Indefinite Strike: ಬೆಂಗ್ಳೂರಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ?

By Kannadaprabha NewsFirst Published Dec 25, 2021, 12:24 PM IST
Highlights

*  ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ಡಿ.31ರಿಂದ ಗುತ್ತಿಗೆದಾರರ ಮುಷ್ಕರ
*  ಕಸ ವಿಲೇವಾರಿ ಸ್ಥಗಿತ
*  ಕರ್ನಾಟಕ ಬಂದ್‌ಗೆ ಕಸ ವಿಲೇವಾರಿ ಗುತ್ತಿಗೆದಾರರ ಸಂಘ ಸಂಪೂರ್ಣ ಬೆಂಬಲ
 

ಬೆಂಗಳೂರು(ಡಿ.25): ಕಸ ವಿಲೇವಾರಿ ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್‌ ಪಾವತಿ ಮಾಡುವಂತೆ ಆಗ್ರಹಿಸಿ ಕಸ ವಿಲೇವಾರಿ ಗುತ್ತಿಗೆದಾರರು ಡಿ.31ರಿಂದ ಕಸ ವಿಲೇವಾರಿ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ(Strike) ಮುಂದಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಕಸ ಸಮಸ್ಯೆ ಬೆಂಗಳೂರಿಗರನ್ನು(Bengaluru) ಕಾಡಲಿದೆ.

ಬಾಕಿ ಇರುವ ಹಣ ಪಾವತಿಸುವಂತೆ ಅನೇಕ ಬಾರಿ ಬಿಬಿಎಂಪಿಗೆ(BBMP) ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಡಿ.31ರಿಂದ ಕಸ ವಿಲೇವಾರಿ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ(Indefinite Strike) ನಡೆಸಲು ತೀರ್ಮಾನಿಸಿದ್ದೇವೆ. ಒಂದೆರಡು ದಿನ ಕಸ ತೆಗೆಯದಿದ್ದರೆ ನಗರ ಯಾವ ಪರಿಸ್ಥಿತಿಗೆ ಬರುತ್ತದೆ ಎನ್ನುವುದನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಮುಷ್ಕರ ಕೈಗೊಂಡಿದ್ದೇವೆ. ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಬೇರ್ಪಡಿಸದೆ ತ್ಯಾಜ್ಯ ನೀಡುವವರಿಗೆ ದಂಡ : ಲೋಕಾಯುಕ್ತ ಸೂಚನೆ

ಕಸ ವಿಲೇವಾರಿ ಮಾತೇ ಇಲ್ಲ:

ಕಳೆದ ಬಾರಿ ಬಿಬಿಎಂಪಿ ಅಧಿಕಾರಿಗಳು ಕೊಟ್ಟಂತಹ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದು ಕಸ ವಿಲೇವಾರಿ(Garbage Disposal) ಕಾರ್ಯ ಕೈಗೊಂಡಿದ್ದೆವು. ಆದರೆ, ಈ ಬಾರಿ ನಮ್ಮ ಬೇಡಿಕೆ(Demand) ಈಡೇರುವವರೆಗೆ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲಾ ಗುತ್ತಿಗೆದಾರರು ಹಾಗೂ ಕಸ ಸಾಗಿರುವ ಲಾರಿ ಚಾಲಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಸಮಸ್ಯೆಯನ್ನು ಬಿಬಿಎಂಪಿ ಬಗೆಹರಿಸುವವರೆಗೂ ನಗರದಲ್ಲಿ ಕಸ ವಿಲೇವಾರಿ ಮಾಡುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಡಿ.31ರಂದು ವಿವಿಧ ಕನ್ನಡಪರ ಸಂಘಟನೆಗಳು(Kannada Organizations) ಎಂಇಎಸ್‌(MES) ನಿಷೇಧಿಸುವಂತೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ(Karnataka Bandh) ಕಸ ವಿಲೇವಾರಿ ಗುತ್ತಿಗೆದಾರರ ಸಂಘ ಸಂಪೂರ್ಣ ಬೆಂಬಲ(Support) ವ್ಯಕ್ತಪಡಿಸಿದ್ದು, ಹೋರಾಟದಲ್ಲಿ ಭಾಗಹಿಸಲಿದೆ ಎಂದು ಹೇಳಿದರು.

