
ಬೆಂಗಳೂರು (ಏ.27): ನಗರದಲ್ಲಿ ಪೊಲೀಸರನ್ನು ಕೊರೋನಾ ಸೋಂಕು ಬಾಧಿಸುತ್ತಿದ್ದು, ಸೋಂಕಿಗೆ ಎಎಸ್‌ಐ (ಸಹಾಯಕ ಸಬ್ ಇನ್‌ಸ್ಪೆಕ್ಟರ್) ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ಮುನಿಯಪ್ಪ (58) ಮೃತ ಎಎಸ್‌ಐ. ಮುನಿಯಪ್ಪ ಕೆಲ ವರ್ಷಗಳಿಂದ ಬ್ಯಾಟರಾಯನಪುರ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಮುನಿಯಪ್ಪ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಸಹ ಒಳಗಾಗಿದ್ದರು.
RTPCR ಟೆಸ್ಟ್ ನಲ್ಲಿ ಪಾಸಿಟಿವ್ ಬಂದ್ರೆ ತಕ್ಷಣ ಏನ್ ಮಾಡಬೇಕು? ಸರಳ ಸೂತ್ರ ...
ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮುನಿಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಸೋಂಕು ಇರುವುದು ದೃಢ ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.