ಬೌನ್ಸ್‌ ಕಂಪನಿ ವಿರುದ್ಧ ಗಂಭೀರ ಆರೋಪ !

Kannadaprabha News   | Asianet News
Published : Jan 30, 2020, 10:45 AM IST
ಬೌನ್ಸ್‌ ಕಂಪನಿ ವಿರುದ್ಧ ಗಂಭೀರ ಆರೋಪ !

ಸಾರಾಂಶ

ಅಗ್ಗದ ದರಕ್ಕೆ ವಾಹನ ಸೌಲಭ್ಯ ಒದಗಿಸುತ್ತಿದ್ದ ಬೌನ್ಸ್ ಕಂಪನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಆರೋಪಗಳ ಸುರಿಮಳೆಯನ್ನು ಹೊರಿಸಲಾಗಿದೆ.

ಬೆಂಗಳೂರು [ಜ.30]:  ರಸ್ತೆ, ಅಂಡರ್‌ ಪಾಸ್‌, ಫ್ಲೈಓವರ್‌ ಸೇರಿದಂತೆ ಎಲ್ಲೆಂದರಲ್ಲಿ ಬೌನ್ಸ್‌ ದ್ವಿಚಕ್ರವಾಹನ ಬಿಟ್ಟು ಹೋಗುತ್ತಾರೆ. ಇದರಿಂದ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರು ಆರೋಪಿಸಿದರು.

ಈ ಬೌನ್ಸ್‌ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವವರು ಅಪರಾಧ ಪ್ರಕರಣಗಳಿಗೆ ಬಳಕೆ ಮಾಡುತ್ತಿದ್ದಾರೆ. ಈ ವಾಹನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೆಲವು ನಿರ್ಬಂಧಗಳನ್ನು ವಿಧಿಸಲೇಬೇಕು ಎಂದು ಸಂಚಾರಿ ಪೊಲೀಸರಿಗೆ ಮನವಿ ಮಾಡಿದರು.

ಸೂಚನೆ ನೀಡದೆ ವಜಾ : ಬೌನ್ಸ್‌ ಕಂಪನಿ ವಿರುದ್ಧ ತಿರುಗಿಬಿದ್ದ ನೌಕರರು...

ಜತೆಗೆ ವಾರಸುದಾರರು ಇಲ್ಲದ ವಾಹನಗಳು ನಗರದ ರಸ್ತೆಗಳಲ್ಲಿ ಹತ್ತಾರು ವರ್ಷದಿಂದ ನಿಲ್ಲಿಸಲಾಗಿದೆ. ಈ ವಾಹನಗಳಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಈ ವಾಹನಗಳು ಅಕ್ರಮ ಚಟುವಟಿಕೆ ತಾಣಗಳಾಗಿವೆ ಎಂದು ಸದಸ್ಯರು ದೂರಿದರು.

ಅದಕ್ಕೆ ಉತ್ತರಿಸಿ ಸಂಚಾರಿ ಪೊಲೀಸ್‌ ಇಲಾಖೆಯ ಎಸಿಪಿ ರಂಗಸ್ವಾಮಿ, ಈಗಾಗಲೇ ಬೌನ್ಸ್‌ ಸೇರಿದಂತೆ ಇತರೆ ದ್ವಿಚಕ್ರ ವಾಹನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಬೌನ್ಸ್‌ ವಾಹನಗಳನ್ನು ಟೌಯಿಂಗ್‌ ಮಾಡಲಾಗುತ್ತಿದ್ದು, ಮಾಲಿಕರಿಂದ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!