ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಸ್ವಚ್ಛತೆಗೆ ಎಚ್ಚೆತ್ತುಕೊಂಡ ಪಂಚಾಯ್ತಿ
ಶಹಾಪುರ(ಅ.28): ಜಿಲ್ಲೆಯ ಶಹಾಪುರದ ಹೋತಪೇಟೆಯಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ. ವಾಂತಿಭೇದಿಯಿಂದ ಬಳಲುತ್ತಿದ್ದ ಸಿದ್ಧಮ್ಮ ಹಿರೇಮಠ್ (62) ಮೃತರು. ಈ ಮೂಲಕ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದಂತಾಗಿದ್ದು, ನಾಲ್ವರು ಮಕ್ಕಳು ಸೇರಿದಂತೆ 38 ಜನರನ್ನು ತಾಲೂಕು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ, ಪರಿಸ್ಥಿತಿ ತಹಬದಿಗೆ ಬಂದಿದೆ.
ಕಲುಷಿತ ನೀರು ಸೇವನೆಯಿಂದಾಗಿ ಇದೇ 22 ರಂದು ಹೊನ್ನಪ್ಪಗೌಡ (42) ಹಾಗೂ 24 ರಂದು ವೃದ್ಧೆ ಈರಮ್ಮ (80) ಮೃತಪಟ್ಟಿದ್ದರು. ಗ್ರಾಮದಲ್ಲಿರುವ ತೆರೆದ ಬಾವಿಯ ಮೂಲಕ ಅಲ್ಲಿನ ಟ್ಯಾಂಕರ್‌ಗೆ ನೀರು ಪೂರೈಕೆಯಾಗಿದೆ. ಟ್ಯಾಂಕರ್ ನೀರು ನಲ್ಲಿಗಳ ಮೂಲಕ ಮನೆ ಮನೆಗಳಿಗೆ ಸರಬರಾಜಾದಾಗ ವಾಂತಿಭೇದಿ ಕಾಣಿಸಿಕೊಂಡಿದೆ. ತೆರೆದ ಬಾವಿಯಲ್ಲಿ ಹಾಗೂ ಟ್ಯಾಂಕರನಲ್ಲಿ ಕಲುಷಿತ ನೀರು ಹಾಗೂ ನಲ್ಲಿಗಳ ಮೂಲಕ ಮನೆಗಳಿಗೆ ಬರುವಾಗ ಚರಂಡಿ ನೀರು ಮಿಶ್ರರಣವಾಗಿರವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು.
undefined
ಯಾದಗಿರಿ: ಇಬ್ರು ಸತ್ತ ಮೇಲೆ ಅಧಿಕಾರಿಗಳು ಓಡಿ ಬಂದ್ರು..!
ಹೀಗಾಗಿ, ಸ್ವಚ್ಛತಾ ಕಾರ್ಯ ಸೇರಿದಂತೆ ಜನರ ಆರೋಗ್ಯ ತಪಾಸಣೆಗೆ ಇಲಾಖೆಯ ಅಧಿಕಾರಿಗಳು ಅಲ್ಲಿ ಬೀಡುಬಿಟ್ಟಿದ್ದರು. ಸದ್ಯ, ಹೋತಪೇಟೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಸ್ವಸ್ಥಗೊಂಡಿದ್ದ 200ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ಸ್ಥಿತಿ ಇದೀಗ ನಿಯಂತ್ರಣಕ್ಕೆ ಬಂದಿರುವುದು ಜನರಲ್ಲಿ ನಿರುಮ್ಮಳ ಮೂಡಿಸಿದೆ.
ಹೋತಪೇಟೆ ಗ್ರಾಮದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ದಂಡು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಾರ್ವಜನಿಕರ ಆರೋಗ್ಯದ ನಿಗಾವಹಿಸಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಮನೆ ಬಾಗಿಲಿಗೆ ಭೇಟಿ ಆರೋಗ್ಯದ ವರದಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೋತಪೇಟೆ ಗ್ರಾಮಕ್ಕೆ ವಿವಿಧ ಸಂಘಟನೆಗಳ ಮುಖಂಡರು ದಿನ ನಿತ್ಯ ಭೇಟಿ ಮಾಡಿ ಜನರ ಆರೋಗ್ಯವನ್ನು ಪರಿಶೀಲಿಸುತ್ತಿದ್ದಾರೆ.
ಸಾವಿನಲ್ಲಿ ಗೊಂದಲ:
ಕಲುಷಿತ ನೀರು ಸೇವಿಸಿದ ಬಳಿಕ ವಾಂತಿಭೇದಿಯಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದರೆ, ಗ್ರಾಮಸ್ಥರು ತಿಳಿಸಿರುವ ಪ್ರಕಾರ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಇದನ್ನೆಲ್ಲ ಗಮನಿಸಿದರೆ ಬೇಕು ಎಂತೆಲೇ ಸಾವುಗಳನ್ನು ಮುಚ್ಚಿಡುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತದೆಯೇ ಎಂಬುವ ಅನುಮಾನ ಮೂಡುತ್ತಿದೆ ಎಂದು ಮುಖಂಡ ಚನ್ನಪ್ಪ ಆನೆಗೊಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಮನೆಗಳಿಗೆ ಎಲೋಜಿನ್ ಮಾತ್ರಗಳನ್ನು ನೀಡಲಾಗಿದ್ದು, ಕುಡಿಯುವ ನೀರಿನಲ್ಲಿ ಹಾಕಿ ಕರಗಿದ ನಂತರವೇ ನೀರನ್ನು ಸೇವಿಸಬೇಕು ಎಂಬುದಾಗಿ ಜನರಲ್ಲಿ ತಾಲೂಕು ಪಂಚಾಯತ್ ವತಿಯಿಂದ ಡಂಗೂರ ಮೂಲಕ, ಧ್ವನಿವರ್ಧಕ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸಲಾಗಿದೆ.
ಬಾವಿ ನೀರು ಬಳಸದಂತೆ ಸೂಚನೆ:
ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಾವಿ ನೀರನ್ನು ಬಳಸದಂತೆ ನಿಷೇೕಧ ಹೇರಲಾಗಿದೆ. ಬಾವಿಗೆ ಜೋಡಿಸಿದ್ದ ನೀರು ಎತ್ತುವ ಯಂತ್ರವನ್ನು ತೆಗೆಯಲಿದೆ ರೋಗ ತಹಬಂದಿಗೆ ಬಂದ ನಂತರ ಮತ್ತೆ ಬಾವಿಯಿಂದ ನೀರು ಪೂರೈಕೆ ಮಾಡಲು ಚಿಂತಿಸಲಾಗುವುದು ಎಂದು ತಾಲೂಕು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಂತಿಭೇದಿಯಾದ 35 ಜನರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ನನಗೆ ಮತ್ತು ತಾಯಿ ಅವರಿಗೆ ವಾಂತಿಭೇದಿ ಕಂಡು ಬಂದಿದೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದೇವು. ಆದರೆ ನನ್ನ ತಾಯಿಗೆ ವಾಂತಿಭೇದಿ ತೀವ್ರಗೊಂಡಿದ್ದರಿಂದ ಅಲ್ಲಿಯೇ ಮೃತಪಟ್ಟರು. ನಾನು ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿದ್ದೇನೆ. ನನ್ನ ಪತ್ನಿಗೆ ರೋಗ ಕಂಡುಬರದಿದ್ದರೂ ಮುಂಜಾಗೃತೆ ವಹಿಸಲಾಗಿದೆ ಎಂದು ತಾಯಿ ಕಳೆದುಕೊಂಡ ಶಾಂತಕುಮಾರ ತಿಳಿಸಿದ್ದಾರೆ.
ವಾಂತಿಭೇದಿಯಿಂದ 38 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳು ಶಹಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೆರಡು ದಿನಗಳಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ವಯೋಸಹಜ ಮತ್ತು ಇತರೆ ಕಾರಣಗಳಿಂದ ಮೂವರು ಮೃತಪಟ್ಟಿದ್ದಾರೆ ಎಂದು ವæೖದ್ಯರು ತಿಳಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮ: ಶೀಘ್ರ 5 ಚಾರ್ಜ್‌ಶೀಟ್ ಸಲ್ಲಿಕೆ
ಜನರು ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡಬೇಕು. ಕಾಯಿಸಿ ಆರಿಸಿದ ನೀರನ್ನು ಆರೋಗ್ಯ ಸುಧಾರಿಸುವವರೆಗೂ ಸೇವಿಸಬೇಕು. ಶುದ್ಧ ಕುಡಿಯುವ ನೀರು ಘಟಕದ ನೀರನ್ನು ಬಳಸಬೇಕು. ಗ್ರಾಮದಲ್ಲಿರುವ ಟ್ಯಾಂಕ್‌ಗಳನ್ನು ಸ್ವಚ್ಛತೆ ಮಾಡಲಾಗಿದೆ. ನಿತ್ಯ ಸಂಜೆ ಫಾಗಿಂಗ್ ಮಾಡಲಾಗುತ್ತದೆ. ಗ್ರಾಮಸ್ಥರು ಆರೋಗ್ಯದೆಡೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಪಂನ ಸಲಹೆ ಸೂಚನೆಗಳನ್ನು ಪಾಲಿಸಬೇಕು ಅಂತ ಹೋತಪೇಟೆ ಗ್ರಾಪಂ ಪಿಡಿಒ ಸುನಂದಾ ತಿಳಿಸಿದ್ದಾರೆ.
ಹೋತಪೇಟೆ ಗ್ರಾಮದ ವಾರ್ಡ್ 1ರಲ್ಲಿ ನಡೆದ ವಾಂತಿ ಭೇದಿ ಪ್ರಕರಣವೂ ಯಾವುದರಿಂದ ಆಗಿದೆ ಎಂಬುದು ವೈದ್ಯರ ವರದಿಯ ಬಳಿಕವೇ ತಿಳಿಯಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿವ ನೀರಿನ ಘಟಕ ಈಗಾಗಲೇ ಆರಂಭಿಸಲಾಗಿದೆ. ಹೊಸ ಕೊಳವೆಬಾವಿ ಕೊರೆಯಲು ಸ್ಥಳ ಪರಿಶೀಲಿಸಲಾಗಿದೆ. ಕಳೆದೆರಡು ದಿನಗಳಿಂದ ಯಾವುದೇ ಹೊಸ ಪ್ರಕರಣ ಕಂಡುಬಂದಿಲ್ಲ. ಜನರಿಗೆ ತೊಂದರೆಯಾದಲ್ಲಿ ತಿಳಿಸಿದರೆ ತಕ್ಷಣವೇ ಸಮಸ್ಯೆಗೆ ಸ್ಪಂದಿಸಲಾಗುವುದು. ಸ್ಥಳದಲ್ಲೇ 6 ಜನರಿಂದ ಕೂಡಿದ ವೈದ್ಯರ ತಂಡ ಸೇವೆ ಸಲ್ಲಿಸುತ್ತಿದೆ ಅಂತ ಶಹಾಪುರ ತಾ.ಪಂ. ಇಒ ಸೋಮಶೇಖರ ಬಿರಾದಾರ ಹೇಳಿದ್ದಾರೆ.