ಕಾಂಗ್ರೆಸ್ಸಿನಿಂದ ಜನರ ಕಣ್ಣೀರು ಒರೆಸುವ ಕಾರ್ಯ: ಬಿ.ಕೆ. ಹರಿಪ್ರಸಾದ

Kannadaprabha News   | Asianet News
Published : Jul 17, 2021, 12:03 PM IST
ಕಾಂಗ್ರೆಸ್ಸಿನಿಂದ ಜನರ ಕಣ್ಣೀರು ಒರೆಸುವ ಕಾರ್ಯ: ಬಿ.ಕೆ. ಹರಿಪ್ರಸಾದ

ಸಾರಾಂಶ

* ಕಾಂಗ್ರೆಸ್‌ ಸಹಾಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿದ ಹರಿಪ್ರಸಾದ * ರಾಜ್ಯ ಸರ್ಕಾರವಾಗಿ ಜೀವಂತವಾಗಿದೆಯೇ ಇಲ್ಲೋ ಗೊತ್ತಿಲ್ಲ? * ಅಭಿವೃದ್ಧಿ ಕೆಲಸಗಳಿಗೆ ಬಿಡಿಗಾಸು ನೀಡದ ಬಿಜೆಪಿ ಸರ್ಕಾರ

ದಾಂಡೇಲಿ(ಜು.17): ಕಾಂಗ್ರೆಸ್‌ ಪ್ರತಿಯೊಬ್ಬ ನಾಗರಿಕರನ ಕಣ್ಣೀರು ಒರೆಸುವ ಗುರಿ ಹೊಂದಿದ್ದು ಮಹಾತ್ಮ ಗಾಂಧೀಜಿ ಅವರ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ. 

ಅವರು ನಗರದ ಸಯ್ಯದ್‌ ಸಮುದಾಯದ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸಹಾಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊರೋನಾ ಸೋಂಕಿನಿಂದ ಬಳಲಿದ ದೇಶದ ಪ್ರತಿಯೊಬ್ಬ ಪ್ರಜೆಯ ಮನೆಗೆ ಭೇಟಿ ಅವರಿಗೆ ಸಹಾಯ ಹಸ್ತ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊರೋನಾ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಜನರಿಗೆ ಉತ್ತಮ ಸೇವೆ ಹಾಗೂ ಜೀವರಕ್ಷಣೆಯ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಹೀಗಾಗಿ ದೇಶದ ಬಹುತೇಕ ಜನರು ಈ ಸರ್ಕಾರಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.

ಚೇರ್‌ಗಾಗಿ ಬಿಜೆಪಿಯಲ್ಲಿ ಕಿತ್ತಾಟ: ಬಿ.ಕೆ.ಹರಿಪ್ರಸಾದ

ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿ, ರಾಜ್ಯ ಸರ್ಕಾರವಾಗಿ ಜೀವಂತವಾಗಿದೆಯೇ ಇಲ್ಲೋ ಗೊತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಬಿಡಿಗಾಸು ನೀಡುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ದೂರಿದರು.

ಈ ವೇಳೆ ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ, ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನಾಗರಾಜ ನಾರ್ವೇಕ್ರ, ವಿ.ಎಸ್‌. ಆರಾಧ್ಯ, ಬಸವರಾಜ ದೊಡ್ಡಮನೆ, ದಾಂಡೇಳಿ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ವಿ.ಆರ್‌. ಹೆಗಡೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.
 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