* ‘ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯ್ತಿ
* ಚಿತ್ರ ವೀಕ್ಷಣೆ ಬಳಿಕ ಸಿಎಂ ಘೋಷಣೆ
* ಈ ನಿರ್ಧಾರ ಕೈಗೊಂಡ 3ನೇ ರಾಜ್ಯ
ಬೆಂಗಳೂರು (ಮೇ 14) ಸದ್ಯ ಬಹುದೊಡ್ಡ ಚರ್ಚೆಯಲ್ಲಿರುವ 'ದಿ ಕಾಶ್ಮೀರ ಫೈಲ್ಸ್' (The Kashmir Files) ಚಿತ್ರಕ್ಕೆ ಕರ್ನಾಟಕದಲ್ಲಿಯೂ (Karnataka) ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ.
ಚಿತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವೀಕ್ಷಣೆ ಮಾಡಿದ ನಂತರ ತೆರಿಗೆ ವಿನಾಯಿತಿ ಘೋಷಿಸಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶ, ಗುಜರಾತ್ ಗಳು ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದವು. ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಚಿತ್ರ ವೀಕ್ಷಣೆ ಮಾಡುತ್ತ ಭಾವುಕರಾಗಿದ್ದರು
ಕಾಶ್ಮೀರಿ ಪಂಡಿತರು ತಮ್ಮ ನೆಲದಿಂದ ವಲಸೆ ಹೋಗುವಂತೆ ಮಾಡಿದ ಪರಿಸ್ಥಿತಿಯ ಕುರಿತ ಚಿತ್ರದಲ್ಲಿ ಹಲವು ಸತ್ಯಗಳು ಅಡಗಿವೆ. ಕಾಶ್ಮೀರ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತ ನೈಜ ಘಟನೆಗಳ ಆಧಾರಿತವಾಗಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಅಭಿನಯಿಸಿದ್ದು ಮೆಚ್ಚುಗೆ ಪಡೆದುಕೊಳ್ಳುವುದರ ಜತೆಗೆ ಚರ್ಚೆ ಹುಟ್ಟುಹಾಕುತ್ತಿದೆ.
The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
ಕಾಶ್ಮೀರಿ ಪಂಡಿತರ ನೋವು, ಉಗ್ರರ ಕೃತ್ಯಗಳಿಂದ ತೊಂದರೆಗೆ ಒಳಗಾದ ಜನರ ಕುರಿತು ಚಿತ್ರಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಲನಚಿತ್ರಕ್ಕೆ ಗುಜರಾತ್, ಹರಿಯಾಣ ಬಳಿಕ ಇದೀಗ ಕರ್ನಾಟಕದಲ್ಲೂ ಶೇ.100ರಷ್ಟುತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಭಾನುವಾರ ನಗರದ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಈ ಚಿತ್ರ ವೀಕ್ಷಿಸಿದ ಬಳಿಕ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೆರಿಗೆ ವಿನಾಯಿತಿ ಘೋಷಿಸಿದರು.
ಚಿತ್ರ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಲನಚಿತ್ರ ನೋಡಿದ ಮೇಲೆ ಮಾತನಾಡಲು ಆಗುತ್ತಿಲ್ಲ. ಯಾವ ಪರಿಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿ ಆಯ್ತು. ಅದೆಷ್ಟೋ ಜನ ಉಗ್ರರ ದಾಳಿಗೆ ಬಲಿಯಾಗಿದ್ದರು. ಇದೆಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರ ವೀಕ್ಷಿಸಬೇಕು ಎಂದು ತಿಳಿಸಿದರು.
ಭಟ್ಖಳದಲ್ಲಿ ಪ್ರತಿಭಟನೆ: ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೀತಿದೆ ಎಂದು ಸದಾ ಸುಳ್ಳು ಬೊಗಳುವ ಎಡಪಂಥೀಯ ಬುದ್ಧಿಜೀವಿಗಳ ಮುಖಕ್ಕೆ ಹೊಡೆದಂತಿರುವ ದಿ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರದ ಬಗ್ಗೆ ಈಗಾಗಲೇ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ. ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರ, ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿದ ಮೊದಲ ಪ್ರಯತ್ನ ಎಂಬಂತಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ.
ಉತ್ತರ ಕನ್ನಡದ ಭಟ್ಕಳ (Bhatkal) ತಾಲೂಕಿನಲ್ಲಿ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ನಗರದ ಪುಷ್ಪಾಂಜಲಿ (Pushpanjali) ಚಿತ್ರಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರದರ್ಶನಗೊಳ್ಳುತ್ತಿದ್ದ "ರಾಧೆ ಶ್ಯಾಮ್" (Radhe Shaym) ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಕಾಶ್ಮೀರಿ ಪಂಡಿತರ ಕಣ್ಣೀರಿನ ನೈಜ ಕಥೆಯಾಗಿರುವ, ದೇಶದ ಜನರಿಗೆ ಇದರ ಇತಿಹಾಸವನ್ನು ಮರೆಮಾಚಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ (Hindu Activist) ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.