ಅಂಬೋಲಿ: ಮೂಲ ಸೌಕರ್ಯವಿಲ್ಲದೇ ಗಲಿಬಿಲಿ!

By Web DeskFirst Published Jul 27, 2018, 6:16 PM IST
Highlights

ಅಂಬೋಲಿ ಜಲಪಾತ ಕಾಣುವ ಬಯಕೆಯೇ?

ಪ್ರಕೃತಿ ಪ್ರಿಯರ ಆಕರ್ಷಣಿಯ ಕೇಂದ್ರ ಅಂಬೋಲಿ

ಪಶ್ಚಿಮಘಟ್ಟದ ರುದ್ರರಮಣೀಯ ಜಲಪಾತ

ಮೂಲ ಸೌಕರ್ಯವಿಲ್ಲದೇ ಪ್ರವಾಸಿಗರ ಪರದಾಟ

ನೀರು, ಶೌಚಾಲಯದಂತ ಸೌಕರ್ಯವೇ ಇಲ್ಲಿಲ್ಲ

ಅಸ್ವಚ್ಛತೆಗೆ ಕಾರಣರಾಗಿರುವ ಪ್ರವಾಸಿಗರು 
 

ಬೆಳಗಾವಿ(ಜು.27): ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಕೃತಿ ಪ್ರಿಯರಿಗೆ ಬಹು ಆಕರ್ಷಣೀಯ ಕೇಂದ್ರವಾಗಿದೆ ಅಂಬೋಲಿ. ಮಹಾರಾಷ್ಟ್ರದ ಪಶ್ಚಿಮಘಟ್ಟದ ಸಾಲಿನಲ್ಲಿರುವ ಸಿಂದುದುರ್ಗ ಜಿಲ್ಲೆಯ ಅಂಬೋಲಿ ಜಲಪಾತ ನಿಜಕ್ಕೂ ರುದ್ರರಮಣೀಯ. 

ಆದರೆ ಇಷ್ಟೊಂದು ಆಕರ್ಷಣೀಯ ತಾಣದಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಪ್ರವಾಸಿಗರು ಅನುಭವಿಸುತ್ತಿರುವುದು ಮಾತ್ರ ವಿಪರ್ಯಾಸ. ವಿಚಿತ್ರವೆಂದರೆ, ಶುದ್ಧ ಕುಡಿವ ನೀರು, ಶೌಚಾಲಯದಂತಹ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ಎದ್ದು ಕಾಣುತ್ತದೆ.

ಮುಂಗಾರು ಮಳೆಯ ನರ್ತನದ ಈ ಸಂದರ್ಭದಲ್ಲಿ ಅಂಬೋಲಿ ಜಲಪಾತ ತುಂಬಿ ತುಳುಕುತ್ತಿದೆ. ಹಿರಣ್ಯಕೇಶಿ ನದಿಗೆ ಸೇರಿಕೊಳ್ಳುವ ಈ ಜಲಪಾತದ ನೀರನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವಾರಾಂತ್ಯಕ್ಕೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಕಾರವಾರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. 

ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ತಾಣ ಅಂಬೋಲಿ. ಈ ಪೈಕಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಉತ್ಸಾಹಿ ಯುವಕರೇ ದಂಡೇ ಜಾಸ್ತಿ. ಆದರೆ, ಬೈಕ್ ತೆಗೆದುಕೊಂಡು ಹೋಗುವುದು ಇಂದಿನ ಸಂದ‘ರ್ಕ್ಕೆ ಅದು ಒಗ್ಗುವುದಿಲ್ಲ. ಇತ್ತೀಚೆಗಷ್ಟೇ ಬೆಳಗಾವಿಯ ಯುವಕನೊಬ್ಬ ಬೈಕ್ ತೆಗೆದುಕೊಂಡು ಹೋದಾಗಲೇ ಅವಘಡಕ್ಕೆ ಬಲಿಯಾಗಿದ್ದು. ಭಾರೀ ಮಳೆಗೆ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿವೆ. ಹೀಗಾಗಿ ಎಷ್ಟೇ ಸುರಕ್ಷಿತವಾಗಿ ಚಾಲನೆ ಮಾಡಿದರೂ ಅಪಘಾತ ಸಂಭವಿಸುವ ಭೀತಿ ಇದ್ದೇ ಇರುತ್ತದೆ.

