ಸ್ಕೂಟರ್‌ನಲ್ಲಿ ತಾಯಿಯನ್ನು ದೇಶ ಸುತ್ತಿಸಿದವಗೆ ಆನಂದ್ ಮಹೇಂದ್ರ ಕಾರ್‌ ಗಿಫ್ಟ್‌

Kannadaprabha News   | Asianet News
Published : Sep 20, 2020, 12:00 PM IST
ಸ್ಕೂಟರ್‌ನಲ್ಲಿ ತಾಯಿಯನ್ನು ದೇಶ ಸುತ್ತಿಸಿದವಗೆ ಆನಂದ್ ಮಹೇಂದ್ರ ಕಾರ್‌ ಗಿಫ್ಟ್‌

ಸಾರಾಂಶ

ತಮ್ಮ ತಾಯಿಯನ್ನು ಸ್ಕೂಟರ್‌ನಲ್ಲೇ ದೇಶವೆಲ್ಲಾ ಸುತ್ತಿಸಿದ ವ್ಯಕ್ತಿಗೆ ಆನಂದ್ ಮಹೀಂದ್ರ ಕಾರ್ ಗಿಫ್ಟ್ ಮಾಡಿದ್ದಾರೆ. 

ಮೈಸೂರು (ಸೆ.20): ತಾಯಿಯ ಆಸೆ ಪೂರೈಸಲು ತನ್ನ ಬಜಾಜ್‌ ಚೇತಕ್‌ ಸ್ಕೂಟರಿನಲ್ಲಿ ದೇಶ ಪರ್ಯಟನೆ ನಡೆಸಿದ ಮೈಸೂರಿನ ಬೋಗಾದಿ ನಿವಾಸಿ ಕೃಷ್ಣಕುಮಾರ್‌ ಅವರಿಗೆ ಮಹೀಂದ್ರ ಕಂಪನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ.

ತಾವಾಯಿತು, ತಮ್ಮ ಜೀವನವಾಯಿತು ಎಂದು ವಯಸ್ಸಿಗೆ ಬಂದ ಮೇಲೆ ತಂದೆ, ತಾಯಿಯಿಂದ ದೂರವಾಗುವ ಮಕ್ಕಳಿರುವ ಈ ಕಾಲಘಟ್ಟದಲ್ಲಿ ತಾಯಿಯ ಇಂಗಿತದಂತೆ ಸ್ಕೂಟರ್‌ನಲ್ಲಿ ದೇಶದ ನಾನಾ ಭಾಗಗಳಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಆಧುನಿಕ ಶ್ರವಣಕುಮಾರ ಎನಿಸಿಕೊಂಡಿರುವ ಕೃಷ್ಣಕುಮಾರ್‌ ನಾಲ್ಕು ದಿನದ ಹಿಂದೆಯಷ್ಟೇ ಮೈಸೂರಿಗೆ ಆಗಮಿಸಿದ್ದರು. 

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್! .

ಈ ವಿಷಯ ತಿಳಿದ ಮಹೇಂದ್ರ ಕಂಪನಿಯು ತನ್ನ ಕಡೆಯಿಂದ ಕೆಯುವಿ 100 ಕಾರನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಮಾಲೀಕ ಆನಂದ್‌ ಮಹೇಂದ್ರ ಈ ಮುಂಚೆಯೇ ಹೇಳಿದಂತೆ ಯಾತ್ರೆ ಮುಗಿಸಿ ಹಿಂದಿರುಗಿದ ಕೃಷ್ಣಕುಮಾರ್‌ ಅವರಿಗೆ ಕಾರು ನೀಡಿದ್ದಾರೆ.

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!