ಮೀನು ಹಾಗೂ ಮೀನುಗಾರರ ಅಭಿವೃದ್ಧಿಗಾಗಿ  ಕೃತಕ ಬಂಡೆ ಸಾಲುಗಳ ಅಳವಡಿಕೆಗೆ ಚಾಲನೆ

By Suvarna News  |  First Published Mar 10, 2024, 12:11 AM IST

ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಹಾಗೂ ಮೀನುಗಳ ಸಂತತಿ ವೃದ್ಧಿಸುವ‌ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ‌ ಸರ್ಕಾರದ‌ ಅನುದಾನದಡಿ  ಕೃತಕ ಬಂಡೆಸಾಲುಗಳ (Artificial Reef) ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.


ಉತ್ತರಕನ್ನಡ (ಮಾ.10): ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಹಾಗೂ ಮೀನುಗಳ ಸಂತತಿ ವೃದ್ಧಿಸುವ‌ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ‌ ಸರ್ಕಾರದ‌ ಅನುದಾನದಡಿ  ಕೃತಕ ಬಂಡೆಸಾಲುಗಳ (Artificial Reef) ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.

 ವಿವಿಧ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಈ ಯೋಜನೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ‌ ಗ್ರಾಮದ ಸಮುದ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಈ ಯೋಜನೆಗೆ ಚಾಲನೆ ನೀಡಿದರು.

Latest Videos

undefined

ಬಾವಿ ತೋಡುವ ಕೆಲಸವನ್ನು ಕೈಬಿಡಿ: ಗೌರಿ ನಾಯ್ಕ್ ಅವರಿಗೆ ಮನವಿ ಮಾಡಿದ ಸಚಿವ ಮಂಕಾಳು ವೈದ್ಯ!

 ಸುಸ್ಥಿರ ಮೀನುಗಾರಿಕೆ ನಿರ್ವಹಣೆಗಾಗಿ, ಸಮುದ್ರ ಮೀನುಗಾರಿಕೆಯನ್ನು ಮುಂದಿನ‌‌ ಪೀಳಿಗೆಗೆ ಉಳಿಸಿ ಆಹಾರ ಭದ್ರತೆ ಕಲ್ಪಿಸಲು ಹಾಗೂ ಸಾಂಪ್ರದಾಯಿಕ ಮೀನುಗಾರರ‌ ಜೀವನೋಪಾಯಕ್ಕಾಗಿ ರಾಜ್ಯದ‌ ಕರಾವಳಿಯ ಮೂರು ಜಿಲ್ಲೆಗಳ 56 ಆಯ್ದ ಸೂಕ್ತ ಸ್ಥಳಗಳಲ್ಲಿ  17.37 ಕೋಟಿ ರೂ. ವೆಚ್ಚದಲ್ಲಿ ಕೃತಕ‌ ಬಂಡೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರ ಮೊದಲ ಭಾಗವಾಗಿ ಭಟ್ಕಳ ತಾಲೂಕಿನ‌ ಬೆಳಕೆಯಲ್ಲಿ 180 ಕೃತಕ ಬಂಡೆಗಳ ಅಳವಡಿಕೆ ಪ್ರಕ್ರಿಯೆ ನಡೆದಿದೆ. 

ಈ ವೇಳೆ ಮಾತನಾಡಿದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ, ಮೀನುಗಾರಿಕಾ ವಲಯದ ಪುನಾಶ್ಚೇತನದ ಜೊತೆಗೆ ಸಾಗರ ಪರಿಸರ ಸಂರಕ್ಷಣೆಯ ಮೂಲಕ ಮೀನುಗಾರರಲ್ಲಿ ಹೊಸ ಆಶಾಕಿರಣ ಮತ್ತು ಸಮೃದ್ಧ ಸಾಗರ ಸಬಲೀಕರಣ ಮಾಡುವ ಉದ್ದೇಶದಿಂದ ಕೃತಕ‌ ಬಂಡೆಸಾಲುಗಳನ್ನು ಸ್ಥಾಪಿಸಲಾಗುತ್ತಿದೆ. ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ‌ ಉತ್ತಮ ಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮೀನುಗಾರರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಬೆಳಕೆಯಲ್ಲಿ  ರೂ. 200 ಕೋಟಿ ವೆಚ್ವದಲ್ಲಿ ಬಂದರು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ಬೆಳಕೆಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಜಗದೀಶ್‌ ಶೆಟ್ಟರ್‌ಗೆ ವಯಸ್ಸಾಗಿದೆ, ಪಾಪ ಅವರ ಬಗ್ಗೆ ಏಕೆ ಮಾತನಾಡಬೇಕು: ಸಚಿವ ಮಂಕಾಳು ವೈದ್ಯ

ರಾಜ್ಯದ ಈ ವರ್ಷದ ಬಜೆಟ್ ನಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ 5000  ಕೋಟಿ ರೂ. ಮೀಸಲಿಡುವ ಮೂಲಕ ರಾಜ್ಯದ ಸಮಸ್ತ ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಬಳಿಕ ಸಮುದ್ರದಲ್ಲಿ ಆರ್ಟಿಫೀಶಿಯಲ್ ರೀಫ್ ಅಳವಡಿಕೆಯ ಬಳಿಕ ಸಮುದ್ರಕ್ಕೆ ಹಾರಿದ ಸಚಿವರು ಕೆಲವು ಹೊತ್ತು ಸಮುದ್ರದಲ್ಲಿ ಈಜಾಡಿ ಸಂತೋಷಪಟ್ಟ ದೃಶ್ಯಗಳು ಕಂಡು ಬಂತು.

click me!