Malpe Beach Festival: ಉಡುಪಿಯಲ್ಲಿ ಯಾಚ್ ಪ್ರಯಾಣದ ರೋಚಕ ಅನುಭವ!

By Ravi JanekalFirst Published Jan 23, 2023, 9:12 PM IST
Highlights

ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ಮಲ್ಪೆ ಕಡಲ ತೀರದಲ್ಲಿ ಬೀಚ್ ಉತ್ಸವ ನಡೆಯುತ್ತಿದ್ದು, ಪ್ರವಾಸಿಗರಿಗೆ ಐಷರಾಮಿ ಯಾಚ್ ನ ಅನುಭವ ಪಡೆಯಲು ಸದಾವಕಾಶವನ್ನು ಒದಗಿಸಲಾಗಿದೆ. 

ಉಡುಪಿ (ಜ.23) : ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ಮಲ್ಪೆ ಕಡಲ ತೀರದಲ್ಲಿ ಬೀಚ್ ಉತ್ಸವ ನಡೆಯುತ್ತಿದ್ದು, ಪ್ರವಾಸಿಗರಿಗೆ ಐಷರಾಮಿ ಯಾಚ್ ನ ಅನುಭವ ಪಡೆಯಲು ಸದಾವಕಾಶವನ್ನು ಒದಗಿಸಲಾಗಿದೆ. 

ಮುಂಬೈಯ ಯಾಚ್ ಮಲ್ಪೆಯಲ್ಲಿ: 

ಬಾಂಬೆಯ ರಾಯಲ್ ಮೈರನ್ ಕಂಪೆನಿ(Royal Myron Company)ಯ ಯಾಚ್ ಇದೀಗ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದ್ದು, ೨ ಬೆಡ್ ರೂಮ್, ಕಿಚನ್, ಕ್ಯಾಬಿನ್, ಡಾಕ್ ಸೌಲಭ್ಯವನ್ನು ಹೊಂದಿದೆ. ಮಲ್ಪೆಯಲ್ಲಿ ಮುಂದಿನ ೨೦ ದಿನಗಳವರೆಗೆ ಇದು ಪ್ರವಾಸಿಗರಿಗೆ ಲಭ್ಯವಿರಲಿದೆ.\

ಉಡುಪಿ ಜಿಲ್ಲೆಗೆ 25 ವರ್ಷ: ಮಲ್ಪೆಯಲ್ಲಿ ಸಂಭ್ರಮದ ಬೀಚ್ ಉತ್ಸವ

ಈ ಬಗ್ಗೆ ಮಾಹಿತಿ ನೀಡಿ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ(Sudesh shetty), ಏಕಕಾಲಕ್ಕೆ 14 ಜನರನ್ನು ಇದರಲ್ಲಿ ಕರೆದುಕೊಂಡು ಹೋಗಬಹುದಾಗಿದೆ. 12 ನಿಮಿಷಗಳ ಜಾಯ್ ರೈಡ್ ಗೆ ಒಬ್ಬರಿಗೆ 2 ಸಾವಿರ ರೂ. ಹಾಗು ಕ್ರೂಸಿಂಗ್ 14 ಜನರಿಗೆ 35,000 ರೂ ಶುಲ್ಕ ನಿಗದಿ ಪಡಿಸಿದ್ದೇವೆ ಎಂದರು.

Udupi: ಸೇಂಟ್‌ ಮೇರಿಸ್ ದ್ವೀಪದಲ್ಲಿ ಅದ್ಧೂರಿ ಬೀಚ್ ಉತ್ಸವ: ಕ್ಲಿಫ್, ಸ್ಕೂಬಾ ಡೈವಿಂಗ್ ಆಕರ್ಷಣೆ

ಈಗಾಗಲೇ ಆನ್ ಲೈನ್ ನಲ್ಲಿ ಬುಕಿಂಗ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಮಲ್ಪೆ ಬೀಚ್ ಯಾಚ್(Beach yacht) ಅನ್ನು ಖರೀದಿಸಿ ಪ್ರವಾಸಿಗರಿಗೆ ಸೌಲಭ್ಯ ನೀಡುವ ಯೋಚನೆ ಇದೆ. ಯಾಚ್ ನಲ್ಲಿ ಕಾಪು ಕಡಲತೀರ(Kapu Beach)ದಲ್ಲಿ ನಡೆಯುವ ಸ್ಕೂಬಾ ಡೈವಿಂಗ್ ಗೆ ಕರೆದುಕೊಂಡು ಹೋಗಿ, ನಂತರ ಐಲ್ಯಾಂಡ್ ಗಳನ್ನು ಸುತ್ತಿಸಲಾಗುತ್ತದೆ. ಬೇಡಿಕೆಯನ್ನು ಆಧರಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.

click me!