
ಬೆಂಗಳೂರು: ಆಂಧ್ರ ಪೊಲೀಸರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಡಾ. ರವಿಪ್ರಕಾಶ್ ಎಂಬವರನ್ನು ಬಂಧನ ಮಾಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ವಿಂಟೇಜ್ ಕಾರ್ ಕಲೆಕ್ಷನ್ ಹೊಂದಿರುವ ಡಾ. ರವಿಪ್ರಕಾಶ್ ಅವರನ್ನು ಆಂಧ್ರ ಪ್ರದೇಶದ ಕಡಪ ಜಿಲ್ಲೆ ಮೈದುಕುರ್ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಆದರೆ ರವಿಪ್ರಕಾಶ್ ಕುಟುಂಬಸ್ಥರು ನಮ್ಮ ಮಾತ್ರ, ರವಿಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಆಂಧ್ರ ಪೊಲೀಸರು ನಿನ್ನೆ ಬೆಳಗ್ಗೆ ಆರ್.ಆರ್.ನಗರ ಡಾ. ರವಿಪ್ರಕಾಶ್ ನಿವಾಸದಿಂದ ಅವರನ್ನು ಕರೆದುಕೊಂಡು ಹೋಗಿದ್ದರು. ಸದ್ಯ ಕುಟುಂಬಸ್ಥರು ಆಂಧ್ರ ಎಂಎಲ್ಎ ಪ್ರಭಾವ ಬಳಸಿ ಕಿಡ್ನಾಪ್ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಆಂಧ್ರ ಪ್ರದೇಶದ ಮೈದುಕುರ್ ವಿಧಾನಸಭಾ ಕ್ಷೇತ್ರದ ಶಾಸಕ ಪುಟ್ಟ ಸುಧಾಕರ್ ಸೇರಿ ಮೂವರ ಮೇಲೆ ಕಿಡ್ನಾಪ್ ಮಾಡಿರುವ ಆರೋಪ ಮೇರೆಗೆ ದೂರು ನೀಡಿದ್ದಾರೆ. ಅಂದಹಾಗೇ, ಶಾಸಕ ಪುಟ್ಟ ಸುಧಾಕರ್ ಟಿಟಿಡಿ ಮಾಜಿ ಅಧ್ಯಕ್ಷರಾಗಿದ್ದಾರೆ.
ಇನ್ನು, ಉದ್ಯಮಿ ರವಿಪ್ರಕಾಶ್ ಸೇರಿ ಐವರ ವಿರುದ್ಧ ಮೈದುಕುರ್ ನಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಡಾ.ರವಿಪ್ರಕಾಶ್ ಅವರನ್ನು ಐದನೇ ಆರೋಪಿಯನ್ನಾಗಿ ಆಂಧ್ರ ಪೊಲೀಸರು ದಾಖಲು ಮಾಡಿದ್ದಾರೆ. ಆದರೆ ಈ ಕೇಸ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ. ಬೇಕು ಅಂತಲೇ ನಮ್ಮ ತಂದೆಯ ಹೆಸರು ಕೇಸ್‌ನಲ್ಲಿ ಸಿಲುಕಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ರವಿಪ್ರಕಾಶ್ ಪುತ್ರಿ ರೂಪಾಲಿ ಪ್ರಕಾಶ್ ಆರೋಪ ಮಾಡಿದ್ದಾರೆ.
ಡಾ.ರವಿಪ್ರಕಾಶ್ ಪುತ್ರಿ ರೂಪಾಲಿ ನೀಡಿರುವ ಮಾಹಿತಿಯಂತೆ, ನಮ್ಮ ತಂದೆಯವರನ್ನ ಬಲವಂತವಾಗಿ ಆಂಧ್ರ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮ್ಮಗೆ ಸಂಬಂಧವೇ ಇಲ್ಲದ ಕೇಸ್ ನಲ್ಲಿ ಸಿಲುಕಿಸಿದ್ದಾರೆ. ಇದರ ಇಂದೇ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಇದೆ. ಶಾಸಕ ಪುಟ್ಟ ಸುಧಾಕರ್ ತಮ್ಮ ಪ್ರಭಾವ ಬಳಿಸಿ ಆಂಧ್ರ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿಸಿದ್ದಾರೆ. ನಮ್ಮ 14 ಎಕರೆ ಜಾಗ ಕಬಳಿಸಲು ಸುಳ್ಳು ಕೇಸ್ ಹಾಕಿದ್ದಾರೆ. ಆರ್ ಆರ್ ನಗರ ಪೊಲೀಸರಿಗೆ ದೂರು ನೀಡಲು ಬಂದಾಗ ಸಹಕರಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು, ರವಿಪ್ರಕಾಶ್ ಅವರು ಆರ್ ಆರ್ ನಗರದಲ್ಲಿ 14 ಎಕರೆ ಜಮೀನು ಹೋಂದಿದ್ದಾರಂತೆ. ಇದೇ ಜಮೀನು ವ್ಯಾಜ್ಯ ರವಿಪ್ರಕಾಶ್ ಮತ್ತು ಪುಟ್ಟ ಸುಧಾಕರ್ ನಡೆಯುತಿತ್ತಂತೆ. ಜಮೀನು ವ್ಯಾಜ್ಯ ಕೇಸ್ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಕಳೆದ ತಿಂಗಳು ಜಮೀನು ಬಳಿ ಬಂದು ಪುಟ್ಟ ಸುಧಾಖರ ಗಲಾಟೆ ಮಾಡಿದ್ದರಂತೆ. ಜಮೀನಿಗೆ ಬಲವಂತವಾಗಿ ಒಳಗೆ ನುಗ್ಗಲು ಯತ್ನ ಮಾಡಿದ್ದರು. ಇದೇ ಕಾರಣಕ್ಕೆ ಸುಳ್ಳು ಕೇಸ್ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕುಟುಂಬಸ್ಥರು ಸಾಲು ಸಾಲು ಆರೋಪ ಮಾಡಿದ್ದಾರೆ. ಇನ್ನು ಡಾ ರವಿಪ್ರಕಾಶ್ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರಾಗಿದ್ದು, ಸುಮಾರು 300ಕ್ಕೂ ಅಧಿಕ ವಿಂಟೇಜ್ ಕಾರುಗಳನ್ನು ಸಂಗ್ರಹಿಸಿದ್ದಾರೆ.