ಹಾಸನ : ಬೀದಿ ನಾಯಿಗಳಿಂದ ಜನರಿಗೆ ಇನ್ನಿಲ್ಲದ ಸಂಕಷ್ಟ!

By Web DeskFirst Published Sep 2, 2019, 1:00 PM IST
Highlights

ಬೀದಿ ನಾಯಿಗಳ ಹಾವಳಿ ವೀಪರೀತವಾಗಿದ್ದು ಇಲ್ಲಿನ ನಾಗರಿಕರು ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅರಸೀಕೆರೆ ಜನತೆಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 

ಅರಸೀಕೆರೆ [ಸೆ.02]:  ನಗರದ ಅನೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ವೀಪರೀತವಾಗಿದೆ. ನಾಗರಿಕರು ಇನ್ನಿಲ್ಲದ ಸಂಕಷ್ಟಗಳನ್ನು ಈ ಶ್ವಾನಗಳಿಂದ ಅನುಭವಿಸಬೇಕಾಗಿದೆ. ನಾಗರಿಕರಿಗೆ ಅಲ್ಲದೇ, ನಾಯಿಗಳ ಅಟ್ಟಹಾಸ ಕ್ರೀಡಾಪಟುಗಳು ಹಾಗೂ ಕ್ರೀಡಾಕೂಟದ ಆಯೋಜಕರ ತಲೆನೋವಾಗಿ ಪರಿಣಮಿಸಿದೆ.

ನಗರದ ಜೇನುಕಲ್‌ ಕ್ರೀಡಾಂಗಣದಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಪ್ರೌಢ ಶಾಲೆಗಳ ಕ್ರೀಡಾಕೂಟ ನಡೆಯುತ್ತಿದ್ದು, ಕುಡಿವ ನೀರು, ನೆರಳು, ಹೀಗೆ ಕೆಲವೊಂದು ಮೂಲಭೂತ ವ್ಯವಸ್ಥೆಗಳು ಕ್ರೀಡಾ ಆಯೋಜಕರು ಮತ್ತು ವಿದ್ಯಾರ್ಥಿಗಳಿಗೆ ಕಾಡುತ್ತಿದ್ದರೆ, ಇದಕ್ಕೂ ಮಿಗಿಲಾಗಿ ಬೀದಿ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದೆ. ಭಯ ವಾತವರಣದಲ್ಲಿ ಕ್ರೀಡಾಪಟುಗಳ ವಿವಿಧ ಆಟೋಟ ಸ್ಫರ್ಧೆಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

ರೋಚಕ ಹಾಗೂ ಕುತುಹಲಕಾರಿ ಘಟ್ಟದಲ್ಲಿ ಕೆಲವೊಂದು ಆಟೋಟ ಸ್ಪರ್ಧೆ ನಡೆಯುವ ವೇಳೆ ದಿಢೀರನೆ ಅಡ್ಡದಿಡ್ಡಿಯಾಗಿ ನುಗ್ಗುವ ಈ ಬೀದಿ ನಾಯಿಗಳ ಅವಾಂತರದಿಂದಾಗಿ ಕ್ರೀಡಾಪಟುಗಳು ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂಡು ಹಿಂಡಾಗಿ ಕ್ರೀಡಾಂಗಣದಲ್ಲಿ ಅಡ್ಡಾಡುತ್ತಿರುವ ಈ ಬೀದಿ ಬಾಯಿಗಳನ್ನ ಓಡಿಸುವುದೇ ಶಿಕ್ಷಕರ ಕೆಲಸವಾಗಿದೆ. ಪರಿಸ್ಥಿತಿ ಹೀಗಿದ್ದರೂ ಕ್ರಮಕೈಗೊಳ್ಳಬೇಕಾದ ನಗರಸಭೆ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಓಟದ ಸ್ಪರ್ಧೆಯ ವೇಳೆ ಕ್ರೀಡಾಪಟುಗಳು ಓಡುವ ವೇಳೆ ಏಕಾಏಕಿ ಬೀದಿನಾಯಿ ಅಟ್ಟಿಸಿಕೊಂಡು ಬಂತು. ಆ ವೇಳೆ ಅಲ್ಲೇ ಇದ್ದ ಶಿಕ್ಷಕರು ಆ ನಾಯಿಗಳನ್ನು ಓಡಿಸಿದ್ದರಿಂದ ಅದೃಷ್ಟವಶಾತ್‌ ಕ್ರೀಡಾಪಟು ವಿದ್ಯಾರ್ಥಿಗೆ ಯಾವುದೇ ರೀತಿ ತೊಂದರೆಯಾಗಲಿಲ್ಲ.

ಒಂದು ವೇಳೆ ಶಿಕ್ಷಕರು ಈ ಕೆಲಸ ಮಾಡದೇ ಹೋಗಿದ್ದರೆ ಈ ಬೀದಿ ನಾಯಿ ದಾಳಿಗೆ ಕ್ರೀಡಾಪಟು ವಿದ್ಯಾರ್ಥಿ ದಾಳಿಗೆ ಓಳಗಾಗಿ ಗಾಯಗೊಳ್ಳಬೇಕಾಗಿತ್ತು ಎಂದು ಪ್ರತ್ಯಕ್ಷ ದರ್ಶಿ ಪೋಷಕರು ಕಳವಳ ವ್ಯಕ್ತಪಡಿಸಿದರು.

ಈ ಸಂಭಂದ ಪತ್ರಿಕೆಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ರೀಡಾಕೂಟ ಆಯೋಜನೆ ಮಾಡುವ ಶಾಲೆ ಮತ್ತು ಆಡಳಿತ ಮಂಡಳಿಯಿಂದ ಯಶಸ್ವಿಯಾಗಿ ಕ್ರೀಡಾಕೂಟ ನಡೆಯುತ್ತಿದೆ. ಆದರೆ, ಕ್ರೀಡಾಂಗಣದಲ್ಲಿ ಬೀದಿ ನಾಯಿಗಳ ಉಪಟಳ ಕುರಿತು ಶಿಕ್ಷಕರು ಹಾಗೂ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತಕ್ಕೆ ಶಿಕ್ಷಣ ಇಲಾಖೆವತಿಯಿಂದ ಲಿಖಿತ ರೂಪದಲ್ಲಿ ಮನವಿ ಮಾಡಲಾಗುವುದು ಎಂದರು.

click me!