ಬೆಳಗಾವಿ ಬದಲು ಬೆಳಗಾಂ ಉಲ್ಲೇಖ: ಡಿಕೆಶಿಗೆ ಬಹಿರಂಗ ಪತ್ರ

Kannadaprabha News   | Asianet News
Published : Dec 26, 2020, 08:31 AM ISTUpdated : Dec 26, 2020, 08:39 AM IST
ಬೆಳಗಾವಿ ಬದಲು ಬೆಳಗಾಂ ಉಲ್ಲೇಖ: ಡಿಕೆಶಿಗೆ ಬಹಿರಂಗ ಪತ್ರ

ಸಾರಾಂಶ

ಬೆಳಗಾವಿ ಬದಲು ಬೆಳಗಾಂ ಎಂದು ಉಲ್ಲೇಖಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳು|ಬೆಳಗಾಂ ಎಂದೇ ಬರೆಯುತ್ತ ಹೋದರೆ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ, ತಾವು ಗಡಿಭಾಗದ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು: ಚಂದರಗಿ|    

ಬೆಳಗಾವಿ(ಡಿ.26): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಸಮಿತಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಬೆಳಗಾವಿ ಬದಲು ಬೆಳಗಾಂ ಎಂದು ಉಲ್ಲೇಖಿಸಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 

ಬೆಳಗಾವಿ ಜಿಲ್ಲಾ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. 

ರಮೇಶ್ ಜಾರಕಿಹೊಳಿಗೆ ಹೈಕಮಾಂಡ್ ವಾರ್ನಿಂಗ್: ಆದ್ರೂ ಸವಾಲು ಹಾಕಿದ ಸಾಹುಕಾರ

ಗಡಿಭಾಗದಲ್ಲಿ ಚುನಾವಣೆ ಎದುರಿಸಲು ಸನ್ನದ್ಧವಾಗಿರುವ ತಮ್ಮ ಪಕ್ಷವು ಈಗಲೇ ಬೆಳಗಾಂ ಎಂದು ಬರೆಯುವ ಮೂಲಕ ಮರಾಠಿಗರನ್ನು ಖುಷಿ ಪಡಿಸಿದರೆ ಹೇಗೆ? ಈ ವಿಷಯದಲ್ಲಿ ಸುಮ್ಮನೇ ಪ್ರತಿಷ್ಠೆ ಬೇಡ. ಬೆಳಗಾಂ ಎಂದೇ ಬರೆಯುತ್ತ ಹೋದರೆ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ತಾವು ಗಡಿಭಾಗದ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರ ಬಹಿರಂಗಪತ್ರದಲ್ಲಿ ಹೇಳಿದ್ದಾರೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!