ಬೀದರ್‌ಗೆ ರಾಹುಲ್ ಗಾಂಧಿ; ಈಶ್ವರ ಖಂಡ್ರೆಯಿಂದ ಸ್ಪೆಷಲ್ ಗಿಫ್ಟ್!

Published : Aug 13, 2018, 12:46 PM ISTUpdated : Sep 09, 2018, 08:55 PM IST
ಬೀದರ್‌ಗೆ ರಾಹುಲ್ ಗಾಂಧಿ; ಈಶ್ವರ ಖಂಡ್ರೆಯಿಂದ ಸ್ಪೆಷಲ್ ಗಿಫ್ಟ್!

ಸಾರಾಂಶ

ಈ ಹಿಂದೆ ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಬೀದರ್ ಗೆ ಆಗಮಿಸಿದ್ದರು.  ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಜೋರಾಗಿತ್ತು.  ಬೀದರ್ ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದಾಗ ಅವರಿಗೆ ಇಷ್ಟಲಿಂಗ ನೀಡಲಾಗಿತ್ತು.  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಪ್ರಮುಖ ರಾಗಿದ್ದ ಬಸವಲಿಂಗ ಪಟ್ಟದೇವರು ರಾಹುಲ್ ಗಾಂಧಿಗೆ ಇಷ್ಟಲಿಂಗ ನೀಡಿದ್ದರು.  ಅದಕ್ಕೆ ಕೌಂಟರ್ ನೀಡುವ ರೀತಿಯಲ್ಲಿ ಖಂಡ್ರೆ ಇಂದು ಸ್ಥಾವರ ಲಿಂಗ ನೀಡುತಿದ್ದಾರೆ. 

ಬೀದರ್ (ಆ. 13):  ರಾಹುಲ್ ಗಾಂಧಿ ಜನಧ್ವನಿ, ಅಭಿನಂದನಾ ಸಮಾವೇಶಕ್ಕೆ ಆಗಮಿಸುವ ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ ಬೀದರ್ ಗೆ ಆಗಮಿಸಲಿದ್ದಾರೆ. 

ರಾಹುಲ್ ಗಾಂಧಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ಥಾವರ ಲಿಂಗವನ್ನು ಕೊಡುಗೆಯಾಗಿ ನೀಡಲಿದ್ದಾರೆ.  ಸ್ಥಾವರ ಲಿಂಗ ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಸಾರುತ್ತವೆ.   ಅದಕ್ಕಾಗಿ ಅವರಿಗೆ ಸ್ಥಾವರ ಲಿಂಗ ನೀಡುತ್ತಿದ್ದೇವೆ ಎಂದಿದ್ದಾರೆ.  

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗ ಅದನ್ನ ಖಂಡ್ರೆ ವಿರೋಧಿಸಿದ್ದರು.  ಅಲ್ಲದೇ ಅವರು ವೀರಶೈವ ಲಿಂಗಾಯತ ಎರಡು ಒಂದೇ ಎಂದು ಹೇಳಿದ್ದರು.  ಈಗಲೂ ಅದನ್ನೆ ಸಾರುವ ನಿಟ್ಟಿನಲ್ಲಿ ರಾಹುಲ್ ಗಾಂಧಿಗೆ ಸ್ಥಾವರ ಲಿಂಗ ನೀಡುತ್ತಿದ್ದಾರೆ. 

ಈ ಹಿಂದೆ ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಬೀದರ್ ಗೆ ಆಗಮಿಸಿದ್ದರು.  ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಜೋರಾಗಿತ್ತು.  ಬೀದರ್ ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದಾಗ ಅವರಿಗೆ ಇಷ್ಟಲಿಂಗ ನೀಡಲಾಗಿತ್ತು.  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಪ್ರಮುಖ ರಾಗಿದ್ದ ಬಸವಲಿಂಗ ಪಟ್ಟದೇವರು ರಾಹುಲ್ ಗಾಂಧಿಗೆ ಇಷ್ಟಲಿಂಗ ನೀಡಿದ್ದರು.  ಅದಕ್ಕೆ ಕೌಂಟರ್ ನೀಡುವ ರೀತಿಯಲ್ಲಿ ಖಂಡ್ರೆ ಸ್ಥಾವರ ಲಿಂಗ ನೀಡುತಿದ್ದಾರೆ. 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