Latest Videos

ಡಾಕ್ಯುಮೆಂಟ್ಸ್ ಸರಿ ಇಲ್ಲದ ಕಾರಣ ಗದಗನಲ್ಲಿ ಆಂಧ್ರದ ಖಾಸಗಿ ಬಸ್ ಸೀಜ್: ಪ್ರವಾಸಿಗರ ಪರದಾಟ!

By Govindaraj SFirst Published May 22, 2024, 7:50 PM IST
Highlights

ಚಾರ್ಸಿ, ಇಂಜಿನ್ ನಂಬರ್ ತಿರುಚಿರುವ ಹಿನ್ನೆಲೆ ಆಂಧ್ರ ಮೂಲದ ಖಾಸಗಿ ಬಸ್ಸನ್ನ ಗದಗ ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದ್ರಿಂದಾಗಿ ಬಸ್ ನಲ್ಲಿ ಪ್ರಯಾಣಿಸ್ತಿದ್ದ 49 ಪ್ರಯಾಣಿಕರು, ಆರ್ ಟಿಒ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ. 

ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ.22): ಚಾರ್ಸಿ, ಇಂಜಿನ್ ನಂಬರ್ ತಿರುಚಿರುವ ಹಿನ್ನೆಲೆ ಆಂಧ್ರ ಮೂಲದ ಖಾಸಗಿ ಬಸ್ಸನ್ನ ಗದಗ ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದ್ರಿಂದಾಗಿ ಬಸ್ ನಲ್ಲಿ ಪ್ರಯಾಣಿಸ್ತಿದ್ದ 49 ಪ್ರಯಾಣಿಕರು, ಆರ್ ಟಿಒ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಮೂಲದ 49 ಜನ, ಆಂಧ್ರ, ಕರ್ನಾಟಕ, ಗೋವಾ ಪ್ರವಾಸ ಕೈಕೊಂಡಿದ್ರು..ಸ್ಥಳೀಯವಾಗಿ ವೆಂಕಟಲಕ್ಷ್ಮೀನಾಯಾರಣ ಅನ್ನೋರ ಬಳಿ ಇದ್ದ AP03 TE8520 ನಂಬರಿನ ಬಸ್ ಬುಕ್ ಮಾಡಲಾಗಿತ್ತು. ಒಟ್ಟು 1 ಲಕ್ಷ 70 ಸಾವಿರ ರೂಪಾಯಿಗೆ ಪ್ರವಾಸ ಮಾಡಿಸೋದಾಗಿ ಬಸ್ ಮಾಲೀಕ ಒಪ್ಪಿಕೊಂಡಿದ್ರು.

ಮುಂಗಡ 70 ಸಾವಿರ ಪಡೆದು ಹೈದ್ರಾಬಾದ್ ಪ್ರವಾಸ ಮಾಡಿಸಿ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ರು. ಗದಗ ನಗರ ಎಂಟ್ರಿಯಾಗ್ತಿದ್ದಂತೆ ಆರ್‌ಟಿಒ ಅಧಿಕಾರಿಗಳ ಕಣ್ಣಿಗೆ ಆಂಧ್ರ ಪಾಸಿಂಗ್ ಬಸ್ ಪರಿಶೀಲನೆ ನಡೆಸಿದ್ರು. ತಪಾಸಣೆ ಮಾಡಿದಾಗ ಚೆಸ್ಸಿ ನಂಬರ್ ಟ್ಯಾಂಪರ್ ಮಾಡಿರೋದು ಗೊತ್ತಾಗಿದೆ.. ಸೀದಾ ಕಚೇರಿಗೆ ಬಸ್ ಕರೆಸಿ, ಇಂಜಿನ್ ನಂಬರ್ ಪರಿಶೀಲಿಸಲಾಗಿದೆ.. ಇಂಜಿನ್ ನಂಬರ್ ಕೂಡ ತಿರುಚಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಅನುಮಾನಗೊಂಡು ಬಸ್ ಸೀಜ್ ಮಾಡಲಾಗಿದೆ.

ಕರ್ನಾಟಕ ಮೋಟಾರ್ ವೈಹಿಕಲ್ ಟ್ಯಾಕ್ಸೇಷನ್ ಆ್ಯಕ್ಟ್ ಅಡಿ ಬಸ್ ಸೀಜ್: ಬಸ್ ಸೀಜ್ ಮಾಡಿರೋ ಅಧಿಕಾರಿಗಳು, ಬಸ್ ಸೇಫ್ಟಿ ಹಿನ್ನೆಲೆ ಚಂಚಾರ ಮಾಡಲು ಯೋಗ್ಯವಾಗಿಲ್ಲ.. ಒಂದ್ವೇಳೆ ಬಸ್ ಆ್ಯಕ್ಸಿಡೆಂಟ್ ಆದಲ್ಲಿ ಬಸ್ ಪತ್ತೆಗೆ ಕಷ್ಟವಾಗಲಿದೆ. ಅಲ್ದೆ, ಚಸ್ಸಿ ನಂಬರ್ ಬದಲು ಮಾಡಿರೋದ್ರಿಂದ ಒಂದೇ ನಂಬರಿನ ಎರಡು ಬಸ್ ಓಡಾಡ್ತಿರೋ ಸಾಧ್ಯತೆಗಳಿವೆ.. ಹೀಗಾಗಿ ಪರಿಶೀಲನೆ ಮಾಡಿ, ಕರ್ನಾಟಕ ಮೋಟಾರ್ ವೈಹಿಕಲ್ ಟ್ಯಾಕ್ಸೇಷನ್ ಆ್ಯಕ್ಟ್ ಅಡಿ ಬಸ್ ಸೀಜ್ ಮಾಡಲಾಗಿದೆ ಅಂತಾ ಆರ್ ಟಿಒ ಲಕ್ಷ್ಮೀಕಾಂತ ಮಾಹಿತಿ ನೀಡಿದ್ದಾರೆ. ಆಂಧ್ರದಿಂದ ಹಣ ಪಾವತಿಸಿ ಬಂದಿರೋ ಪ್ರಯಾಣಿಕರು, ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿಕೊಂಡಿ ಅಂತಿದಾರೆ. 

ಮಾನವ ಆನೆ ಸಂಘರ್ಷ: ಏಕಕಾಲದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆನೆ ಗಣತಿ!

ಭಾಷೆ ಬರದೇ ವೇದನೆ ಹೇಳಿಕೊಳ್ಳಲಾಗದೇ ಮೂಕ ಪರದಾಟ ನಡೆಸಿರೋ ಪ್ರಯಾಣಿಕರಿಗೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಡೋದಕ್ಕೂ ಮುಂದಾಗಿದ್ದಾರೆ. ಆದ್ರೆ ಈಗಾಗ್ಲೆ ಹಣ ಪಾವತಿಸಿರೋ ಪ್ರಯಾಣಿಕರು ಮತ್ತೆ ಹಣ ಕೊಟ್ಟು ಮರಳಿ ಹೋಗೋದಕ್ಕೆ ಒಪ್ಪಿಲ್ಲ. ಇದೇ ವಿಚಾರವಾಗಿ ಬಸ್ ಡ್ರೈವರ್ ಹಾಗೂ ಪ್ರಯಾಣಿಕರ ಮಧ್ಯೆ ಜಟಾಪಟಿ ನಡೆದಿದೆ. ಈ ಮಧ್ಯ ಮಹಿಳೆಯರು, ಮಕ್ಕಳು ಆರ್ ಟಿಒ ಕಚೇರಿ ಅಂಗಳದಲ್ಲೇ ಅಡುಗೆ ಮಾಡಿ ಊಟ ಮಾಡಿಕೊಳ್ತಿದ್ದಾರೆ. ಬಸ್ ಡಾಕ್ಯುಮೆಂಟ್ ಪರಿಶೀಲನೆ ಮಾಡದೇ ಬಂದ ತಪ್ಪಿಗೆ ಕಚೇರಿಯಲ್ಲೇ ಪರದಾಡುವಂತಾಗಿದೆ.

click me!