ರಸ್ತೆ ಪಕ್ಕಕ್ಕೆ ಪಿಪಿಇ ಕಿಟ್ ಬಿಸಾಕಿಹೋದ ಆ್ಯಂಬುಲೆನ್ಸ್ ಚಾಲಕ| ಕೊರೋನಾ ಶಂಕಿತರನ್ನು ಆ್ಯಂಬುಲೆನ್ಸ್ ನಲ್ಲಿ ಕರೆತಂದಿದ್ದ ಚಾಲಕ| ಕೋವಿಡ್ -19 ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ| ಜೈವಿಕ ಘನತ್ಯಾಜ್ಯ ಘಟಕದಡಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು|
ಗದಗ(ಏ.18): ನಗರದಲ್ಲಿ ಆ್ಯಂಬುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸಿಕೊಂಡ ಹತ್ತಾರು ಜನ ಕೊರೋನಾ ಶಂಕಿತರನ್ನು ಕರೆತಂದು ಆನಂತರ ಬೇಕಾಬಿಟ್ಟಿಯಾಗಿ ರಸ್ತೆ ಪಕ್ಕ ಕಿಟ್ ಎಸೆದು ಹೋಗಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
undefined
ಗದಗ ಜಿಲ್ಲಾ ಆಸ್ಪತ್ರೆ ರಸ್ತೆಯ ಮಲ್ಲಸಮುದ್ರ ಕ್ರಾಸ್ ಬಳಿ ರಸ್ತೆ ಪಕ್ಕಕ್ಕೆ ಪಿಪಿಇ ಕಿಟ್ ಬಿಸಾಕಿಹೋಗಿದ್ದಾನೆ. ಆ್ಯಂಬುಲೆಸ್ಸ್ ಚಾಲಕನ ಬೇಜವಾಬ್ದಾರಿತನದಿಂದ ಸಂಚರಿಸುವ ಸಾರ್ವಜನಿಕರಿಗೆ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಕೊರೋನಾ ಆತಂಕ: ಕಿರಾಣಿ ಅಂಗಡಿಗಳಿಗೆ ಬೀಗಮುದ್ರೆ
ಜಿಲ್ಲಾಸ್ಪತ್ರೆಯಿಂದ ಬಂದಿರುವ ಆ್ಯಂಬುಲೆಸ್ಸ್ ಚಾಲಕ ಪಿಪಿಇ ಕಿಟ್ ತೆಗೆದು ಬಿಸಾಕುವ ದೃಶ್ಯವನ್ನು ಮೊಬೈಲ್‌ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ. ಕೋವಿಡ್ -19 ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಜೈವಿಕ ಘನತ್ಯಾಜ್ಯ ಘಟಕದಡಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಎನ್ನುವ ನಿಯಮವಿದೆ.
ಇನ್ನೊಂದೆಡೆ ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರ ಹಾಗೂ ವೈದ್ಯಕೀಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಆದರೆ, ಈ ಚಾಲಕ ಪಿಪಿಇ ಕಿಟ್ ಎಸೆದು ಬೇಜವ್ದಾರಿತನ ಪ್ರದರ್ಶಿಸಿದ್ದಾನೆ. ಇದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆ್ಯಂಬುಲೆಸ್ಸ್ ಚಾಲಕನ ಯಾರು? ಯಾವ ಹಾಸ್ಪಿಟಲ್ ಆ್ಯಂಬುಲೆಸ್ಸ್ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬೇಕಾಬಿಟ್ಟಿಯಾಗಿ ಬಿದ್ದಿರುವ ಕಿಟ್‌ಗಳನ್ನು ಸುಟ್ಟು ಹಾಕಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.