ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೋನಾ ವೈರಸ್ ಪ್ರಕರಣ ಈಗ ಕೇರಳದಲ್ಲೂ ಪತ್ತೆಯಾಗಿದ್ದು, ಕೇರಳ ಹಾಗೂ ಕೊಡಗಿನ ಗಡಿಭಾಗದ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ವೈರಸ್‌ನಿಂದ ಬರುವ ರೋಗ ಸಾಂಕ್ರಾಮಿಕವಾಗಿರುವುದರಿಂದ ಕೇರಳದಿಂದ ಕೊಡಗಿಗೂ ಹಬ್ಬುವ ಭೀತಿ ಮೂಡಿದೆ.
ಮಡಿಕೇರಿ(ಫೆ.01): ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೋನಾ ವೈರಸ್ ಪ್ರಕರಣ ಈಗ ಕೇರಳದಲ್ಲೂ ಪತ್ತೆಯಾಗಿದ್ದು, ಕೇರಳ ಹಾಗೂ ಕೊಡಗಿನ ಗಡಿಭಾಗದ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ವೈರಸ್‌ನಿಂದ ಬರುವ ರೋಗ ಸಾಂಕ್ರಾಮಿಕವಾಗಿರುವುದರಿಂದ ಕೇರಳದಿಂದ ಕೊಡಗಿಗೂ ಹಬ್ಬುವ ಭೀತಿ ಮೂಡಿದೆ.
ಚೀನಾದಲ್ಲಿ ಕೊರೋನಾ ವೈರಸ್ ರಾಷ್ಟ್ರ ವ್ಯಾಪಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಕೇರಳದ ಅನೇಕ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಹೆದರಿ ಕೇರಳಕ್ಕೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
undefined
ಚೀನಾದಲ್ಲಿ ಸಿಲುಕಿಕೊಂಡ ಶಿರಾ ವಿದ್ಯಾರ್ಥಿ!
ಕೇರಳ ಅತಿ ಹೆಚ್ಚಿನ ಕರಾವಳಿ ಪ್ರದೇಶವನ್ನು ಹೊಂದಿದ್ದು, ಸಮುದ್ರದ ಮೀನಿಗಾಗಿ ದಕ್ಷಿಣ ಕೊಡಗಿನ ಮೀನು ವ್ಯಾಪಾರಿಗಳು ತಲಚೇರಿ, ಕಣ್ಣಾನೂರು ಸಮುದ್ರದ ಕರಾವಳಿಯನ್ನು ಅವಲಂಬಿಸಿದ್ದಾರೆ. ಇಲ್ಲಿಂದ ಪ್ರತಿ ದಿನ ಒಂದು ಟನ್‌ಗೂ ಅಧಿಕವಾಗಿ ಹಸಿ ಮೀನು ದಕ್ಷಿಣ ಕೊಡಗಿಗೆ ರವಾನೆಯಾಗುತ್ತಿದೆ. ಕೇರಳದಲ್ಲಿ ಪತ್ತೆಯಾದ ಕೊರೋನ ವೈರಸ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಮೀನಿನ ಮೂಲಕ ಕೊಡಗಿಗೆ ಹಬ್ಬುವ ಆತಂಕವೂ ಇದೆ. ಕೇರಳದಲ್ಲಿ ಈ ವೈರಸ್ ರೋಗ ಹರಡುತ್ತಿದೆ ಎಂಬ ಭಯದಿಂದ ದಕ್ಷಿಣ ಕೊಡಗಿನಲ್ಲಿ ಕೇರಳ ಸಮುದ್ರದಿಂದ ಬರುವ ಹಸಿ ಮೀನನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
ಕೊರೋನಾ ಬಗ್ಗೆ ಭಯ ಬೇಡ, ಎಚ್ಚರವಿರಲಿ..!
ಸದ್ಯ ಕೇರಳದಲ್ಲಿ ಪತ್ತೆಯಾದ ಕೊರೋನ ವೈರಸ್ ರೋಗ ಬೇರೆಡೆ ಹರಡದಂತೆ ಮುಂಜಾಗರೂಕತೆ ವಹಿಸುವುದು ಅಗತ್ಯವಾಗಿದೆ. ಕೊರೋನಾ ಭೀತಿಯಿಂದ ದಕ್ಷಿಣ ಕೊಡಗಿನ ಮಾರುಕಟ್ಟೆಗಳಲ್ಲಿ ಸಮುದ್ರದ ಹಸಿಮೀನಿನ ಬೇಡಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ತಿಳಿದುಬಂದಿದೆ.