ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪಿಗಾಗಿ ಅಮೃತ ಭಾರತಿಗೆ ಕನ್ನಡದಾರತಿ: ಜಿ.ಎಂ. ಸಿದ್ದೇಶ್ವರ್

Published : May 29, 2022, 02:49 AM IST
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪಿಗಾಗಿ ಅಮೃತ ಭಾರತಿಗೆ ಕನ್ನಡದಾರತಿ: ಜಿ.ಎಂ. ಸಿದ್ದೇಶ್ವರ್

ಸಾರಾಂಶ

ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ ಅದಕ್ಕಾಗಿ ಹೋರಾಡಿದವರು, ಜೈಲಿಗೆ ಹೋದವರು ಬಹಳಷ್ಟು ಹಿರಿಯರಿದ್ದಾರೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಮರಣಿಸಿದ್ದಾರೆ. ಹೋರಾಟ ಮಾಡಿದ ಎಲ್ಲಾ ಮಹನೀಯರ ನೆನಪಿಗಾಗಿ ರಾಜ್ಯದೆಲ್ಲೆಡೆ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. 

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಮೇ.29): ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ ಅದಕ್ಕಾಗಿ ಹೋರಾಡಿದವರು, ಜೈಲಿಗೆ ಹೋದವರು ಬಹಳಷ್ಟು ಹಿರಿಯರಿದ್ದಾರೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಮರಣಿಸಿದ್ದಾರೆ. ಹೋರಾಟ ಮಾಡಿದ ಎಲ್ಲಾ ಮಹನೀಯರ ನೆನಪಿಗಾಗಿ ರಾಜ್ಯದೆಲ್ಲೆಡೆ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಇದು ವಿಶೇಷವಾದ ಕಾರ್ಯಕ್ರಮ ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕು. ಜಿಲ್ಲೆಯಲ್ಲಿ ಈ ಸಮಾರಂಭದ ಮೂಲಕ ಹೋರಾಟಗಾರರಿಗೆ ಗೌರವ ನೀಡಲಾಗುತ್ತಿದೆ. ಇದೇ ವೇಳೆ ಹೋರಾಟಗಾರರಿಗೆ ಸನ್ಮಾನ ಮಾಡಬೇಕು ಎಂದು ಸಲಹೆ‌ ನೀಡಿದರು. ಭಾಷಣಕ್ಕಿಂತ ಕೃತಿ ಮುಖ್ಯ ಇದನ್ನು ನಿರೂಪಿಸಿದವರು ಪ್ರಧಾನಿ‌ ನರೇಂದ್ರ ಮೋದಿ. ಕೊವಿಡ್ ಸಮಯದಲ್ಲಿ‌ ಅಂಗನವಾಡಿ, ‌ಆಶಾ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದರು. ವೈದ್ಯರು, ಶ್ರುಶೂಷಕರು‌  ಕೆಲಸ‌ಮಾಡಿದ್ದಾರೆ. ಅವರೆಲ್ಲರ ಶ್ರಮದಿಂದ ನಾವಿಂದು‌ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಪ್ರಧಾನಿ ಮೋದಿ ವಿಶ್ವ ನಾಯಕರಾಗಿದ್ದಾರೆ 18 ರಿಂದ 20 ತಾಸು ಕೆಲಸ ಮಾಡಿದವರು ಪ್ರಧಾನಿ. 

ದೇಶ ಮೊದಲು, ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಲಿ: ಕಾಗೇರಿ

ಹೊರದೇಶದವರು ಇನ್ನೂ ಕೊವಿಡ್ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಆದರೆ ನಮ್ಮ ದೇಶ ಕೋವಿಡ್ ನಿರ್ವಹಣೆಯಲ್ಲಿ ಯಶಸ್ಸು ‌ಕಂಡಿದೆ. ಪ್ರಧಾನಿಯವರು ಹಲವಾರು ಯಶಸ್ವಿ ಯೋಜನೆಗಳ ಮೂಲಕ ಮನೆಮಾತಾಗಿದ್ದಾರೆ. ಸಿಎಂ‌ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ.ರಸಗೊಬ್ಬರ ಸಬ್ಸಿಡಿ ನೀಡಿದ್ದಾರೆ. ಬೇರೆ ದೇಶಕ್ಕೆ ಹೊಲಿಸಿದರೆ ದೇಶ ಕಡಿಮೆ ದರದಲ್ಲಿ ರಸಗೊಬ್ಬರ ನೀಡಿದೆ. ದೇಶ ಸುಭಿಕ್ಷೆಯಾಗಿದೆ ಹಾಗೂ ಕೆಲವೇ ವರ್ಷದಲ್ಲೇ ದೇಶ ಮುಂಚೂಣಿಯಲ್ಲಿದೆ‌ ಎಂದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬೆಂಗಳೂರಿನ ಪ್ರಾಧ್ಯಾಪಕಿ ಡಾ. ವನಜಾಕ್ಷಿ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮೆಲಕು ಹಾಕಿದರು.

