ಕಾವೇರಿ ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳ ರೈತ ಸಂಘಟನೆಗಳ ನಿಯೋಗ ತಾಲೂಕಿನ ಸಂಗಮ ರಸ್ತೆಯ ತಾಳೆಕಟ್ಟೆ ಸಮೀಪದ ರೈತನ ತೋಟದ ಮನೆಯಲ್ಲಿ ಕಾವೇರಿ ಸಮನ್ವಯ ಸಭೆ ಸೇರಿ ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸಿದರು.
ಕನಕಪುರ (ಅ.25): ಕಾವೇರಿ ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳ ರೈತ ಸಂಘಟನೆಗಳ ನಿಯೋಗ ತಾಲೂಕಿನ ಸಂಗಮ ರಸ್ತೆಯ ತಾಳೆಕಟ್ಟೆ ಸಮೀಪದ ರೈತನ ತೋಟದ ಮನೆಯಲ್ಲಿ ಕಾವೇರಿ ಸಮನ್ವಯ ಸಭೆ ಸೇರಿ ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಚನ್ನಪಟ್ಟಣ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮೇಕೆದಾಟು ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ನಾಲ್ಕು ರಾಜ್ಯಗಳ ರೈತ ಮುಖಂಡರು ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಉಪ ಚುನಾವಣೆ ಮುಗಿದ ನಂತರ ಮತ್ತೆ ಸಭೆ ಸೇರಿ ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಚರ್ಚಿಸಿ ನಾಲ್ಕು ರಾಜ್ಯಗಳು ಸೌಹಾರ್ದತೆಯಿಂದ ನಡೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ತಮಿಳುನಾಡಿನ ತಮಿಝಗ ಕಾವೇರಿ ರೈತರ ಸಂಘದ ಪ್ರಧಾನ ಕಾರ್ಯದರ್ಶಿಪಿ.ಆರ್.ಪಾಂಡ್ಯನ್ ಮಾತನಾಡಿ, ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಾಲ್ಕು ರಾಜ್ಯದ ಕಾವೇರಿ ಕುಟುಂಬ ಮೇಕೆದಾಟು ಅಣೆಕಟ್ಟು ನಿರ್ಮಾಣ ಸ್ಥಳ ವೀಕ್ಷಣೆ ಮುಂದೂಡಿರುವುದಾಗಿ ತಿಳಿಸಿದರು. ತಮಿಳುನಾಡು ಹೈಲೆವೆಲ್ ಕಮಿಟಿ ಮೆಂಬರ್ ಆಲ್ ಫಾರ್ಮರ್ ಅಸೋಸಿಯೇಷನ್ ಸುಧಾ ಮಾತನಾಡಿ, ಮೇಕೆದಾಟು ನಿರ್ಮಾಣ ಯೋಜನೆ ಬಗ್ಗೆ ನಾಲ್ಕು ರಾಜ್ಯಗಳ ರೈತ ಮುಖಂಡರು ಸಮಾಲೋಚನೆ ನಡೆಸಿದ್ದೇವೆ. ಮೇಕೆದಾಟು ಯೋಜನೆಯಿಂದ ಆಗುವ ಅನುಕೂಲಗಳು ಹಾಗೂ ಅನನುಕೂಲಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ.
ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿಯ ಸಾಕ್ಷಿಗುಡ್ಡೆ ತೋರಿಸಲಿ: ಎಚ್‌ಡಿಕೆಗೆ ಡಿಕೆಶಿ ಸವಾಲು
ತಮಿಳುನಾಡಿನ ರೈತರು ಅವರ ಅನಿಸಿಕೆಗಳನ್ನು ತಿಳಿಸಿದ್ದಾರೆ. ನಾಲ್ಕು ರಾಜ್ಯದ ರೈತ ಮುಖಂಡರು ಹಾಗೂ ನುರಿತ ತಾಂತ್ರಿಕ ವರ್ಗ ಮೇಕೆದಾಟು ನಿರ್ಮಾಣ ಸ್ಥಳವನ್ನು ಪರಿಶೀಲನೆ ಮಾಡಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ನದೀಮ್, ಪ್ರಶಾಂತ್ ಕುಮಾರ್, ಹೊಸದುರ್ಗ, ವೆಂಕಟೇಶ್, ರಾಮಣ್ಣ, ರಾಮು, ಕೆಂಚಪ್ಪ, ಶ್ರೀನಿವಾಸ್, ನಜೀಬ್, ಆರೋಗ್ಯಸ್ವಾಮಿ, ಅಂತೋಣಿ ರಾಜ್, ಗಜೇಂದ್ರ ಸಿಂಗ್, ಬಿ.ಎಂ.ಪ್ರಕಾಶ್, ರಾಜಣ್ಣ ಹಾಗೂ ನಾಲ್ಕು ರಾಜ್ಯಗಳ ರೈತ ಮುಖಂಡರು ಕಾರ್ಯಕರ್ತರು ಹಾಜರಿದ್ದರು.