ಮಾನವ ಆನೆ ಸಂಘರ್ಷ: ಏಕಕಾಲದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆನೆ ಗಣತಿ!

By Govindaraj S  |  First Published May 22, 2024, 7:43 PM IST

ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಆನೆ ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಙಾನಿಕವಾಗಿ ಪರಿಹಾರೋಪಾಯಗಳನ್ನು ರೂಪಿಸಲು ಕರ್ನಾಟಕ, ಕೇರಳ, ತಮಿಳುನಾಡು ಹಾಗು ಆಂದ್ರಪ್ರದೇಶದ ಗಡಿ ಅರಣ್ಯ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆನೆ ಗಣತಿ ನಡೆಯಲಿದೆ.
 


ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.22): ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಆನೆ ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಙಾನಿಕವಾಗಿ ಪರಿಹಾರೋಪಾಯಗಳನ್ನು ರೂಪಿಸಲು ಕರ್ನಾಟಕ, ಕೇರಳ, ತಮಿಳುನಾಡು ಹಾಗು ಆಂದ್ರಪ್ರದೇಶದ ಗಡಿ ಅರಣ್ಯ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆನೆ ಗಣತಿ ನಡೆಯಲಿದೆ. ಅದರಲ್ಲು ಕರ್ನಾಟಕದಲ್ಲಿ ಯಾವೆಲ್ಲಾ ಅರಣ್ಯಗಳಲ್ಲಿ ಆನೆಗಳನ್ನು ಹೇಗೆ ಗಣತಿ ಮಾಡಲಾಗುತ್ತದೆ ಅಂತೀರಾ ಈ ಸ್ಟೋರಿ ನೋಡಿ. ನೀಲಗಿರಿ ಶ್ರೇಣಿಯ ಸಂರಕ್ಷಿತ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ  ನಿರಂತರವಾಗಿ ಮಾನವ ಆನೆ ಸಂಘರ್ಷ ನಡೆಯುತ್ತಿದೆ. 

Tap to resize

Latest Videos

undefined

ಈ ಹಿನ್ನೆಲೆಯಲ್ಲಿ ಮಾನವ ಆನೆ ಸಂಘರ್ಷ ತಡೆಗಾಗಿ  ಕರ್ನಾಟಕ, ಕೇರಳನಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂತರಾಜ್ಯ ಸಮನ್ವಯ ಸಮತಿ ರಚಿಸಿಕೊಂಡು ಸೂಕ್ತ  ಯೋಜನೆ ರೂಪಿಸಲು ಹಾಗು ವೈಜ್ಷಾನಿಕ ಪರಿಹಾರೋಪಾಯಗಳನ್ನು ಕಂಡು ಕೊಳ್ಳಲು ಮುಂದಾಗಿವೆ.. ಹಾಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜೊತೆಗೆ ಆಂದ್ರಪ್ರದೇಶ ಗಡಿ ಭಾಗಗಳಲ್ಲಿನ ಆನೆಗಳ ಸಂಖ್ಯೆ ಸೇರಿದಂತೆ ಇನ್ನಿತ ಅಂಶಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿವೆ. ಪ್ರಮುಖವಾಗಿ ರಾಜ್ಯದ ಬಂಡೀಪುರ, ನಾಗರಹೊಳೆ, ಕಾವೇರಿವನ್ಯಧಾಮ, ಮಲೆಮಹದೇಶ್ವರ ವನ್ಯಧಾಮ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮಡಿಕೇರಿ ಪ್ರಾದೇಶಿಕ ಮತ್ತು ವನ್ಯಜೀವಿಧಾಮ ಹಾಗು ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಇಂದಿನಿಂದ ಏಕಕಾಲದಲ್ಲಿ  ಆನೆ ಗಣತಿ ಕಾರ್ಯನಡೆಸಲಾಗುತ್ತದೆ. 

