ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ

Published : Aug 13, 2018, 12:33 PM ISTUpdated : Sep 09, 2018, 08:55 PM IST
ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ

ಸಾರಾಂಶ

ಏರ್ ಶೋ ಬೆಂಗಳೂರು ಬಿಟ್ಟು ಹೋಗದಂತೆ ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಸಂಸದರು ಪ್ರಯತ್ನ ಮಾಡುತ್ತೇವೆ.  ಡಿಸಿಎಂ ಪರಮೇಶ್ವರ ಹಾಗೂ ಸಚಿವ  ಡಿ.ಕೆ ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ.  ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರ ಬಗ್ಗೆ ಚರ್ಚೆ ಸರಿಯಲ್ಲ ಅಂತ ಕಾಂಗ್ರೆಸ್ ವಿರುದ್ಧ ಬಿ.ಎಸ್.ವೈ ಕಿಡಿ ಕಾರಿದ್ದಾರೆ. 

ಗದಗ (ಆ. 13):  ಏರ್ ಶೋ‌ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ ಎಂದು  ವಿಪಕ್ಷ ನಾಯಕ‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರು ಬಿಟ್ಟು ಹೋಗದಂತೆ ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಸಂಸದರು ಪ್ರಯತ್ನ ಮಾಡುತ್ತೇವೆ.  ಡಿಸಿಎಂ ಪರಮೇಶ್ವರ ಹಾಗೂ ಸಚಿವ  ಡಿ.ಕೆ ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ.  ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರ ಬಗ್ಗೆ ಚರ್ಚೆ ಸರಿಯಲ್ಲ ಅಂತ ಕಾಂಗ್ರೆಸ್ ವಿರುದ್ಧ ಬಿ.ಎಸ್.ವೈ ಕಿಡಿ ಕಾರಿದ್ದಾರೆ. 

ಸಿಎಂ ಭತ್ತ ನಾಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,  ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ.  ರಾಜಕೀಯ ದೊಂಬರಾಟ ಬಿಟ್ಟು  ರೈತರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಮಾಡಲಿ.  ಕೇವಲ ಒಂದು ಜಿಲ್ಲೆಯಲ್ಲಿ ನಾಟಿ ಮಾಡಿದ್ರೆ ರೈತರ ಸಮಸ್ಯೆ ಬಗೆಹರಿಯಲ್ಲ.  ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ.  ಸಿ.ಎಂ ಕುಮಾರಸ್ವಾಮಿ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲಿ ಎಂದು ಬಿಎಸ್ ವೈ ಹೇಳಿದ್ದಾರೆ. 
 

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!
ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