ವೈವಿಧ್ಯತೆಯಲ್ಲಿ ಏಕತೆ ಕಾಣುವ ನಮ್ಮ ಭಾರತ,  ಜಗತ್ತಿನ ಏಳಿಗೆಗಾಗಿ ಉಳಿದುಕೊಳ್ಳಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಮೃತ ಮಥನದ ವೇಳೆ ಅಮೃತದ ಜೊತೆಗೆ ಹಾಲಾಹಲ ಬಂದಾಗ ಶಿವ ಅದನ್ನು ಕುಡಿದು, ಜೀವಸಂಕುಲವನ್ನು ಉಳಿಸಿದಂತೆ, ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಹಲವಾರು ಮಹನೀಯರು ತ್ಯಾಗ, ಬಲಿದಾನಗೈದಿದ್ದಾರೆ. ಅವರನ್ನು ಸ್ಮರಿಸುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಅಮೃತ ಭಾರತಿ ಆತ್ಮನಿರ್ಭರತೆಯ ಹಾಗೂ ಸ್ವಾಭಿಮಾನದ ಸಂಕೇತವಾಗಬೇಕಿದೆ ಎಂದು ಹೇಳಿದರು. ಯಾವ ರಾಷ್ಟ್ರ ನಾಗರೀಕತೆ ಕಲಿಸಿತೋ, ಜ್ಞಾನದ ತಾಣವಾಗಿತ್ತೋ ಹಾಗೂ ಸಂಪತ್ತಿನ ಗಣಿಯಾಗಿತ್ತೋ ಅಂತಹ ಭಾರತದ ಮೇಲೆ ಅನೇಕ ಪರಕೀಯರ ಆಕ್ರಮಣಗಳು  ಹಲವು ವರ್ಷಗಳ ಕಾಲ ನಡೆದಿದೆ. 

ಚಿತ್ರದುರ್ಗದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ

ಬ್ರಿಟೀಷರನ್ನು ಹೊಡೆದೋಡಿಸುವಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತೆತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ವೀರ ಸಾವರ್ಕರ್,ಭಗತ್ ಸಿಂಗ್, ಬಾಲಗಂಗಾಧರ ತಿಲಕ್, ವಲ್ಲಭಭಾಯ್ ಪಟೇಲ್  ಚಂದ್ರಶೇಖರ ಆಜಾದ್, ಸುಭಾಶ್ಚಂದ್ರ ಬೋಸ್, ಗಾಂಧೀಜಿ, ಅಂಬೇಡ್ಕರ್ ಅಂತಹವರನ್ನು ಸ್ಮರಿಸುವ  ದಿನ ಇದಾಗಿದೆ. ಇಂದು ಸಾವರ್ಕರ್ ಜನ್ಮದಿನವೂ ಹೌದು ಎಂದರು.ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಈ ಕಾರಣದಿಂದ ನಾವುಗಳು ದೇಶ ನಡೆದು ಬಂದ ಹಾದಿಯನ್ನು ಅರಿಯಬೇಕು ಎಂದರಲ್ಲದೇ, ಅಖಂಡ ಭಾರತದ ಪರಿಕಲ್ಪನೆ ತಂದವರು ವಲ್ಲಭಭಾಯ್ ಪಟೇಲ್ ಅವರಾದರೆ, ಸಂವಿಧಾನದ ಮೂಲಕ ರಾಷ್ಟ್ರವನ್ನು ಕಟ್ಟಲು ಅಂಬೇಡ್ಕರ್ ಮುಂದಾದರು ಎಂದು ತಿಳಿಸಿದರು.

PREV
Read more Articles on
click me!

Recommended Stories

ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು