ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದ 38 ವರ್ಷದ ಮಹಿಳೆ ಪಿ-5830(ಬಿಜಿಕೆ-94) ಕೋವಿಡ್ ದೃಢ| ಸೋಂಕಿತ ಮಹಿಳೆ ಮಹಾರಾಷ್ಟ್ರ ರಾಜ್ಯದಿಂದ ಅಲ್ಲಿಯ ಸಂಬಂಧಿಕರಿಂದ ಸೋಂಕು ದೃಢ| ಜೂನ್ 2 ರಂದು ರೈಲು ಮೂಲಕ ಬಾಗಲಕೋಟೆಗೆ ಬಂದಿಳಿದಿದ್ದ ತಾಯಿ ಮತ್ತು ಮಗಳಲ್ಲಿ ಸೋಮವಾರ ಮಗಳಿಗೆ ಸೋಂಕು ಪತ್ತೆ| ಮಂಗಳವಾರ ತಾಯಿಗೆ ಸೋಂಕು ದೃಢ|
ಬಾಗಲಕೋಟೆ(ಜೂ.10): ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಓರ್ವ ಮಹಿಳೆಗೆ ಕೋವಿಡ್ ದೃಢವಾಗಿದ್ದು ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ.
ಇಳಕಲ್ಲ ನಗರದ 38 ವರ್ಷದ ಮಹಿಳೆ ಪಿ-5830(ಬಿಜಿಕೆ-94) ಕೋವಿಡ್ ದೃಢಪಟ್ಟಿದೆ. ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದು ಅಲ್ಲಿಯ ಸಂಬಂಧಿಕರಿಂದ ಸೋಂಕು ದೃಢವಾಗಿದೆ, ಜೂನ್ 2 ರಂದು ರೈಲು ಮೂಲಕ ಬಾಗಲಕೋಟೆಗೆ ಬಂದಿಳಿದಿದ್ದ ತಾಯಿ ಮತ್ತು ಮಗಳಲ್ಲಿ ಸೋಮವಾರ ಮಗಳಿಗೆ ಸೋಂಕು ದೃಢವಾಗಿತ್ತು. ಮಂಗಳವಾರ ತಾಯಿಗೆ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಿಂದ ಹೊಸದಾಗಿ 150 ಸ್ಯಾಂಪಲ್‌ಗಳು ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್ ನಿಗಾದಲ್ಲಿ ಇದ್ದವರು 472 ಜನ ಆಗಿದ್ದರೆ, ಜಿಲ್ಲೆಯಿಂದ ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ ಗಳು 9013 ಆಗಿದೆ. ಒಟ್ಟು ನೆಗೆಟಿವ್ ಪ್ರಕರಣ 8725 ಆದರೆ, ಪಾಜಿಟಿವ್ ಪ್ರಕರಣ 94, ಮೃತ ಪ್ರಕರಣ 1 ಆಗಿದೆ ಎಂದು ತಿಳಿಸಿದ್ದಾರೆ.
ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ
ಕೋವಿಡ್-19 ನಿಂದ ಇಲ್ಲಿಯವರೆಗೆ ಗುಣಮುಖರಾದವರು 83 ಜನ. ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 10 ಜನ ಆಗಿದ್ದಾರೆ. ಕಂಟೈನ್ಮೆಂಟ್ ಝೋನ್ 1 ಆದರೆ ರಿಜೆಕ್ಟಾದ ಸ್ಯಾಂಪಲ್ ಗಳು 13 ಆಗಿವೆ. 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆ ಹೊಂದಿದವರು ಒಟ್ಟು 2839 ಜನ ಆಗಿದ್ದಾರೆ ಎಂದು ತಿಳಿಸಿದ್ದಾರೆ.