 

ಪಾರ್ಕಿಂಗ್ ಕಿರಿಕಿರಿ:
ಬೆಳಗಾವಿಯಿಂದ ೬೮ ಕಿಮೀ ದೂರದಲ್ಲಿರುವ ಅಂಬೋಲಿ ಜಲಪಾತ ನೋಡುವ ಆತುರ ಎಲ್ಲರಲ್ಲಿಯೂ ಇದೆ. ಆದರೆ, ಜಲಪಾತ ವೀಕ್ಷಿಸಲು ಪ್ರವಾಸಿಗರು ೩ ರಿಂದ ೪ ಕಿಮೀಗೂ ಮೊದಲೇ ತಮ್ಮ ವಾಹನ ನಿಲುಗಡೆ ಮಾಡಬೇಕು. ಅಂಬೋಲಿಯಿಂದ ಜಲಪಾತವು ಮಹಾರಾಷ್ಟ್ರದ ವೆಂಗುರ್ಲಾ ರಸ್ತೆ ಮಾರ್ಗದಲ್ಲಿ ಬರುತ್ತದೆ. ಈ ಮಾರ್ಗದ ಮೂಲಕ ವೆಂಗುರ್ಲಾಕ್ಕೆ ಹೋಗುವವರು ಜಲಪಾತ ದರ್ಶನ ಮಾಡಬಹುದು. ಆದರೆ, ಜನಜಂಗುಳಿಯಿಂದಾಗಿ ನಡೆಕೊಂಡು ಹೋಗುವುದು ಕೂಡ ಕಷ್ಟವಿದೆ. ಹೀಗಿರುವಾಗ ಬಸ್, ಕಾರು, ಬೈಕ್ ತೆಗೆದುಕೊಂಡು ಹೋಗುವುದಂತೂ ತೀರಾ ದುಸ್ತರವೇ ಸರಿ. 

ಇಲ್ಲಿ ಖಾಸಗಿ ಹೋಟೆಲ್ ಸೇರಿದಂತೆ ಮನೆಯ ಮುಂದಿನ ಖಾಲಿ ಜಾಗದಲ್ಲಿ ತಮ್ಮ ವಾಹನ ನಿಲ್ಲಿಸಲು ಅವಕಾಶವಿದೆ. ಆದರೆ, ಅವರು ಕೇಳಿದಷ್ಟು ಹಣ ತೆರಬೇಕು.

ಅಸ್ವಚ್ಛತೆಯ ತಾಂಡವ:
ಮಳೆಯಬ್ಬರ ನಿರಂತರವಾಗಿರುತ್ತದೆ. ಅದರ ಜತೆಗೆ ಪ್ರಕೃತಿದತ್ತವಾದ ಆವೆಯೂ ಅಷ್ಟೇ ದಟ್ಟವಾಗಿ ಹಬ್ಬಿಕೊಂಡಿರುತ್ತದೆ. ಹೀಗಾಗಿ ಅಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿರುತ್ತದೆ. ಹೀಗಾಗಿ ಬಿಸಿ ಬಿಸಿ ತಿಂಡಿ ತಿನಿಸುಗಳಿಗೆ ಜನ ಮುಗಿ ಬೀಳುತ್ತಾರೆ. ಟೀ, ಸುಟ್ಟ ಮೆಕ್ಕೆಜೋಳದ ತೆನೆ, ತಾವು ತಂದಿರುವ ತಿಂಡಿ, ತಿನಿಸನ್ನು ಪ್ರವಾಸಿಗರು ಅಲ್ಲಿಯೇ ಸೇವಿಸುತ್ತಾರೆ. ಮಾತ್ರವಲ್ಲ, ಸೇವನೆಯ ನಂತರ ತಿಂದ ಜಾಗದಲ್ಲಿಯೇ ತ್ಯಾಜ್ಯ ಬಿಸಾಡಿ ಹೋಗುತ್ತಾರೆ. ಹೀಗಾಗಿ ಅಲ್ಲಲ್ಲಿ ಅಸ್ವಚ್ಛತೆಯ ತಾಂಡವ ಪ್ರದರ್ಶನವಾಗುತ್ತದೆ.

