ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡುತ್ತಿರುವ ರೈತರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಇಂದು ಭೇಟಿ ಮಾಡಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನೀರ್ದಿಷ್ಟ ಕಾಲಾವಧಿಯವರೆಗೆ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಮನವೊಲಿಕೆಗೆ ಮುಂದಾದರು.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಸೆ.27): ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡುತ್ತಿರುವ ರೈತರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಇಂದು ಭೇಟಿ ಮಾಡಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನೀರ್ದಿಷ್ಟ ಕಾಲಾವಧಿಯವರೆಗೆ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಮನವೊಲಿಕೆಗೆ ಮುಂದಾದರು. ಧರಣಿ ಸ್ಥಳಕ್ಕೆ ಬೇಟಿ ನೀಡಿದ ಕೃಷಿ ಸಚಿವ ಬಿಸಿ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ,ಧರಣಿ ಕೈ ಬಿಡುವಂತೆ ರೈತರಿಗೆ ಮನವಿ ಮಾಡಿದರು.ರೈತರ ಬೇಡಿಕೆಯನ್ನ ಸಿಎಂ ಜೊತೆ ಮಾತಾಡಿ ಪರಿಹರಿಸುವ ಭರವಸೆ ನೀಡಿದರು. ಸಚಿವದ್ವಯರ ಮನವಿ ನಿರಾಕರಿಸಿದ ರೈತರಿಂದ ಧರಣಿ ಮುಂದುವರೆಯಿತು. ಇದೇ ವೇಳೆ ರೈತರು ಕೃಷಿ ಸಚಿವರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಏರು ಧ್ವನಿಯಲ್ಲಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿಗೆ ನಿಧಾನವಾಗಿ ಮಾತನಾಡಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದರು.ಸಾಹೇಬ್ರು ಹೊರಟಿದ್ದಾರೆ ಎಂದ ರೈತ ಮುಖಂಡನ ಮಾತಿಗೆ ಗರಂ ಆದ ಸಚಿವರು,ರೈತರ ಪರವಾಗಿ ಹೋರಾಟ ಮಾಡಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ , ನಾನು ಓಡಿ ಹೋಗುವ ಪ್ರಶ್ನೆಯೆ ಇಲ್ಲ ಎಂದು ಕೋಪ ಗೊಂಡರು.
undefined
ಕೆಂಪಣ್ಣ ಹೇಳಿಕೆ ಕಾಂಗ್ರೆಸ್ ಪ್ರಾಯೋಜಿತ: ಸಚಿವ ಬಿಸಿ ಪಾಟೀಲ್
ಕಲಬುರಗಿ: ಪರ್ಸೆಂಟೇಜ್ ವಿಚಾರದಲ್ಲಿ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಕಲಬುರಗಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಯಾರೋ ಒಬ್ಬ ತಲೆಪಟ್ಟಿಇಲ್ಲದವನು ನೀಡುವ ಆಧಾರ ರಹಿತ ಹೇಳಿಕೆಗೆ ಯಾರೂ ಮಹತ್ವದ ಕೊಡಬಾರದು, ಇದು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ಹೇಳಿದ್ದಾರೆ.
ಕೆಂಪಣ್ಣ ಸಿದ್ದರಾಮಯ್ಯನವರ ಮನೆಗೆ ಹೋಗಿ ಹೊರಗಡೆ ಬಂದು ಈ ರೀತಿ ಹೇಳಿಕೆ ಕೊಡುತ್ತಾನೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ, ಕಳೆದ ಒಂದು ವಾರದಲ್ಲಿ ಸಿದ್ದರಾಮಯ್ಯನವರ ಇಮೇಜ್ ಪೂರ್ತಿ ಡೌನ್ ಆಗಿದೆ. ಅದನ್ನ ಪರಿಪಡಿಸುವುದಕ್ಕೋಸ್ಕರ ಕೆಂಪಣ್ಣನ ಮನೆಗೆ ಕರೆಸಿಕೊಂಡು ಈ ರೀತಿ ಹೇಳಿಕೆ ಕೊಡಿಸಿದ್ದಾರೆ, ಅವನ್ಯಾವ ದೊಡ್ಡ ಘನಂದಾರಿ ಲೀಡರ್? ಎಂದು ಪ್ರಶ್ನಿಸಿದರು.
