ಗಂಗಾವತಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಅಮೃತ್‌ ಯೋಜನೆ ಕಾಮಗಾರಿ ಕಳಪೆ

By Kannadaprabha NewsFirst Published Jun 10, 2020, 7:53 AM IST
Highlights

ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಂಸದ ಸಂಸದ ಸಂಗಣ್ಣ ಪತ್ರ|ಈ ಯೋಜನೆಯಡಿ ಒಟ್ಟು 110.78 ಕೋಟಿ ಮೊತ್ತದ ಯೋಜನೆಯ ಅನುದಾನದಡಿ 21 ಕಾಮಗಾರಿಗಳಲ್ಲಿ 6 ಕಾಮಗಾರಿಗಳು ಈಗಾಗಲೇ ಪೂರ್ಣವಾಗಿದ್ದು, 15 ಕಾಮಗಾರಿಗಳು ಪ್ರಗತಿಯ ಹಂತದಲ್ಲಿ ಇವೆ. 64.576 ಕೋಟಿ ಅನುದಾನ ಬಳಕೆಯಾಗಿ​ದೆ|

ಕೊಪ್ಪಳ(ಜೂ.10):  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕೇಂದ್ರ ಪುರಸ್ಕೃತ (ಅಮೃತ್‌) ಅಟಲ್‌ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ ಯೋಜನೆಯಡಿ ಜಿಲ್ಲೆಯ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಈ ಯೋಜನೆಯನ್ನು 25 ಜೂನ್‌ 2015ರಿಂದ ದೇಶಾದ್ಯಂತ ಜಾರಿಗೆ ತಂದಿದ್ದು, ಮೂಲಸೌಕರ್ಯಗಳನ್ನು ನಾಗರೀಕರಿಗೆ ಒದಗಿಸುವ ಮತ್ತು ನಗರಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿ ನಗರೀಕರಣ ಜೀವನ ಮಟ್ಟವನ್ನು ಉತ್ತಮ ಪಡಿಸುವ ಧ್ಯೇಯವನ್ನು ಹೊಂದಿದೆ. ಇಂತಹ ಮಹತ್ವದ ಯೋಜನೆ ಗಂಗಾವತಿ ನಗರಕ್ಕೆ ಮಂಜೂರಿಯಾಗಿದೆ. ಪ್ರಮುಖವಾಗಿ ನೀರು ಸರಬರಾಜು, ಒಳಚರಂಡಿ ನಿರ್ವಹಣೆ, ಮಳೆ ನೀರು ಚರಂಡಿ, ಯಾಂತ್ರಿಕೃತವಲ್ಲದ ಸಾರ್ವಜನಿಕ ಸಾರಿಗೆ ಸೌಲಭ್ಯ, ನಗರಗಳ ಉದ್ಯಾನವನಗಳು ಹಾಗೂ ಹಸಿರು ಗಿಡಗಳನ್ನು ಮತ್ತು ಮನರಂಜನಾ ಕೇಂದ್ರಗಳನ್ನು ಉನ್ನತೀಕರಿಸಿ ಮಕ್ಕಳಿಗಾಗಿ ಸೌಕರ್ಯ ಮಟ್ಟವನ್ನು ಹೆಚ್ಚಿಸುವುದಾಗಿದೆ. ಆದರೆ, ಈ ಕಾಮಗಾರಿಗಳ ಅನುಷ್ಠಾನದಲ್ಲಿ ನಗರಸಭೆಯ ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿಗಳ ನಿರ್ವಹಣೆಯಲ್ಲಿ ವಿಫ​ಲ​ವಾ​ಗಿ​ರು​ವು​ದ​ರಿಂದ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಇದರಲ್ಲಿ ಅನುದಾನದ ದುರುಪಯೋಗವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿರುವುದು ಹಾಗೂ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.

ವಿದೇಶ, ಹೊರರಾಜ್ಯಳಿಂದ ಬಂದವರಿಗೆ ಹೋಂ ಕ್ವಾರಂಟೈನ್‌

ಈ ಯೋಜನೆಯಡಿ ಗಂಗಾವತಿ ನಗರದಲ್ಲಿ ಕೈಗೊಂಡಿರುವ ಗ್ರೀನ್‌ ಸ್ಪೆಸ್‌ ಮತ್ತು ಪಾರ್ಕ್ ನಿರ್ಮಾಣದ . 2.35 ಕೋಟಿ ಅನುದಾನದಲ್ಲಿ 7 ಕಾಮಗಾರಿಗಳಿವೆ. ಇದರಲ್ಲಿ 5 ಮುಕ್ತಾಯವಾಗಿದ್ದು, 2 ಪ್ರಗತಿಯಲ್ಲಿದ್ದು, . 1.637 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ. ಸ್ಟೊ್ರೕಮ್‌ ವಾಟರ್‌ ಡ್ರೈನ್‌ಗಾಗಿ . 20.00 ಕೋಟಿ ಅನುದಾನದಲ್ಲಿ 5 ಕಾಮಗಾರಿಗಳಿದ್ದು 5 ಪ್ರಗತಿಯಲ್ಲಿದ್ದು . 6.22 ಕೋಟಿ ವೆಚ್ಚವಾಗಿದೆ. ಅರ್ಬನ್‌ ಟ್ರಾನ್ಸಪೋರ್ಟ್‌ ನಿರ್ವಹಣೆಗಾಗಿ . 10.00 ಕೋಟಿ ಅನುದಾನವಿದ್ದು, 6 ಕಾಮಗಾರಿಗಳಲ್ಲಿ 1 ಮುಗಿದಿ​ದ್ದು 5 ಪ್ರಗತಿಯಲ್ಲಿವೆ. ಇದಕ್ಕೆ . 1.879 ಕೋಟಿ ವೆಚ್ಚವಾಗಿದೆ.

ಯುಜಿಡಿ ಇನಕ್ಲೂಡಿಂಗ್‌ ಎಡಿಡಿಎನ್‌ ರೂ. 53.43 ಕೋಟಿ, ಅನುದಾನ 2 ಕಾಮಗಾರಿಗಳು, 2 ಪ್ರಗತಿಯಲ್ಲಿ ರೂ. 36.29 ಕೋಟಿ ವೆಚ್ಚವಾಗಿದೆ. ವಾರ್ಟ ಸಪ್ಲಾಯ್‌ ಸ್ಕೀಂ 25.00 ಕೋಟಿ, ಅನುದಾನ 1 ಕಾಮಗಾರಿಗಳು, 1 ಪ್ರಗತಿಯಲ್ಲಿ ರೂ. 18.55 ಕೋಟಿ ವೆಚ್ಚ ಮಾಡಲಾಗಿದೆ. ಈ ಯೋಜನೆಯಡಿ ಒಟ್ಟು 110.78 ಕೋಟಿ ಮೊತ್ತದ ಯೋಜನೆಯ ಅನುದಾನದಡಿ 21 ಕಾಮಗಾರಿಗಳಲ್ಲಿ 6 ಕಾಮಗಾರಿಗಳು ಈಗಾಗಲೇ ಪೂರ್ಣವಾಗಿದ್ದು, 15 ಕಾಮಗಾರಿಗಳು ಪ್ರಗತಿಯ ಹಂತದಲ್ಲಿ ಇವೆ. 64.576 ಕೋಟಿ ಅನುದಾನ ಬಳಕೆಯಾಗಿ​ದೆ. ಆದರೆ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಗುಣಮಟ್ಟದ ಬಗ್ಗೆ ಮತ್ತು ಕಾಮಗಾರಿಗಳ ಕುರಿತು ಯೋಜನೆಯ ಮಾರ್ಗಸೂಚಿಯಂತೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಂಸದ ಕರಡಿ ಸಂಗಣ್ಣ ಪತ್ರದಲ್ಲಿ ತಿಳಿಸಿದ್ದಾರೆ.

ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಗುಣಮಟ್ಟ ಇಲ್ಲದಿರುವುದು ಮತ್ತು ಅನುದಾನದ ಸಮರ್ಪಕ ಬಳಕೆಯಾಗಿಲ್ಲದಿರುವುದು ಕಂಡು ಬರುವುವದರಿಂದ ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಂಸದರು ಜಿಲ್ಲಾಧಿಕಾರಿಗೆ ದೂರಿದ್ದಾರೆ.
 

click me!