ಕೊಪ್ಪಳ: ಗವಿಸಿದ್ದೇಶ್ವರ ರಥೋತ್ಸವಕ್ಕೆ ನಟ ಅಮಿತಾಭ್ ಬಚ್ಚನ್‌ಗೆ ಆಹ್ವಾನ

By Kannadaprabha News  |  First Published Nov 16, 2024, 9:58 AM IST

ಆಹ್ವಾನ ಸ್ವೀಕರಿಸಿರುವ ಅಮಿತಾಭ್ ಬಚ್ಚನ್ ಅವರು, ಆರೋಗ್ಯದ ಸಮಸ್ಯೆ ಇರುವುದರಿಂದ ಈಗಲೇ ಖಚಿತಪಡಿಸಲು ಆಗುವುದಿಲ್ಲ. ಆದರೆ, ಬರುವುದಕ್ಕೆ ಇಚ್ಛೆಯಂತೂ ಇದೆ ಎಂದಿದ್ದಾರೆ. ಗವಿಸಿದ್ದೇಶ್ವರ ಜಾತ್ರೆಯ ದಾಸೋಹ, ಸೇರುವ ಜನಸ್ತೋಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 


ಕೊಪ್ಪಳ(ನ.16):  ನಗರದಲ್ಲಿ 2025ರ ಜ.15ರಂದು ನಡೆಯುವ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 
ಮುಂಬೈನಲ್ಲಿರುವ ಬಚ್ಚನ್ ಅವರ ನಿವಾಸಕ್ಕೆ ಶ್ರೀ ಗವಿಮಠದ ಪರವಾಗಿ ವಾಣಿಜ್ಯೋದ್ಯಮಿ ಅಶ್ವಿನ್ ಜಾಂಗಡ್ ಹಾಗೂ ಇತರರು ತೆರಳಿ ಜಾತ್ರೆಯ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. 

ಆಹ್ವಾನ ಸ್ವೀಕರಿಸಿರುವ ಬಚ್ಚನ್ ಅವರು, ಆರೋಗ್ಯದ ಸಮಸ್ಯೆ ಇರುವುದರಿಂದ ಈಗಲೇ ಖಚಿತಪಡಿಸಲು ಆಗುವುದಿಲ್ಲ. ಆದರೆ, ಬರುವುದಕ್ಕೆ ಇಚ್ಛೆಯಂತೂ ಇದೆ ಎಂದಿದ್ದಾರೆ. ಗವಿಸಿದ್ದೇಶ್ವರ ಜಾತ್ರೆಯ ದಾಸೋಹ, ಸೇರುವ ಜನಸ್ತೋಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

Tap to resize

Latest Videos

undefined

ಭದ್ರತೆ ಖಾತರಿ ಬಳಿಕ ನಿರ್ಧಾರ: 

ಅಮಿತಾಭ್ ಬಚ್ಚನ್ ಅವರ ತಂಡ ಗವಿಸಿದ್ದೇಶ್ವರ ಜಾತ್ರೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿ, ಭದ್ರತೆಯ ಕುರಿತು ಪರಿಶೀಲನೆ ಮಾಡಿದ ಬಳಿಕವೇ ಜಾತ್ರೆಗೆ ಆಗಮಿಸುವ ಕುರಿತು ನಿರ್ಧಾರವಾಗಲಿದೆ.

click me!