ಮಲೆ ಮಹದೇಶ್ವರ ಬೆಟ್ಟದಲ್ಲಿ ಯಾರೊಬ್ಬರೂ ಮದ್ಯ ಸೇವಿಸಬಾರದು. ಮದ್ಯ ಮಾರಾಟ ಮತ್ತು ಮದ್ಯ ಸೇವಿಸಿದವರ ಮೇಲೆ ಕೇಸ್ ದಾಖಲಿಸುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಚಾಮರಾಜನಗರ (ಸೆ.27): ಮಲೆ ಮಹದೇಶ್ವರ ಬೆಟ್ಟದಲ್ಲಿ ಯಾವುದೇ ಮದ್ಯ ಮಾರಾಟದ ಅಂಗಡಿ ಅಥವಾ ಬಾರ್‌ಗಳು ಇಲ್ಲದಿದ್ದರೂ ಮದ್ಯಪಾನ ಮಾಡುವವರ (ಕಡಿತ) ಸಂಖ್ಯೆ ಹೆಚ್ಚಳವಾಗಿದೆ ಎಂಬ ದೂರು ಕೇಳಿಬಂದಿದೆ. ಇನ್ನುಮುಂದೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹದೇಶ್ವರ ಬೆಟ್ಟದಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಯಾವುದೇ ಮದ್ಯದಂಗಡಿ ಇಲ್ಲ. ಆದರೂ ಅಲ್ಲಿ ಮದ್ಯ ಹೇಗೆ ಸಿಗುತ್ತಿದೆ. ಇಂತಹ ಪ್ರಕರಣ ಕಂಡು ಬಂದರೆ ಪೊಲೀಸರು ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಕುಡಿಯಲು ಯಾರಿಗೂ ಅವಕಾಶ ಕೊಡಬಾರದು ಎಂದು ಖಡಕ್ ಸೂಚನೆ ನೀಡಿದರು. ಇದರ ಬೆನ್ನಲ್ಲೇ ಕೆಲವು ಪ್ರಕರಣ ದಾಖಲಿಸಿದ್ದೇವೆ ಎಂದು ಅಬಕಾರಿ ಡಿಸಿ ಉತ್ತರಿಸಿದರು. ಇದರಿಂದ ಏನು ಪ್ರಯೋಜನವಾಗುತ್ತದೆ ಎಲ್ಲದಕ್ಕೂ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
undefined
ಮೈಸೂರು ಮನೆಯಲ್ಲಿ 9 ಬಗೆಯ ಹಾವುಗಳ ಸಾಕಣೆ: ದಾಳಿ ಬೆನ್ನಲ್ಲೇ ಬೆಚ್ಚಿಬಿದ್ದ ನೆರೆಹೊರೆಯವರು
ಇನ್ನುಮುಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟಮತ್ತು ಮದ್ಯ ಸೇವನೆಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಹೋಟೆಲ್ ಹಾಗೂ ಇತರ ಸ್ಥಳಗಳಲ್ಲಿ ತಪಾಸಣೆ ಮಾಡಬೇಕು. ಮದ್ಯ ಮಾರಾಟದ ಬಗ್ಗೆ ಗುಪ್ತವಾಗಿ ಮಾಹಿತಿ ತಿಳಿದುಕೊಂಡು ದಾಳಿ ಮಾಡಬೇಕು. ಬೆಟ್ಟದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕೋದು ಕಷ್ಟ ಆಗುವುದಿಲ್ಲ ಎಂದು ಅಧಿಕಾರಿಗಳಿಗೆ ತರಾಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ 10 ಸ್ಥಾನಗೊಳಗೆ ತರಲು ಸವಾಲು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆಯನ್ನು 10ನೇ ಸ್ಥಾನಕ್ಕೆ ತಂದ್ರೆ ನಿನ್ನನ್ನ ಮತ್ತೊಂದು ವರ್ಷ ಇಲ್ಲೇ ಇರುಸ್ತೀನಿ ಡಿಡಿಪಿಐಗೆ ಆಫರ್ ನೀಡಿದರು. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಾಮರಾಜನಗರ ಇರುವ ಸ್ಥಾನಕ್ಕೆ ಬೇಸರ ವ್ಯಕ್ತಪಡಿಸಿ, 21ನೇ ಸ್ಥಾನದಿಂದ 10 ಸ್ಥಾನದೊಳಗೆ ತರುವಂತೆ ಸೂಚನೆ ನೀಡಿದರು. ರಾತ್ರಿ 8 ಗಂಟೆರ ವರೆಗೆ ಅಧಿಕಾರಿಗಳಿಗೆ ಕ್ಲಾಸ್ ತೆಗದುಕೊಂಡ ಸಿಎಂ ಸಿದ್ದರಾಮುಯ್ಯ ಅವರು ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಆರಂಭದಲ್ಲಿ ಚರ್ಚೆ ಮಾಡಿದರು. ನಂತರ ಕೃಷಿ, ಆಹಾರ, ವಿದ್ಯುತ್, ವೈದ್ಯಕೀಯ, ಅರಣ್ಯ, ಶಿಕ್ಷಣ ಸೇರಿ 15ಕ್ಕು ಹೆಚ್ಚು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್‌ಗಳು: ಬಿಎಸ್‌ವೈ ವಾಗ್ದಾಳಿ
ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಸರ್ಕಾರಿ ಕೆಲಸದ ಭರವಸೆ: ಚಾಮರಾಜನಗರ ಕೆಡಿಪಿ ಸಭೆಯಲ್ಲಿ ಆಕ್ಸಿಜನ್ ದುರಂತ ಪ್ರತಿಧ್ವನಿಸಿದ ಬೆನ್ನಲ್ಲಿಯೇ ಮೃತರ ಕುಟುಂಬಕ್ಕೆ ಖಾಯಂ ಉದ್ಯೋಗ ನೀಡವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನಡಿದರು. ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ಕೋವಿಡ್ ವೇಳೆ ಆಕ್ಸಿಜನ್ ದುರಂತದಲ್ಲಿ 32 ಜನ ಮೃತಪಟ್ಟಿದ್ದರು. ಅವರ ಮನೆಯವರಿಗೆ ಸರ್ಕಾರಿ ಉದ್ಯೋಗ ನೀಡಲು ಸೂಚನೆ ನೀಡಲಾಗಿತ್ತು. ಹೊರಗುತ್ತಿಗೆ ಉದ್ಯೋಗ ಕೊಡುವುದು ಬೇಡ, ಖಾಯಂ ಉದ್ಯೋಗ ನೀಡೋಣ ಅಂತ ಪ್ರಯತ್ನ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.