ವಿಜಯನಗರ ಜಿಲ್ಲೆ: ಹರುಷ ವ್ಯಕ್ತಪಡಿಸಿದ ಹೊಸಪೇಟೆ ಹುಡ್ಗ ಅಜೇಯ್‌ ರಾವ್‌

Kannadaprabha News   | Asianet News
Published : Dec 23, 2020, 12:29 PM IST
ವಿಜಯನಗರ ಜಿಲ್ಲೆ: ಹರುಷ ವ್ಯಕ್ತಪಡಿಸಿದ ಹೊಸಪೇಟೆ ಹುಡ್ಗ ಅಜೇಯ್‌ ರಾವ್‌

ಸಾರಾಂಶ

ವಿಜಯನಗರ ಜಿಲ್ಲೆಗೆ ಎಲ್ಲಾ ರೀತಿಯಾದ ಸಹಕಾರ ನೀಡುವುದರ ಜೊತೆಗೆ ಎಲ್ಲಾ ರೀತಿಯಾದ ಒಳ್ಳೆ ಕೆಲಸಕ್ಕೆ ಸದಾ ಕೈಜೊಡಿಸುತ್ತೇನೆ ಎಂದು ಸಚಿವ ಆನಂದ್‌ ಸಿಂಗ್‌ ಮುಖಾಂತರ ರಾಜ್ಯ ಕಂದಾಯ ಇಲಾಖೆಗೆ ಪತ್ರ ಬರೆದ ಚಿತ್ರನಟ ಅಜೇಯ್‌ ರಾವ್‌

ಹೊಸಪೇಟೆ(ಡಿ.23): ವಿಜಯನಗರ ಜಿಲ್ಲೆಗೆ ಒತ್ತಾಯಿಸಿ ಜಿಲ್ಲೆಯ ಅನುಮೋದನೆಗೆ ಶ್ರಮಿಸಿದ ಹೋರಾಟಗಾರರಿಗೆ ಚಂದನವನದ ಚಿತ್ರನಟ, ನಿರ್ಮಾಪಕ ಹೊಸಪೇಟೆಯ ಕೃಷ್ಣ ಅಜೇಯ್‌ ರಾವ್‌ ಅವರು ಅಭಿನಂದಿಸಿದ್ದಾರೆ. 

ಸುಂದರ, ಐತಿಹಾಸಿಕ ಹಿನ್ನೆಲೆಯುಳ್ಳ ಹೊಸಪೇಟೆಯಲ್ಲಿ ಹುಟ್ಟಿ ಬೆಳೆದಿರುವ ನಾನು ಹೆಮ್ಮೆ ಪಡುತ್ತೇನೆ. ಇಲ್ಲಿನ ನೆಲ ಶ್ರೀಮಂತಿಕೆಯ ಜೊತೆ ಪ್ರವಾಸೋದ್ಯಮ ವ್ಯವಹಾರಕ್ಕೂ ಹೆಸರುವಾಗಿಯಾಗಿದೆ. ಪಶ್ಚಿಮ ತಾಲೂಕುಗಳನ್ನು ಒಟ್ಟುಗೂಡಿಸಿ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆಯಾಗುವ ಸುದಿನಕ್ಕೆ ನಾನು ಸಹ ಕಾತುರನಾಗಿದ್ದೇನೆ.

 

ವಿಜಯನಗರ ಜಿಲ್ಲೆಗೆ ಎಲ್ಲಾ ರೀತಿಯಾದ ಸಹಕಾರ ನೀಡುವುದರ ಜೊತೆಗೆ ಎಲ್ಲಾ ರೀತಿಯಾದ ಒಳ್ಳೆ ಕೆಲಸಕ್ಕೆ ಸದಾ ಕೈಜೊಡಿಸುತ್ತೇನೆ ಎಂದು ಸಚಿವ ಆನಂದ್‌ ಸಿಂಗ್‌ ಅವರ ಮುಖಾಂತರ ರಾಜ್ಯ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

ವಿಜಯನಗರ ಜಿಲ್ಲೆಯ ಕುರಿತಂತೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಒಮ್ಮತ ಸಿಕ್ಕಿ ರಾಜ್ಯಪತ್ರದಲ್ಲೂ ಅಧಿಸೂಚನೆ ಸಿಕ್ಕಿದ್ದು, ಸದ್ಯ ಒಂದು ತಿಂಗಳ ಅವಕಾಶವನ್ನು ಅಕ್ಷೇಪಣೆ ಸಲ್ಲಿಕೆಗೆ ನೀಡಲಾಗಿದೆ. ವಿಜಯನಗರ ಜಿಲ್ಲೆ ಘೋಷಣೆ ಪರ ಮತ್ತು ವಿರೋಧ ಪತ್ರಚಳುವಳಿಗಳು ನಡೆಯುತ್ತಿವೆ. ಸಚಿವ ಆನಂದ ಸಿಂಗ್‌ ಅವರನ್ನು ಚಿತ್ರನಟ ಕೃಷ್ಣ ಅಜೇಯ್‌ ರಾವ್‌ ಅಭಿನಂದಿಸಿದ್ದಾರೆ. 
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!