ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ : ರಜಾ ದಿನಗಳಲ್ಲೂ ಇಲ್ಲ

By Kannadaprabha News  |  First Published Jul 7, 2021, 10:11 AM IST
  • ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ 
  • ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಆದೇಶ 
  • ಆಷಾಢ ಶುಕ್ರವಾರಗಳಂದು ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ ನಿಷೇಧ

ಮೈಸೂರು (ಜು.07):  ಕೊರೊನಾ ಭೀತಿ ಹಿನ್ನೆಲೆ. ಆಷಾಢ ಶುಕ್ರವಾರಗಳಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಆದೇಶ ಹೊರಡಿಸಿದ್ದಾರೆ.

ಆಷಾಢ ಶುಕ್ರವಾರಗಳಂದು ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ, ಸೋಂಕು ಹರಡುವ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಹಾಗೂ ಉತ್ತನಹಳ್ಳಿ ಜ್ವಾಲಾ ತ್ರಿಪುರಸುಂದರಿ ದೇವಾಲಯಕ್ಕೆ ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿದೆ.

Latest Videos

undefined

ಒಂದು ತಿಂಗಳಲ್ಲಿ ಚಾಮುಂಡಿ ಹುಂಡಿಯಲ್ಲಿ ಸಂಗ್ರಹವಾಯ್ತು ಕೋಟಿ ರು. ..

ಹೀಗಾಗಿ ನಾಲ್ಕು ಆಷಾಢ ಶುಕ್ರವಾರ ಎರಡು ದಿನ ಅಮಾವಾಸ್ಯೆ ದಿನದಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಷಾಢ ಮಾಸದ ಶನಿವಾರ ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ಹಾಗೂ ಪ್ರತಿದಿನ ಸಂಜೆ 6 00 ಘಂಟೆಯ ನಂತರವೂ ನಿರ್ಬಂಧ ವಿಧಿಸಲಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಸುದೀಪ್; ಮಾಸ್ಕ್‌ ಧರಿಸದೆ ಬಂದ ಅಭಿಮಾನಿಗೆ ಕ್ಲಾಸ್! ...

ಈ ಕೆಳಕಂಡ ದಿನಗಳು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿಧೆ.

ಜು.9- ಆಷಾಡ ಅಮಾವಾಸ್ಯೆ

ಜು.16- ಮೊದಲನೇ ಆಷಾಡ ಶುಕ್ರವಾರ

ಜು.23 - 2ನೇ ಆಷಾಡ ಶುಕ್ರವಾರ

ಜು.30- 3ನೇ ಆಷಾಡ ಶುಕ್ರವಾರ, ಅಮ್ಮನವರ ವರ್ಧಂತಿ,

ಆ.6- 4ನೇ ಆಷಾಡ ಶುಕ್ರವಾರ

ಆ.8- ಭೀಮನ ಆಮಾವಾಸ್ಯೆ

click me!