ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

By Govindaraj S  |  First Published Jan 5, 2023, 5:45 AM IST

ಕಳೆದ ಕೆಲ ದಿನಗಳಿಂದ ಆನೇಕಲ್ಲಿನ ನಾರಾಯಣಪುರ ಹಾದಿಯಲ್ಲಿ ಬೊಂಬು ಹಾಗೂ ಕಾಡುಮರ ಬೆಳೆದಿರುವ ಕೊಂಬೆಯ ಮೇಲೆ ಹಾವೊಂದು ಕುಳಿತು ಬಿಸಿಲು ಕಾಯುತ್ತಿದ್ದು ಜನರ ಗಮನ ಸೆಳೆದಿದೆ. ಸಾಧಾರಣವಾಗಿ ಹಾವುಗಳು ಜನರಿರುವ ಕಡೆ ಬರುವುದಿಲ್ಲ. 


ಆನೇಕಲ್‌ (ಜ.05): ಕಳೆದ ಕೆಲ ದಿನಗಳಿಂದ ಆನೇಕಲ್ಲಿನ ನಾರಾಯಣಪುರ ಹಾದಿಯಲ್ಲಿ ಬೊಂಬು ಹಾಗೂ ಕಾಡುಮರ ಬೆಳೆದಿರುವ ಕೊಂಬೆಯ ಮೇಲೆ ಹಾವೊಂದು ಕುಳಿತು ಬಿಸಿಲು ಕಾಯುತ್ತಿದ್ದು ಜನರ ಗಮನ ಸೆಳೆದಿದೆ. ಸಾಧಾರಣವಾಗಿ ಹಾವುಗಳು ಜನರಿರುವ ಕಡೆ ಬರುವುದಿಲ್ಲ. ಜನರಂತೆ ಅವಕ್ಕೂ ಭಯವಾದರೂ ಈ ಹಾವುಗಳು ಸರದಿಯಂತೆ ಒಂದೊಂದು ದಿನ ಒಂದೊಂದು ಹಾವು ಮರದ ಅದೇ ಕೊಂಬೆಯಲ್ಲಿ ಕುಳಿತಿರುತ್ತವೆ. ಬೆಳಗ್ಗೆ ಯಾವ ಮಾಯೆಯಲ್ಲಿ ಮರ ಏರುತ್ತದೋ ತಿಳಿಯುವುದಿಲ್ಲ. ಕೊಂಬೆಯ ಮೇಲೆ ಹಾಯಾಗಿ ಮಲಗಿ ನಿದ್ರಿಸುವುದಂತೂ ಮಾಮೂಲಾಗಿದೆ.

ಜನರು ಈ ವಿಸ್ಮಯವನ್ನು ಕಣ್ಣು ತುಂಬಿಕೊಳ್ಳುವ ಜೊತೆಗೆ ಇತರರಿಗೂ ತಿಳಿಸುವುದು ಹಾಗೂ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಹಾವನ್ನು ನೋಡಲು ಮರದ ಬಳಿ ಜನ ಜಮಾಯಿಸುತ್ತಿದ್ದಾರೆ. ರಾಜಣ್ಣ ಹಾಗೂ ಇತರ ಸಮಾನ ಮನಸ್ಕರು ಇಲ್ಲೇನೋ ವಿಶೇಷ ಇರಬಹುದು ಎಂದು ನಾಗರ ಕಲ್ಲಿನ ಪ್ರತಿಷ್ಠಾಪನೆ ಜೊತೆಗೆ ಅಶ್ವತ್ಥಕಟ್ಟೆ ಕಟ್ಟಲು ಬಂದಾಗಿದ್ದಾರೆ.

Latest Videos

undefined

ಸ್ಥಳೀಯ ಉರಗ ತಜ್ಞ ಶಿವು ಹೇಳುವಂತೆ, ಹಾವುಗಳು ನೆಲದಲ್ಲಿ ಮೊಟ್ಟೆಇಟ್ಟಿದ್ದರೇ ಅದನ್ನು ಕಾಯಲು ಕಾವು ಕೊಡಲು ಬರುತ್ತವೆ. ಸಾಧಾರಣವಾಗಿ ಉಭಯ ವಾಸಿಗಳಾದ ಹಾವುಗಳು ಚಳಿ, ಮಳೆ, ಕಾರಣ ಬಿಸಿಲು ಕಾಯುವುದು ಹಾಗೂ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡರೇ ಅಲ್ಲೇ ಬರುವುದು ಸಹಜ. ಸಂಜೆಯ ನಂತರ ತನ್ನ ವಾಸಸ್ಥಾನಕ್ಕೆ ಮರಳುತ್ತವೆ. ಇದೊಂದು ಸಹಜ ಪ್ರಕ್ರಿಯೆ. ಈ ಎರಡೂ ಹಾವುಗಳ ಒಂದೇ ಕೊಂಬೆಯನ್ನು ಆಯ್ಕೆ ಮಾಡಿಕೊಂಡಿರುವುದು ಅಚ್ಚರಿ ತಂದಿದೆ ಎಂದರು.

ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್‌ ಶೆಟ್ಟಿ ರಾಯಭಾರಿ

ನಾಗರ ಹಾವಿನ ರಕ್ಷಣೆ: ಮನೆಯ ಬಳಿ ಅವಿತಿದ್ದ ದೃಶ್ಯ ನಾಗರ ಹಾವಿನ ರಕ್ಷಿಸುವಲ್ಲಿ ಉರಗ ಪ್ರೇಮಿ ರಕ್ಷಕ ಸಾಧಿಕ್‌ ಯಶಸ್ವಿಯಾಗಿದ್ದಾರೆ. ರೈಲ್ವೆ ಸ್ಟೇಷನ್‌ ಬಳಿ ಇರುವ ಕ್ವಾಟ್ರಸ್‌ ನಲ್ಲಿರುವ ಮನೆಯೊಂದರ ಬಳಿ ಸುಮಾರು 5 ಅಡಿ ಉದ್ದದ ನಾಗರ ಹಾವು ಸೇರಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತಂತೆ ನಗರದ ಉರಗ ರಕ್ಷಕ ಸಾಧಿಕ್‌ ಎನ್ನುವವರಿಗೆ ಕರೆ ಮಾಡಿದ ಸ್ಥಳೀಯರು, ಹಾವನ್ನು ಹಿಡಿಯುವಂತೆ ಮನವಿ ಮಾಡಿದರು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಾಧಿಕ್‌ ಹಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯಕ್ಕೆ ಬಿಟ್ಟು ಬರಲು ಕೊಂಡೊಯ್ದರು. ಹಾವಿನ ರಕ್ಷಣೆ ನಂತರ ಸ್ಥಳೀಯರಲ್ಲಿ ನೆಮ್ಮದಿ ಕಾರಣವಾಗಿದ್ದು, ದೈತ್ಯಾಕಾರದ ನಾಗರ ಹಾವನ್ನು ನೋಡಿ ಆಶ್ಚರ್ಯಚಕಿತರಾದರು.

click me!