ಜೊತೆಗೆ ನೆರೆಯ ರಾಜ್ಯಗಳಾದ ಕೇರಳ ಹಾಗು ತಮಿಳುನಾಡು ರಾಜ್ಯಗಳಲ್ಲಿ ಸಂಯೋಜಿತ ಆನೆಗಳ ಸಂಖ್ಯೆ ಪತ್ತೆಗೆ ಗಣತಿ ನಡೆಸಲಾಗುತ್ತಿದೆ. ಆನೆಗಣತಿಗೆ ವಿವಿಧ ವಿಧಾನಗಳನ್ನು ಅನುಸರಿಲಾಗುತ್ತದೆ. ಆನೆಯ ಲದ್ದಿಯ ಮಾದರಿ ಸಂಗ್ರಹ ಮತ್ತು ನೇರವಾಗಿ ಏಣಿಕೆ  ಮಾಡುವುದು,   ಅರಣ್ಯ ಪ್ರದೇಶವನ್ನು ಬ್ಲಾಕ್ ಗಳನ್ನಾಗಿ ವಿಂಗಡಿಸಿ ಒಂದೊಂದು ಬ್ಲಾಕ್ ಗು ಸಿಬ್ಬಂದಿಯನ್ನು ನಿಯೋಜಿಸಿ ಆ ಪ್ರದೇಶದಲ್ಲಿ ಕಾಣುವ ಆನೆಗಳ ಸಂಖ್ಯೆಯನ್ನು ದಾಖಲಿಸುವುದು ಮತ್ತು ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಎಣಿಸುವುದು ಹಾಗು ಸೀಳುದಾರಿಗಳಲ್ಲಿ ಲದ್ದಿಎಣಿಕೆ ಮಾಡುವ ಮೂಲಕ ಆನೆಗಣತಿ ಮಾಡಲಾಗುತ್ತದೆ.  ಆನೆಗಳ  ಅಂಕಿಅಂಶಗಳ  ಪತ್ತೆಯ ಜೊತೆಗೆ ಆನೆ ಕಾರಿಡಾರ್ ಗಳನ್ನು ಪುನರ್ ಸ್ಥಾಪಿಸಬೇಕು, 

ಬಂಡೀಪುರ ಅರಣ್ಯದಲ್ಲಿ 10 ದಿನದಿಂದ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ, ಪ್ರಾಣಿಗಳ ದರ್ಶನ!

ಯಶಸ್ವಿ ವಿಧಾನವಾದ ರೈಲು ಕಂಬಿ, ಸೋಲಾರ್ ತಂತಿ ಬೇಲಿ, ಕಾಡಂಚಿನ ಜಮೀನುಗಳಲ್ಲಿ ಜೇನು ಸಾಕಾಣಿಕೆ ಮೊದಲಾದ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ. ಆನೆ ಗಣತಿ ವೇಳೆ   ನಿಗಧಿತ ನಮೂನೆಗಳಲ್ಲಿ ಆನೆಗಳ ವಯಸ್ಸು, ಲಿಂಗ, ದಂತ ಮತ್ತು ದಂತ ರಹಿತ ಗಂಡಾನೆಗಳ ಸಂಖ್ಯೆಯನ್ನು  ಕೈ ಬರಹದಲ್ಲಿ ತುಂಬಿ ಗಣತಿ  ಮಾಡಲಾಗುವುದು. ಕೈ ಬರಹದ ಜೊತೆಗೆ ವಿಶೇಷವಾಗಿ ಸಿದ್ದಪಡಿಸಲಾಗಿರುವ ಮೊಬೈಲ್ ಆ್ಯಪ್ ನಲ್ಲು ನಮೂದಿಸಲಾಗುವುದು. ಆನೆ ಗಣತಿಗೆ ಈ ಬಾರಿ ಸ್ವಯಂ ಸೇವಕರಿಗೆ ಅವಕಾಶ ಇಲ್ಲವಾಗಿದ್ದು ಅರಣ್ಯ  ಸಿಬ್ಬಂದಿ ಮಾತ್ರ ಗಣತಿ ಕಾರ್ಯದಲ್ಲಿ  ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಈಗಾಗಲೇ ಸೂಕ್ತ ತರಬೇತಿಯನ್ನು ನೀಡಲಾಗಿದೆ.

click me!