ರೈತರೇ ಆಧುನಿಕ, ವೈಜ್ಞಾನಿಕ ಕೃಷಿಯತ್ತ ಚಿತ್ತ ಹರಿಸಿ: ಸಚಿವ ಬಿ.ಸಿ.ಪಾಟೀಲ್
ಕೆಂಪಣ್ಣನ ಹೇಳಿಕೆಯಲ್ಲಿ ಯಾವುದೇ ಆಧಾರಗಳಿಲ್ಲ, ಆತನ ವಿರುದ್ಧ ಮಾನನಷ್ಟಮೊಕದ್ದಮೆ ಹಾಕುತ್ತೇವೆ. ಎಲ್ಲಾ ಶಾಸಕರು ಅಂತಾನೆ ಅವರು ಹೇಳಿದ್ದಾರೆ ಹಾಗಾದ್ರೆ ಅದರಲ್ಲಿ ಸಿದ್ದರಾಮಯ್ಯ, ಪರಮೇಶ್ವರ, ರಮೇಶ ಕುಮಾರ ಕೂಡ ಸೇರಿಕೊಂಡಿದ್ದಾರೆ ಅಂದಂಗಾಯ್ತು. ಆ ಮನುಷ್ಯ ಮಾನಸಿಕ ಸ್ಥಿತಿ ಮಿತ ಕಳೆದುಕೊಂಡಿದ್ದಾನೆ. ಆತನಿಗೆ ಮೆಂಟಲ್ ಹಾಸ್ಪಿಟಲ್ಗೆ ಸೇರಿಸುವುದು ಬಹಳ ಸೂಕ್ತ ಎಂದರು.
ಮೀನುಗಾರರಂತೆ ರೈತರಿಗೂ ಡಿಸೇಲ್ ಸಬ್ಸೀಡಿ, ಎಕರೆಗೆ 10 ಲೀ: ಬಿಸಿ ಪಾಟೀಲ್
ಸಿದ್ರಾಮಯ್ಯನವರನ್ನ ಜನ ಈಗಾಗಲೇ ಒಂದ್ಕಡೆ ಖಾಲಿ ಮಾಡಿಸಿದ್ದಾರೆ, ಆ ಭಾಗ್ಯ ಈ ಭಾಗ್ಯ ಕೊಟ್ಟಿದ್ದೀನಿ ಅಂದ್ರೂ ಜನ ಜಾಗ ಖಾಲಿ ಮಾಡಿಸಿದ್ದಾರೆ. ನಮ್ಮ ಸರ್ಕಾರವೇ ಹಲವಾರು ಜನಪರ ಯೋಜನೆಗಳನ್ನ ಕೊಟ್ಟಿದೆ. ಈ ಕಾಂಗ್ರೆಸ್‌ನವರು ನಮಗೇನು ಜಾಗ ಖಾಲಿ ಮಾಡಿಸೋದು? ಬಿಜೆಪಿನೇ ಬೇಕು ಅಂತ ಈಗಾಗಲೇ ಜನ ತೀರ್ಮಾನಿಸಿದ್ದಾರೆಂದು ಬಿಸಿ ಪಾಟೀಲ್ ಸಿದ್ದರಾಮಯ್ಯನವರ ಜನಪರ ಕೆಲಸ ಮಾಡಿ ಇಲ್ಲಾಂದ್ರೆ ಜಾಗ ಖಾಲಿಮಾಡಿ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಮೇಲಿನಂತೆ ಹೇಳಿದರು.