ಷೇರು ಬಂಡವಾಳ ರೂಪದಲ್ಲಿ ಧನ ಸಹಾಯ: ಅರ್ಜಿ ಆಹ್ವಾನ

By Web DeskFirst Published Jun 21, 2019, 9:01 PM IST
Highlights

ಸಹಕಾರ ಸಂಘದ ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳದ ಶೇಕಡ 50 ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ ಷೇರು ಬಂಡವಾಳದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು.

ಮೈಸೂರು (ಜೂ.21): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸದೃಢವಾಗಿಸುವ ಸಲುವಾಗಿ ಷೇರು ಬಂಡವಾಳ ರೂಪದಲ್ಲಿ ಧನ ಸಹಾಯ ನೀಡಲು ಪರಿಶಿಷ್ಟ ಜಾತಿಯ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಸಹಕಾರ ಸಂಘದ ಒಟ್ಟು ಸದಸ್ಯರ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರು ಶೇಕಡ 70 ಹಾಗೂ ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗಕ್ಕೆ ಸೇರಿದ ಸದಸ್ಯರ ಸಂಖ್ಯೆ ಶೇಕಡ 30 ಇರತಕ್ಕದ್ದು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ಸಹಕಾರ ಸಂಘವು ನೊಂದಣಿಯಾಗಿರಬೇಕು. ಸಹಕಾರ ಸಂಘವು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರಬೇಕು.

ಸಹಕಾರ ಸಂಘದ ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳದ ಶೇಕಡ 50 ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ ಷೇರು ಬಂಡವಾಳದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಭಾರತೀಯ ವಾಯುಪಡೆ ನೇಮಕಾತಿ

ಅರ್ಜಿಯನ್ನು ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಡಾ:ಬಾಬು ಜಗಜೀವನರಾಂ ಭವನ ಕಟ್ಟದ ನಾರಾಯಣಸ್ವಾಮಿ ಬ್ಲಾಕ್, ಆದಿಪಂಪ ರಸ್ತೆ, ಪಡುವಾರಹಳ್ಳಿ, ಹಾಗೂ ಆಯಾಯಾ ತಾಲೂಕು ಸಹಾಯಕ ನಿರ್ದೇಶಕರಲ್ಲಿ ಪಡೆಯಬಹುದಾಗಿದೆ. 

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!