್ಧ ಕಾಳಿ ಜಲಾಶಯದ ಪಕ್ಕದಲ್ಲೇ ಇರುವ ಉದ್ಯಮಿಯೊಬ್ಬರು ತಮ್ಮ ವಿಜಲಿಂಗ್‌ ವುಡ್‌ ತ್ರಿಸ್ಟಾರ್‌ ಹತ್ತಿರ 480 ಮೀಟರ್‌ ಉದ್ದದ ರೋಪ್‌ ವೇ ನಿರ್ಮಿಸುವ ಮೂಲಕ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

ಕಳೆದ 6 ತಿಂಗಳಿಂದ ವಿಜಲಿಂಗ್‌ ವುಡ್‌ ಹೆಸರಿನ ತಮ್ಮ ತ್ರಿಸ್ಟಾರ್‌ ವಸತಿ ಗೃಹದ ಅಕ್ಕ ಪಕ್ಕದಲ್ಲಿರುವ ಪ್ರಕೃತಿ ಸೌಂದರ್ಯ, ಕಾಳಿ ನದಿಯಲ್ಲಿ ನಡೆಯುವ ರಾಫ್ಟಿಂಗ್‌ ಗುಡ್ಡ ಬೆಟ್ಟಗಳಲ್ಲಿ ಹರಿಯುವ ಜುಳು ಜುಳು ನೀರು, ಕಾಡುಪ್ರಾಣಿಗಳ ಓಡಾಟ ಪ್ರವಾಸಿಗರಿಗೆ ನೈಜವಾಗಿ ಸಿಗಲಿ ಎಂಬ ಉದ್ದೇಶದಿಂದ ಈ ರೋಪ್‌ ವೇ ನಿರ್ಮಿಸಿದ್ದು ಸದ್ಯದಲ್ಲೆ ಪ್ರವಾಸಿಗರಿಗೆ ಮುಕ್ತವಾಗಲಿದೆ.

Latest Videos

undefined

ಏಷ್ಯಾದ ಉದ್ದದ ರೋಪ್‌ ವೇ ಆರಂಭ!

ಇಂಥ ರೋಪ್‌ ವೇ ಶಿಮ್ಲಾದ ಕುಪ್ರಿ ಎಂಬಲ್ಲಿ ಮಾತ್ರ ಇದ್ದು ಇದು ಕೇವಲ 110 ಮೀಟರ್‌ ಇದ್ದರೆ ಗಣೇಶ ಗುಡಿಯಲ್ಲಿ ನಿರ್ಮಾಣವಾಗುತ್ತಿರುವ ರೋಪ್‌ ವೇ 480 ಮೀಟರ್‌ ಉದ್ದವಿದೆ. ಪುಣೆಯ ಪ್ರಸಿದ್ಧ ಕಂಪನಿಯೊಂದು ಈ ಕಾಮಗಾರಿಯನ್ನು ನಡೆಸುತ್ತಿದೆ.

ಅತ್ಯಂತ ಸುಂದರವಾಗಿ ಈ ರೋಪ್‌ ವೇ ನಿರ್ಮಾಣವಾಗುತ್ತಿದೆ. ಇದರಿಂದ ರಿಗೆ ನಿಜವಾದ ಸ್ವರ್ಗದ ಅನುಭವವಾಗಲಿದೆ ಎಂದು ಅವೇಡಾ ಗ್ರಾಪಂ ಸದಸ್ಯ ಅಜೀತ ತೋರಾಥ್‌ ತಿಳಿಸಿದ್ದಾರೆ. 
 

click me!