ಶೌಚಾಲಯಲಕ್ಕೆ ಹರಸಾಹಸ:
ಸುರಿಯುವ ಮಳೆ, ಚಳಿಗೆ ನಿತ್ಯಕರ್ಮಕ್ಕೆ ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಪುರುಷರಿಗೆ ಇದು ಯಾವ ತೊಂದರೆಯೂ ಆದರೆ, ಮಹಿಳೆಯರಿಗೆ ಮಾತ್ರ ತೊಂದರೆಯಿದೆ. ಜೂನ್, ಜುಲೈ ಹಾಗೂ ಆಗಸ್ಟ್ ಮಾಸಗಳಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ, ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೀಘ್ರ ಶೌಚಾಲಯಕ್ಕೆ ಸ್ಥಿರ ಶೌಚಾಲಯ ನಿರ್ಮಿಸದಿದ್ದರೂ ಸಂಚಾರಿ ಶೌಚಾಲಯಗಳನ್ನಾದರೂ ನಿರ್ಮಿಸುವ ವ್ಯವಸ್ಥೆ ಮಾಡಬೇಕಿದೆ ಎಂಬುದು ಪ್ರವಾಸಿಗರ ಆಗ್ರಹ.

ಅಂಬೋಲಿಯಿಂದ ಜಲಪಾತದ ಸನಿಹಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಬದಿಯುದ್ಧಕ್ಕೂ ಆಳವಾದ ಕಂದಕಗಳಿವೆ. ಇದರಿಂದ ರಸ್ತೆಯ ಕಂದಕ ಬದಿಗೆ ಪಾದಚಾರಿಗಳು ಸಂಚರಿಸದಂತೆ ಅಲ್ಲಿನ ರಕ್ಷಣಾ ಸಿಬ್ಬಂದಿ ಸೇರಿದಂತೆ ಗಸ್ತು ತಿರುಗುವ ವಾಹನದಲ್ಲಿ ಸೂಚನೆ, ಆದೇಶಗಳನ್ನು ನೀಡುತ್ತಿರುತ್ತಾರೆ. ಆದರೂ ಚೇಷ್ಟೆ ಮಾಡುವ ಯುವಕರು ಕುತೂಹಲಕ್ಕಾಗಿ ಕಂದಕದ ಆಳ ಅಗಲದ ವೀಕ್ಷಣೆಗೆ ಮುಂದಾಗುವುತ್ತಿರುವುದು ರಕ್ಷಣಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಜಾರಿದರೆ ಜವರಾಯ ಸನಿಹ:
ಜಲಪಾತದ ನೀರಿನಲ್ಲಿ ಇಳಿದು ಸ್ವಲ್ಪ ಜಲಸಿಂಚನ ಮಾಡಿಕೊಂಡು ಬರಬೇಕು ಎನ್ನುವವರು ಅಲ್ಲಿನ ನಿರ್ವಹಣೆಯ ವ್ಯವಸ್ಥೆಗೆ ೧೦ ರೂ. ಸಂದಾಯ ಮಾಡಬೇಕು. ಇಲ್ಲಿಗೆ ತೆರಳುವಾಗ ಸುರಕ್ಷತೆ ದೃಷ್ಟಿಯಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದರ ಮೇಲೆ ಹೋಗಿ ಜಲಪಾತದಿಂದ ಬೀಳುವ ನೀರನ್ನು ಸ್ಪರ್ಶಿಸಬೇಕು. 

ಹಾಗೆಯೇ ಜಲಪಾತದವರೆಗೂ ಹೋಗುವ ಅವಕಾಶಗಳು ಇದ್ದು, ಸ್ಟೀಲ್ ಪೈಪ್ ಹಿಡಿಕೆಯ ಆಶ್ರಯ ಪಡೆದು ತೆರಳಬಹುದು. ಮೆಟ್ಟಿಲುಗಳಲ್ಲಿ ನಿರಂತರ ನೀರು ಹರಿಯುವುದರಿಂದ ಸ್ವಲ್ಪ ಎಚ್ಚರಿಕೆ ಅವಶ್ಯಕ. ಅಂತಿಮ ಮೆಟ್ಟಿಲು ನಂತರ ಕಲ್ಲುಗಳ ರಾಶಿ ಇದ್ದು, ಇದರಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಸ್ವಲ್ಪ ಆಯ ತಪ್ಪಿದರೆ ನರಕ ದರ್ಶನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

click me!