ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಹತ್ಯೆ ಮಾಡಿದವಳಿಗೆ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜಿಲ್ಲಾ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ಜೊತೆಗೆ 10 ಸಾವಿರ ರು, ದಂಡ ವಿಧಿಸಿದೆ
ಚಿಕ್ಕಬಳ್ಳಾಪುರ (ಏ.22.): ಪ್ರಿಯಕರನ ಜೊತೆ ಸೇರಿ ಗಂಡನನ್ನೆ ಕೊಲೆ ಮಾಡಿದ್ದ ಮಹಿಳೆಗೆ ಹಾಗೂ ಆಕೆಯ ಪ್ರಿಯಕರನಿಗೆ ಜಿಲ್ಲಾ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ಜೊತೆಗೆ 10 ಸಾವಿರ ರು, ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಶಿಕ್ಷೆಗೆ ಗುರಿಯಾದ ಮಹಿಳೆಯನ್ನು ಜಾನಕಿ ಲಕ್ಷ್ಮೀ ಕೋಂ ಛಾಯಾಕುಮಾರ್ (26) ಹಾಗೂ ಆಕೆಯ ಪ್ರಿಯಕರ ಹೇಮಂತ್ ಕುಮಾರ್ ಅಲಿಯಾಸ್ ಕುಮಾರ್ ಬಿನ್ ರಂಗಪ್ಪ (27) ಎಂದು ಗುರುತಿಸಲಾಗಿದೆ. ಜಾನಕಿಲಕ್ಷ್ಮೀಗೆ ಛಾಯಾಕುಮಾರ್ ಜೊತೆಗೆ ವಿವಾಹವಾಗಿದ್ದರೂ ಕೂಡ ಆಕೆ ಹೇಮಂತ್ ಕುಮಾರ್ ಜೊತೆಗೆ ಅಕ್ರಮವಾಗಿ ಅನೈತಿಕ ಸಂಬಂದ ಹೊಂದಿದ್ದಳು.
ಸುಂದರಿ ಮಾಡೆಲ್.. ಹುಬ್ಬಳ್ಳಿಯ ಭೀಕರ ಕೊಲೆ.. ರುಂಡ ಬೇರೆ-ಮುಂಡ ಬೇರೆ! .
ಇದನ್ನು ಪ್ರಶ್ನಿಸಿದ ಛಾಯಾಕುಮಾರ್‌ನನ್ನು ಜಾನಕಿಲಕ್ಷ್ಮೀ ತನ್ನ ಪ್ರಿಯಕರ ಹೇಮಂತ್ ಕುಮಾರ್ ಜೊತೆ ಸೇರಿ 2018 ರ ಏಪ್ರಿಲ್ 7 ರಂದು ಕೊಲೆ ಮಾಡಿದ್ದರು.
ಈ ಪ್ರಕರಣ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇತ್ತೀಚೆಗೆ ಚಿಕ್ಕಬಳ್ಳಾಪುರ ಆರಕ್ಷಕ ಉಪಾಧೀಕ್ಷಕ ಕೆ.ರವಿಶಂಕರ್, ಪ್ರಕರಣದ ಸಂಬಂದ ಬಲವಾದ ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೊಲೆ ಪ್ರಕರಣದಲ್ಲಿ ಇಬ್ಬರು ಪಾತ್ರ ಸಾಭೀತಾದ ಹಿನ್ನೆಲೆಯಲ್ಲಿ ಜಾನಕಿ ಲಕ್ಷ್ಮೇಗೆ ಹಾಗೂ ಆಕೆಯ ಪ್ರಿಯಕರ ಹೇಮಂತ್ ಕುಮಾರ್‌ಗೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರು, ಜೀವಾವಧಿ ಶಿಕ್ಷೆ ಜೊತೆಗೆ 10 ಸಾವಿರ ರು, ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.