Karthik Bramavara : ಉದಯೋನ್ಮುಖ ರಂಗ ಕಲಾವಿದ ಕಾರ್ತಿಕ್ ಬ್ರಹ್ಮಾವರ ನಿಧನ

By Ravi Janekal  |  First Published Jan 23, 2023, 11:22 PM IST

ಉದಯೋನ್ಮುಖ ರಂಗಭೂಮಿ ನಟ, ಹಾಸ್ಯ ಕಲಾವಿದರಾಗಿದ್ದ ಕಾರ್ತಿಕ್ ಬ್ರಹ್ಮಾವರ(31) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಳೆದ ಜ.22ರಂದು ಕುಮ್ರಗೋಡು ಗ್ರಾಮದ ಜಂಬಾಡಿ ಎಂಬಲ್ಲಿ ನಡೆದಿದೆ. ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. 


ಬ್ರಹ್ಮಾವರ (ಜ.22) : ಉದಯೋನ್ಮುಖ ರಂಗಭೂಮಿ ನಟ, ಹಾಸ್ಯ ಕಲಾವಿದರಾಗಿದ್ದ ಕಾರ್ತಿಕ್ ಬ್ರಹ್ಮಾವರ(31) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಳೆದ ಜ.22ರಂದು ಕುಮ್ರಗೋಡು ಗ್ರಾಮದ ಜಂಬಾಡಿ ಎಂಬಲ್ಲಿ ನಡೆದಿದೆ. ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. 

ರಂಗಭೂಮಿ ನಟರಾಗಿದ್ದ ಕಾರ್ತಿಕ್ ಬ್ರಹ್ಮಾವರ್ ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಾರ್ತಿಕ್ ಖ್ಯಾತ ಕಲಾವಿದರಾಗಿದ್ದ ಮನು ಹಂದಾಡಿ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಭೂಮಿಕ ರಂಗತಂಡ, ಹಾರಾಡಿ, ಖ್ಯಾತ ನಿರ್ದೇಶಕ  ರಾಜ್‌ಗುರು ಹೊಸಕೋಟೆ ಅವರೊಂದಿಗೆ ಗುರುತಿಸಿಕೊಂಡಿದ್ದರು.

Tap to resize

Latest Videos

undefined

ಕೆಮ್ಮು ಕಾಯಿಲೆಯಿಂದ ಬಳಲುತ್ತಿದ್ದ ಕಾರ್ತಿಕ್:

ಕಾರ್ತಿಕ್ ಬ್ರಹ್ಮಾವರ್ ಕೆಲವು ತಿಂಗಳಿಂದ ವಿಪರೀತ ಕೆಮ್ಮುನಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ. ನಿನ್ನೆ ಅಕ್ಕನ ಮನೆಯಲ್ಲಿ ದೈವದ ದರ್ಶನ ನಡೆಯುವ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಕಾರ್ತಿಕ್ ಕುಸಿದು ಬಿದ್ದರು ಎನ್ನಲಾಗಿದೆ.  ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾವಿಗೆ ಶರಣಾದ ತೆಲುಗು ಯುವನಟ ಸುಧೀರ್ ವರ್ಮಾ

click me!