ಜ.9ರಿಂದ ಪೌರ ಕಾರ್ಮಿಕರ ಪ್ರತಿಭಟನೆ

ಬಿಬಿಎಂಪಿ ವ್ಯಾಪ್ತಿಯ 17 ಸಾವಿರ ಗುತ್ತಿಗೆ ಪೌರ ಕಾರ್ಮಿಕರು(Contract Based Civilian Workers) ಸೇರಿದಂತೆ ರಾಜ್ಯದ(Karnataka) ಒಟ್ಟು 35 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ(Permanent) ಮಾಡಬೇಕು. ಆಟೋ ಟಿಪ್ಪರ್‌ ಚಾಲಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರಾಗಿ ನಿವೃತ್ತಿ ಹೊಂದಿರುವವರಿಗೆ 10 ಲಕ್ಷ ರು. ಮತ್ತು ಪೌರ ಕಾರ್ಮಿಕರಾಗಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿ ಜ.9ರಿಂದ ಕರ್ನಾಟಕ ರಾಜ್ಯ ನಗರ ಸಭೆ, ಪುರಸಭೆ ಮಹಾ ಸಂಘ ಅಧ್ಯಕ್ಷ ಮೈಸೂರು ನಾರಾಯಣ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಬೆಂಗಳೂರು ಅಧ್ಯಕ್ಷ ಮುತ್ಯಾಲಪ್ಪ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಹಬ್ಬದ ಎಫೆಕ್ಟ್: ಗಬ್ಬೆದ್ದು ನಾರುತ್ತಿರುವ ಬೆಂಗ್ಳೂರು..!

ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು

ಬೆಳಗಾವಿ: ಬೆಂಗಳೂರಿನ ಪ್ರಮುಖ ಆರ್ಟೀರಿಯಲ್‌ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್‌ ಹಿಸ್ಟರ್‌ ನಿರ್ವಹಣೆ ಮಾಡಬೇಕು. ನಗರದ ಬೀದಿ ದೀಪಗಳಿಗೆ ಎಲ್‌ಇಡಿ ಲೈಟ್‌ ಅಳವಡಿಸಲು ಮರು ಟೆಂಡರ್‌ ಆಗುವವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡಬೇಕೆಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು. 

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌(Congress) ಸದಸ್ಯ ಪಿ.ಆರ್‌.ರಮೇಶ್‌(PR Ramesh) ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಪದೇ ಪದೇ ರಿಪೇರಿ ಮಾಡುತ್ತಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಆರ್ಟೀರಿಯಲ್‌ ರಸ್ತೆಗಳಲ್ಲಿ ನಡೆಯುವ ಕಾಮಗಾರಿಗಳ ಹಿಸ್ಟರಿ ನಿರ್ವಹಣೆಗೆ ಈಗಾಗಲೇ ಆಯುಕ್ತರಿಗೆ ಸೂಚಿಸಲಾಗಿದೆ. ಸ್ಮಾರ್ಟ್‌ ಸಿಟಿ(Smartcity) ಯೋಜನೆಯಡಿ ಹಲವಾರು ಯೋಜನೆಗಳು ನಡೆಯುತ್ತಿದ್ದು, ಈ ಬಗ್ಗೆ ಪೂರ್ಣ ವಿವರದ ನಾಲ್ಕು ಸಾವಿರ ಪುಟಗಳ ಉತ್ತರವನ್ನು ಸಿಟಿಯಲ್ಲಿ ಒದಗಿಸಲಾಗಿದೆ. ಇದನ್ನು ಪರಿಶೀಲಿಸಿ ಸದಸ್ಯರು ಯಾವುದೇ ಸಲಹೆಗಳಿದ್ದರೆ ನೀಡಬಹುದು ಎಂದು ತಿಳಿಸಿದ್ದರು. 
 

click me!