ರಾಯಚೂರು ಜಿಲ್ಲೆಯ ಮಸ್ಕಿಯ ಬ್ಯಾಂಕ್ ಉದ್ಯೋಗಿ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆಸೂರು ಗ್ರಾಮದ ನಿವಾಸಿ| ಪ್ರಾಥಮಿಕ ಸಂಪರ್ಕದ ವ್ಯಕ್ತಿ ಕೊಪ್ಪಳದಲ್ಲಿಯೂ ಸುತ್ತಾಡಿದ್ದ| ಸೋಂಕಿತ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ಮನೆಯವರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣನೆ|
ಕೊಪ್ಪಳ(ಮೇ.27): ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಆದರೆ, ಪಿ. 2254 ಈತ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆಸೂರಿನಲ್ಲಿ ವಾಸವಾಗಿದ್ದಾರೆ.
ಈಗಾಗಲೇ ಕೆಸೂರು ಗ್ರಾಮದ 70 ಮನೆಗಳನ್ನು ಕಂಟೈನ್ಮೆಂಟ್ ಜೋನ್ ಮಡಲಾಗಿದ್ದು, ಕೆಸೂರು ಮತ್ತು ದೋಟಿಹಾಳ ಗ್ರಾಮವನ್ನು ಬಫರ್ ಜೋನ್ ಎಂದು ಘೋಷಿಸಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ.
undefined
ಹೇಗೆ ಪತ್ತೆಯಾಯಿತು?:
ಇವರು ಕೆನರಾ ಬ್ಯಾಂಕಿನ ಅಗ್ರಿಕಲ್ಚರ್ ಪೀಲ್ಡ್ ಆಫೀಸರ್ ಆಗಿ ಮಸ್ಕಿ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಸ್ವಗ್ರಾಮವಾದ ಕೆಸೂರಿಗೆ ಬರುತ್ತಿದ್ದರು. ಮೇ 17ರಂದು ಇವರಿಗೆ ಜ್ವರ ಕಾಣಿಸಿಕೊಂಡಿದ್ದು ಅಂದೇ ಗ್ರಾಮಕ್ಕೆ ಆಗಮಿಸಿ ಮಸ್ಕಿಗೆ ತೆರಳಿ ಮೇ 18, 19ರಂದು ಅಲ್ಲಿಯೇ ಉಳಿದುಕೊಂಡಿದ್ದಾರೆ. ಮರಳಿ ಗ್ರಾಮಕ್ಕೆ ಆಗಮಿಸಿ ಸ್ಥಳೀಯವಾಗಿಯೇ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಮೇ 24ರಂದು ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಇವರ ಗಂಟಲು ದ್ರವ ಸಂಗ್ರಹಿಸಿ ಬಿಡುಗಡೆ ಮಾಡಲಾಗಿದೆ. ಆದರೆ, ಇವರ ಪ್ರಯೋಗಾಲಯದ ವರದಿ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಕರೆದುಕೊಂಡು ಬರಲಾಗಿದೆ. ಹೀಗಾಗಿ ಇವರ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ಮನೆಯವರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಲಾಗಿದೆ.
ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್ ಆರಂಭ?
ಕೊಪ್ಪಳಕ್ಕೆ ಬಂದ:
ಇವರ ಸಹೋದರ ಕೆಲಸ ನಿಮಿತ್ತ ಕೊಪ್ಪಳಕ್ಕೆ ಆಗಮಿಸಿದ್ದು ಅಲ್ಲದೆ ಗಂಜ್ ಸರ್ಕಲ್‌ನಲ್ಲಿರುವ ಸಂಗೀತ ಮೊಬೈಲ್ ಶಾಪ್‌ಗೆ ಮತ್ತು ಕೊಪ್ಪಳದ ಐಸಿಐಸಿಐ ಬ್ಯಾಂಕಿಗೆ ಭೇಟಿ ನೀಡಿದ್ದಾರೆ. ಹೀಗಾಗಿ, ಈಗ ಕೊಪ್ಪಳದಲ್ಲಿಯೂ ಆತಂಕ ಶುರುವಾಗಿದೆ. ಇವರು ಸಂಗೀತ ಮೊಬೈಲ್ ಶಾಪ್‌ಗೆ ಬಂದಾಗ ಅಲ್ಲಿ ಯಾರಾರಯರು ಇದ್ದರು. ಅಂಗಡಿಯಲ್ಲಿ ಯಾರು ಇವರೊಂದಿಗೆ ವ್ಯವಹರಿಸಿದರು. ಐಸಿಐಸಿಐ ಬ್ಯಾಂಕಿಗೆ ಭೇಟಿ ನೀಡಿದಾಗ ಅಲ್ಲಿ ಯಾರಾರಯರು ಇದ್ದರು. ಇವರೆಲ್ಲರೂ ಸೆಕಂಡರಿ ದ್ವಿತೀಯ ಸಂಪರ್ಕಿರಾಗಿದ್ದಾರೆ.
ಸರ್ಕಾರಕ್ಕೆ ಪತ್ರ:
ರಾಯಚೂರು ಜಿಲ್ಲೆಯ ಮಸ್ಕಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿರುವುದರಿಂದ ಮತ್ತು ಅಲ್ಲಿಯೇ ಇರುವುದರಿಂದ ಇವರನ್ನು ಕೊಪ್ಪಳ ಜಿಲ್ಲೆಯಾತ ಎಂದು ಪರಿಗಣಿಸಬೇಕೇ ಅಥವಾ ರಾಯಚೂರು ಜಿಲ್ಲೆಯ ಪ್ರಕರಣಗಳ ವ್ಯಾಪ್ತಿಗೆ ಬರುತ್ತಾರೆ ಎನ್ನುವುದನ್ನು ತಿಳಿಸುವಂತೆ ಸರ್ಕಾರಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಈಗಾಗಲೇ ಸರ್ಕಾರ ಪ್ರಕಟಣೆ ಮಾಡಿರುವ ಯಾದಿಯಲ್ಲಿ ಪಿ. 2254 ಕೊಪ್ಪಳ ಜಿಲ್ಲೆಯ ಪ್ರಕರಣವೆಂದೆ ಪರಿಗಣಿಸಿದೆ. ಇವರನ್ನು ಕೊಪ್ಪಳದ ವ್ಯಕ್ತಿ ಎಂದು ಪರಿಗಣಿಸಿದರೆ ಕೊಪ್ಪಳ ಜಿಲ್ಲೆಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಲಿದೆ.
ಪಿ. 2254 ವ್ಯಕ್ತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಇದಾಗುತ್ತಿದ್ದಂತೆ ಸೆಂಕಂಡರಿ ಕಾಂಟೆಕ್ಟ್ ಇರುವವರನ್ನು ಪತ್ತೆ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕ ಇದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಹೇಳಿದ್ದಾರೆ.