ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಟಲ್ ಮಿಷನ್ ನೀರು ಸರಬರಾಜು ಯೋಜನೆಗೆ ಅನುಮೋದನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

By Gowthami K  |  First Published Dec 18, 2022, 10:12 PM IST

ಅಟಲ್ ಮಿಷನ್ ಫಾರ್ ರಿಜುವಿನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ - 2.0 ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದ ಒಟ್ಟು 22 ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ  ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.


ಹುಬ್ಬಳ್ಳಿ (ಡಿ.18) : ಅಟಲ್ ಮಿಷನ್ ಫಾರ್ ರಿಜುವಿನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ - 2.0 ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದ ಒಟ್ಟು 22 ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಒಟ್ಟು ರೂ. 161.60 ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು ಇವುಗಳಲ್ಲಿ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ನವಲಗುಂದ, ಕಲಘಟಗಿ, ಶಿಗ್ಗಾಂವ, ಬಂಕಾಪೂರ ಪಟ್ಟಣಗಳಲ್ಲಿ ನೀರು ಸರಬರಾಜು ಕಾಮಗಾರಿಗಳು ಸೇರಿವೆ. ನವಲಗುಂದಕ್ಕೆ 48.31 ಕೋಟಿ,  ಶಿಗ್ಗಾಂವ 65.30 ಕೋಟಿ, ಕಲಘಟಗಿ 38.78 ಕೋಟಿ ಹಾಗೂ ಬಂಕಾಪೂರ 44.53 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಹಾಗೂ ಪೂರೈಕೆಯ ಮೂಲ ಸೌಲಭ್ಯ ನಿರ್ಮಾಣ ಯೋಜನೆಗಳು ಕಾರ್ಯಗತಗೊಳ್ಳಲಿವೆ. 

ಈ ಪಟ್ಟಣಗಳ ಜನರ ಬಹುದಿನಗಳ ನೀರಿನ ಬವಣೆ ತಪ್ಪಲಿದೆಯೆಂದು ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶನಾಲಯಕ್ಕೆ ಈ ಅನುಮೋದಿತ ಯೋಜನೆಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ. "ಅಮೃತ’ ಯೋಜನೆಯ ಮಾರ್ಗದರ್ಶಕ ಸೂತ್ರಗಳನ್ವಯ ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೂಡಲೇ ಈ ಪ್ರಾಧಿಕಾರಗಳು ಕಾರ್ಯೋನ್ಮುಖವಾಗಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದ್ದಾರೆ.

Latest Videos

undefined

ಯೋಜನೆಯನ್ನು ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರದೀಪಸಿಂಗ್ ಪುರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ಹೇಳಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ
ಲಕ್ಷ್ಮೇಶ್ವರ: ಪಟ್ಟಣಕ್ಕೆ ನೀರು ಪೂರೈಸುವ ತುಂಗಾಭದ್ರಾ ನದಿಯ ಮೂಲಕ ನೇರವಾಗಿ ಕುಡಿಯುವ ನೀರು ದೊರೆಯುವಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನೂತನ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಶನಿವಾರ ಪಟ್ಟಣದ ಶಿಗ್ಲಿ ನಾಕಾ ಬಳಿ ಪಟ್ಟಣದ ಬಜಾರ್‌ ರಸ್ತೆ ಮುಖಾಂತರ ಕುಡಿಯುವ ನೀರಿನ ನೂತನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನೀರು ಪೂರೈಕೆ ಜಾಲಕ್ಕೆ ಕಲ್ಲು ಹಾಕಿ ಪಾಲಿಕೆ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವ ಪ್ಲಾನ್ ಮಾಡಿದ್ದ ಕಿಡಿಗೇಡಿಗಳು!

ಪಟ್ಟಣದಲ್ಲಿ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹೊಸ ಪೊಲೀಸ್‌ ಠಾಣೆಯಿಂದ ಉರ್ದು ಶಾಲೆ ವರೆಗೆ ಎಚ್‌ಡಿಪಿಇ ಪೈಪ್‌ಲೈನ್‌ ಅಳವಡಿಕೆಗೆ ಸುಮಾರು .23 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಹೊಸ ಪೈಪ್‌ಲೈನ್‌ ಅಳವಡಿಸಲಾಗುವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಅನುದಾನವನ್ನು ಹೆಚ್ಚು ದೊರೆಯುವಂತೆ ಮಾಡಿ ಕ್ಷೇತ್ರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಹೇಳಿದರು.

15 ರೂ ನೀರು ಬಾಟಲಿಗೆ 20 ರೂ ವಸೂಲಿ: IRTC ಗುತ್ತಿಗೆದಾರನಿಗೆ 1 ಲಕ್ಷ ದಂಡ

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಮ್ಮ ಅಂದಲಗಿ, ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ, ಮಾಜಿ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್‌, ಅಶ್ವಿನಿ ಅಂಕಲಕೋಟೆ, ಸದಸ್ಯರಾದ ಯಲ್ಲವ್ವ ದುರಗಣ್ಣವರ, ವಾಣಿ ಹತ್ತಿ, ರಾಜು ಕುಂಬಿ, ಬಸವರಾಜ ಓದುನವರ, ಮಹಾದೇವಪ್ಪ ಅಣ್ಣಿಗೇರಿ, ರಾಮಣ್ಣ ರಿತ್ತಿ, ಪ್ರಕಾಶ ಮಾದನೂರ, ಸಂಗಮೇಶ ಬೇಳವಳಕೊಪ್ಪ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ರುದ್ರಪ್ಪ ಉಮಚಗಿ, ನಾಗೇಶ ಅಮರಪುರ, ಪ್ರವೀಣ ಬೋಮಲೆ, ರಮೇಶ ಲಮಾಣಿ, ರಾಮು ಗೋಜಗೋಜಿ, ಲಕ್ಷ್ಮಣ ಲಮಾಣಿ, ವಿಜಯ ಕುಂಬಾರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಇಂಜನೀಯರ್‌ ಇಬ್ರಾಹಿಂ, ಶಿವಣ್ಣ ಮ್ಯಾಗೇರಿ, ಬದಿ, ಮಂಜುನಾಥ ಮುದಗಲ್‌ ಸೇರಿದಂತೆ ಅನೇಕರಿದ್ದರು.

click me!