ರಾಯಚೂರು: ಜಾಗಟಗಲ್‌ನಲ್ಲಿ ವಿದ್ಯುತ್‌ ತಂತಿ ತಗುಲಿ ಅಗ್ನಿ ಅವಘಡ

By Kannadaprabha News  |  First Published Feb 26, 2023, 11:05 AM IST

ತಾಲೂಕಿನ ಜಾಗಟಗಲ್‌ ಗ್ರಾಮದ ಆಂಧ್ರ ಮೂಲದ ನಿವಾಸಿಗಳ ಗುಡಿಸಿಲಿಗೆ ವಿದ್ಯುತ್‌ ತಂತಿ ತಗುಲಿ 10 ಅಧಿಕ ಗುಡಿಸಿಲುಗಳು ಸುಟ್ಟು ಭಸ್ಮವಾದ ಘಟನೆ ಶನಿವಾರ ನಡೆದಿದೆ.


ದೇವದುರ್ಗ (ಫೆ.26) : ತಾಲೂಕಿನ ಜಾಗಟಗಲ್‌ ಗ್ರಾಮದ ಆಂಧ್ರ ಮೂಲದ ನಿವಾಸಿಗಳ ಗುಡಿಸಿಲಿಗೆ ವಿದ್ಯುತ್‌ ತಂತಿ ತಗುಲಿ 10 ಅಧಿಕ ಗುಡಿಸಿಲುಗಳು ಸುಟ್ಟು ಭಸ್ಮವಾದ ಘಟನೆ ಶನಿವಾರ ನಡೆದಿದೆ.

ಮನೆ ಮುಂದೆ ಹಾಕಿದ್ದ ಲಕ್ಷಾಂತರ ರು.ಗಳ ಹತ್ತಿ ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್‌ ಅವಘಡದಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗುಡಿಸಿಲು ಮೇಲೆ ಹಾಯ್ದು ಹೋಗಿದ್ದ ವಿದ್ಯುತ್‌ ತಂತಿ ಏಕಾಏಕಿ ಹರಿದು ಬಿದ್ದಿದ್ದರಿಂದ ಬೆಂಕಿ ತಗುಲಿ ನಷ್ಟಉಂಟಾಗಿದೆ. ಗುಡಿಸಿಲಿಗೆ ಬೆಂಕಿ ತಗುಲಿದ ಹಿನ್ನೆಲೆ ಒಳಗಡೆ ಇದ್ದ ಸಿಲಿಂಡರ್‌ಗಳು ಸ್ಫೋಟಗೊಂಡು ಸುಟ್ಟು ಹೋಗಿವೆ. ಗುಡಿಸಿಲು ಒಳಗಿದ್ದ ಬಂಗಾರ, ಬೆಳ್ಳಿ, ಬಟ್ಟೆ, ಅಡುಗೆ ಪದಾರ್ಥಗಳ ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಸುಟ್ಟು ಕರುಕಲವಾಗಿವೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ತಾಸುಗಟ್ಟಲೇ ಹರಸಾಹಸ ಪಟ್ಟಘಟನೆ ಜರುಗಿತು.

Tap to resize

Latest Videos

 

ವಿಜಯಪುರ: ತಡರಾತ್ರಿ ಗುಡಿಸಲಿಗೆ ಬೆಂಕಿ; ಮಲಗಿದ್ದ ವೃದ್ಧ ದಂಪತಿ ಸಜೀವ ದಹನ!

ಕಣ್ಣೀರಿಟ್ಟನಿವಾಸಿಗಳು:

ಇಲ್ಲಿ ವಾಸಿಸುತ್ತಿದ್ದಂತ ಬಹುತೇಕರು ಆಂಧ್ರ ಮೂಲದ ನಿವಾಸಿಗಳು. ನೋಡು ನೋಡುತ್ತಲೇ ವಿದ್ಯುತ್‌ ಅವಘಡದಿಂದ ಗುಡಿಸಿಲುಗಳಿಗೆ ಬೆಂಕಿ ಬಿದ್ದಿದ್ದರಿಂದ ಬಹುತೇಕರು ಹಾರಾಟ, ಚಿರಾಟ ನಡೆಸಿದರು. ಕಣ್ಣೀರಿಡುತ್ತಲೇ ಸಹಾಯಕಕ್ಕೆ ಗೋಗರೆದರು. ಅರಕೇರಾ ಮತ್ತು ದೇವದುರ್ಗದಿಂದ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು. 10ಕ್ಕೂ ಅಧಿಕ ಗುಡಿಸಿಲುಗಳು ಬೆಂಕಿಗೆ ಆಹುತಿಯಾದವು.

ಲಕ್ಷಾಂತರ ರು. ಹತ್ತಿ ಭಸ್ಮ:

ಬೆಳೆದಿರುವ ಹತ್ತಿ ಮಾರಲು ಸೂಕ್ತ ಬೆಲೆ ಇಲ್ಲವಾದ್ದರಿಂದ ರೈತರು ಮನೆ ಆವರಣದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಶನಿವಾರ ವಿದ್ಯುತ್‌ ಅವಘಡದಿಂದ ಲಕ್ಷಾಂತರ ರು. ಬೆಲೆ ಬಾಳುವ ಹತ್ತಿ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಇಂತಹ ಘಟನೆಯಿಂದ ಬಹುತೇಕ ಕುಟುಂಬಗಳು ಕಣ್ಣೀರಿಡುವಂತಾಗಿದೆ.

ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದಕ್ಕೆ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಸ್ಥಳಕ್ಕೆ ತಹಸೀಲ್ದಾರ ಭೇಟಿ:

ಜಾಗಟಗಲ್‌ ಗ್ರಾಮದಲ್ಲಿ ವಿದ್ಯುತ್‌ ಅವಘಡ(Electricity accident in Jagatagal village) ಹಿನ್ನೆಲೆ 10 ಅಧಿಕ ಗುಡಿಸಲುಗಳು ಸುಟ್ಟು ಭಸ್ಮವಾದ ಸ್ಥಳಕ್ಕೆ ತಹಸೀಲ್ದಾರ್‌ ಶ್ರೀನಿವಾಸ ಚಾಪಲ್‌(Tehsildar Srinivasa Chapel), ಸಿಪಿಐ ಖಾಜಾಹುಸೇನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್‌ ಅವಘಡಕ್ಕೆ ಲಕ್ಷಾಂತರ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

click me!