ಕುಮ್ಮಕ್ಕು ಕೊಟ್ಟವರ, ಸಂಘದ ಹೆಸರು ಹೇಳಿದ ಅಮೂಲ್ಯ

Kannadaprabha News   | Asianet News
Published : Feb 29, 2020, 08:36 AM IST
ಕುಮ್ಮಕ್ಕು ಕೊಟ್ಟವರ, ಸಂಘದ ಹೆಸರು ಹೇಳಿದ ಅಮೂಲ್ಯ

ಸಾರಾಂಶ

ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ದ್ರೋಹಿ ಹೇಳಿಕೆ ನೀಡಿದ ಅಮೂಲ್ಯಾ ಇದೀಗ ತನಗೆ ಕುಮ್ಮಕ್ಕು ಕೊಟ್ಟವರ ಹಾಗೂ ಸಂಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. 

ಬೆಂಗಳೂರು [ಫೆ.29] : ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ಬಂಧನಕ್ಕೆ ಒಳಗಾಗಿರುವ ಅಮೂಲ್ಯ ಲಿಯೋನಾ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಶುಕ್ರವಾರ ಖುದ್ದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಅವರೇ ಅಮೂಲ್ಯಳನ್ನು ಐದು ತಾಸು ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೂತ್‌ ಇದ್ದರು.

ಕೊಬ್ಬೇನೂ ಕರಗಿಲ್ಲ.. ಪೊಲೀಸರಿಗೆ ಪ್ರಶ್ನೆ ಮಾಡ್ತಿದ್ದಾಳೆ ಕ್ರಿಮಿ ಅಮೂಲ್ಯಾ!...

ಸಂಜೆ ಐದು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆವರೆಗೆ ಆರೋಪಿಯನ್ನು ಹಿರಿಯ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ. ಈ ವೇಳೆ ಆರೋಪಿ, ತನಗೆ ಪ್ರಚೋದನಾಕಾರಿ ಭಾಷಣಕ್ಕೆ ಸಹಾಯ ಮಾಡಿದ ಎಲ್ಲ ವ್ಯಕ್ತಿಗಳ ಹೆಸರು ಮತ್ತು ಸಂಘಟನೆಯ ಹೆಸರನ್ನು ಬಾಯಿಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.

ಆರೋಪಿ ಪೊಲೀಸ್‌ ಕಸ್ಟಡಿ ಅವಧಿ ಶನಿವಾರ ಮುಕ್ತಾಯಗೊಳ್ಳಲಿದ್ದು, ಆಕೆಯಿಂದ ಇನ್ನಷ್ಟುಮಾಹಿತಿ ಪಡೆಯಬೇಕಿರುವುದರಿಂದ ಸೋಮವಾರದವರೆಗೆ ವಶಕ್ಕೆ ಪಡೆಯಲು ತನಿಖಾ ತಂಡ ಚಿಂತಿಸಿದೆ ಎಂದು ಹೇಳಲಾಗಿದೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