ಶಿವಮೊಗ್ಗ (ಸೆ.06): ಕಳೆದೊಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿರುವ ರಾಶಿಇಡಿ ಮಾದರಿಯ ಅಡಕೆ ಕ್ವಿಂಟಾಲ್‌ಗೆ 60 ಸಾವಿರ ದಾಖಲಿಸುವದರೊಂದಿಗೆ ಇನ್ನೊಂದು ಧಾರಣೆ ಮೈಲಿಗಲ್ಲು ಮುಟ್ಟಿದೆ.
ಭಾನುವಾರ ತೀರ್ಥಹಳ್ಳಿಯ ಸಹ್ಯಾದ್ರಿ ಅಡಕೆ ಮಾರಾಟ ಸಹಕಾರಿ ಸಂಸ್ಥೆಯಲ್ಲಿ ನಡೆದ ಅಡಕೆ ವಹಿವಾಟಿನಲ್ಲಿ ರಾಶಿಹಿಡಿ ಮಾದರಿಯ ಅಡಕೆ ಗರಿಷ್ಠ .60,009ಗೆ ಮಾರಾಟವಾಗಿದ್ದು ಅಡಕೆ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.
ಅಡಕೆಯಿಂದ ಹೋಳಿಗೆ ತಯಾರಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
ಆದರೆ ಕೊಪ್ಪ ಮತ್ತು ಶೃಂಗೇರಿಯಲ್ಲಿ ನಡೆದ ಮ್ಯಾಮ್‌ಕೋಸ್ ವಹಿವಾಟಿನಲ್ಲಿ ರಾಶಿಇಡಿ ಮಾದರಿಯ ಅಡಕೆ ಗರಿಷ್ಟ59,699ಕ್ಕೆ ಮಾರಾಟ ಕಂಡಿದೆ.