Bengaluru: ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದ ಬಿಎಂಟಿಸಿ, ಬಸ್‌ ಹತ್ತೋ ಮುನ್ನ ಚಿಲ್ಲರೆ ಕೈಯಲ್ಲಿರಲಿ!

By Santosh Naik  |  First Published Jan 4, 2025, 7:16 PM IST

ರಾಜ್ಯ ಸಾರಿಗೆ ನಿಗಮಗಳ ಬಸ್ ದರ ಏರಿಕೆಗೆ ಸರ್ಕಾರದ ಅನುಮೋದನೆ ದೊರೆತಿದ್ದು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಮಧ್ಯರಾತ್ರಿಯಿಂದ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಅನ್ವಯವಾಗಲಿದ್ದು, 15% ರಷ್ಟು ಟಿಕೆಟ್ ದರ ಏರಿಕೆಯಾಗಿದೆ.


ಬೆಂಗಳೂರು (ಜ.4): ರಾಜ್ಯದಲ್ಲಿ ಸಾರಿಗೆ ನಿಗಮಗಳು ಬಸ್‌ ದರ ಏರಿಕೆ ಮಾಡುವ ಪ್ರಸ್ತಾಪಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕ ಬೆನ್ನಲ್ಲಿಯೇ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ತಮ್ಮ ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಸರ್ಕಾರದ ಆದೇಶದಂತೆ 15% ಟಿಕೆಟ್ ದರ ಏರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ನೂತನ ದರ ಜಾರಿಯಾಗಲಿದೆ ಎಂಧು ತಿಳಿಸಿದೆ. ಹೊಸ ಬಸ್‌ ದರಗಳಲ್ಲಿ ರೌಂಡ್‌ ಆಫ್‌ ಕಡಿಮೆ ಇರುವ ಕಾರಣ, ಬಸ್‌ ಹತ್ತೋ ಮುನ್ನ ಕೈಯಲ್ಲಿ ಚಿಲ್ಲರೆ ಹಿಡಿದುಕೊಂಡೇ ಏರಿದರೆ, ಕಂಡಕ್ಟರ್‌ ಜೊತೆ ಗಲಾಟೆ ಮಾಡಿಕೊಳ್ಳೋದು ತಪ್ಪಲಿದೆ. ಈ ಮೊದಲು ಒಂದು ಸ್ಟೇಜ್ ಗೆ 5 ರೂಪಾಯಿಯನ್ನು ಬಿಎಂಟಿಸಿ ಚಾರ್ಜ್‌ ಮಾಡುತ್ತಿತ್ತು. ಇದನ್ನೀಗ 6 ರೂಪಾಯಿಗೆ ಏರಿಕೆ ಮಾಡಲಾಗಿದೆ. 2 ಸ್ಟೇಜ್  ಟಿಕೆಟ್ ದರವನ್ನ 10 ರೂಪಾಯಿಯಿಂದ 12 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಏರ್ಪೋಟ್ ಬಿಎಂಟಿಸಿ ಬಸ್ ಟಿಕೆಟ್ ರೇಟ್ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಏರ್ಪೋಟ್ ಗೆ ವಾಯುವಜ್ರ ಎಸಿ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಹೀಗಾಗಿ 15% ದರ ಏರಿಕೆಗೆ ಜಿಎಸ್‌ಟಿ ಕೂಡ ಹಾಕಲಾಗಿದೆ. ಟೋಲ್ ದರ ಸೇರಿ ಟಿಕೆಟ್ ರೇಟ್ ಹೆಚ್ಚಳ. ಏರ್ಪೋಟ್ ನಿಂದ ಮೆಜೆಸ್ಟಿಕ್ ಗೆ  250 ರೂಪಾಯಿ ಇದ್ದ ದರ 290 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

Tap to resize

Latest Videos


ಬಿಎಂಟಿಸಿ ಹಳೆಯ ಮತ್ತು ಪರಿಷ್ಕೃತ ದರ ಪಟ್ಟಿ

1-ಮೆಜೆಸ್ಟಿಕ್ ಟು ಜೆ.ಪಿ ನಗರ ಹಿಂದಿನ ದರ- 20 ರುಪಾಯಿ ಪರಿಷ್ಕೃತ ದರ- 24 ರುಪಾಯಿ

2-ಮೆಜೆಸ್ಟಿಕ್ ಟು ನಂದಿನಿ ಲೇಔಟ್ ಸದ್ಯ- 25 ಹೊಸ ದರ- 28 ರುಪಾಯಿ

3-ಮೆಜೆಸ್ಟಿಕ್ ಟು ಯಶವಂತಪುರ ರೈಲ್ವೆ ಸ್ಟೇಷನ್ ಸದ್ಯ- 20 ಹೊಸ ದರ- 23

4-ಮೆಜೆಸ್ಟಿಕ್ ಟು ಪೀಣ್ಯ ಎರಡನೇ ಹಂತ ಸದ್ಯದ ದರ- 25 ಹೊಸ ದರ- 28

5-ಮೆಜೆಸ್ಟಿಕ್ ಟು ಅತ್ತಿಬೆಲೆ ಸದ್ಯ- 25 ಹೊಸ ದರ- 30

6-ಮೆಜೆಸ್ಟಿಕ್ ಟು ವಿದ್ಯಾರಣ್ಯಪುರ ಸದ್ಯದ ದರ- 25 ಹೊಸ ದರ- 28 

7-ಮೆಜೆಸ್ಟಿಕ್ ‌ಟು ದೊಡ್ಡಬಳ್ಳಾಪುರ ಸದ್ಯದ ದರ-  25 ಹೊಸ ದರ- 30 

8-ಮೆಜೆಸ್ಟಿಕ್ ಟು ಬಿಇಎಂಎಲ್ 5 ನೇ ಹಂತ- ಸದ್ಯ- 20 ಹೊಸ ದರ- 24 

9-ಮೆಜೆಸ್ಟಿಕ್ ಟು ಕುಮಾರಸ್ವಾಮಿ ಲೇಔಟ್ ಸಸ್ಯದ ದರ- 25 ಹೊಸ ದರ- 28 

10- ಮೆಜೆಸ್ಟಿಕ್ ಟು ಬಿಟಿಎಂ ಲೇಔಟ್ ಸದ್ಯ- 25 ಹೊಸ- 28

ಏರ್‌ಪೋರ್ಟ್‌ಗೆ ತೆರಳುವ ಬಿಎಂಟಿಸಿ ಬಸ್‌ ದರ:

click me!